Crime News: ಅಳಿಯನ ಮನೆಯ ತಲಬಾಗಿಲಿಗೆ ನೇಣು ಹಾಕಿಕೊಂಡ ಮಾವ!

By Suvarna NewsFirst Published Dec 9, 2021, 4:48 PM IST
Highlights

* ಅಳಿಯನ ಮನೆ ಮುಂದೆ ನೇಣು ಹಾಕಿಕೊಂಡ ಮಾವ!
* ಮಗಳ ತಿಂಗಳ ತಿಥಿ ಮಾಡಲು ಬಂದಿದ್ದ ಅಪ್ಪ ಅಳಿಯನ ಮನೆ ಬಾಗಿಲಿಲ್ಲಿಯೇ ಆತ್ಮಹತ್ಯೆ
* ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದ ಘಟನೆ

ಹಾಸನ, (ಡಿ.09); ಮಗಳ(Daughter) ತಿಂಗಳ ತಿಥಿ ಮಾಡಲು ಬಂದಿದ್ದ ಅಪ್ಪ ಅಳಿಯನ ಮನೆ ಬಾಗಿಲಿಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ(suicide) ಮಾಡಿಕೊಂಡ ಘಟನೆ ನಡೆದಿದೆ. 

ಹಾಸನ(Hassan) ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಆತ್ಮಹತ್ಯೆ ಮಾಡಿಕೊಂಡವರು. 

Family Suicide: ಮಂಗ್ಳೂರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಅಕ್ಟೋಬರ್ 30ರಂದು ಸಾವನ್ನಪ್ಪಿದ್ದ ಮಗಳು ಹೇಮಶ್ರೀಯ ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಆಗಮಿಸಿದ್ದರು. ಆದರೆ ಮನೆಗೆ ಬೀಗ ಹಾಕಿಕೊಂಡು ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ಹೊರಹೋಗಿದ್ದರು. ಬೆಳಿಗ್ಗೆಯಿಂದ ಕಾದಿದ್ದ ನಾಗರಾಜ್ ಬಳಿಕ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಮಗಳ ಸಾವಿಗೆ ಪ್ರವೀಣ್, ಅತ್ತೆ ಭದ್ರಮ್ಮ, ಸೋಮಣ್ಣ ಕಾರಣ ಎಂದು ವಿಡಿಯೋದಲ್ಲಿ ದೂರಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಕೊಂದಿದ್ದಾರೆ. ನನಗೆ, ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾರಿಗೂ ಆಗಬಾರದು ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

Suicide Case: ಪ್ರತ್ಯೇಕ ಘಟನೆ, ಯುವತಿ, ಯುವಕ, ಯೋಧ ಆತ್ಮಹತ್ಯೆ

ಒಂದೂವರೆ ವರ್ಷದ ಹಿಂದೆ ಮಾಳೆಗೆರೆ ಗ್ರಾಮದ ಪ್ರವೀಣ್‌-ಹೇಮಶ್ರೀ ವಿವಾಹ ನಡೆದಿತ್ತು. 1.50 ಲಕ್ಷ ನಗದು, 40 ಗ್ರಾಂ‌ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದ ಪ್ರವೀಣ್ ಮದುವೆಯಾದಗಿನಿಂದಲೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. 

ಅತ್ತೆ ಭದ್ರಮ್ಮ ಗರ್ಭಿಣಿಯಾಗಿದ್ದ ಹೇಮಶ್ರೀಯನ್ನು ತವರು ಮನೆಗೆ ಕಳುಹಿಸಿದ್ದರು. ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿತ್ತು. ಇದಾದ ಎರಡೇ ದಿನಗಳ ಬಳಿಕ ಹೇಮಶ್ರೀ ಸಾವನ್ನಪ್ಪಿದ್ದಳು. ಗಂಡನ ಊರು ಮಾಳೆಗೆರೆಯಲ್ಲಿ ಹೇಮಶ್ರೀ ಅಂತ್ಯಕ್ರಿಯೆ ನಡೆಸಲಾಗುತ್ತು. 11ನೇ ದಿನದ ತಿಥಿ ಕಾರ್ಯದ ಬಳಿಕ ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿದ್ದರು. ವರದಕ್ಷಿಣೆಯಾಗಿ ನೀಡಿದ್ದ ಹಣ, ಒಡವೆಯನ್ನು ತಿಂಗಳ ತಿಥಿಯಂದು ವಾಪಾಸ್ ನೀಡುವಂತೆ ತೀರ್ಮಾನ ಮಾಡಿದ್ದರು. ಇದಕ್ಕೆ ಪ್ರವೀಣ್ ಹಾಗೂ ತಾಯಿ ಭದ್ರಮ್ಮ ಒಪ್ಪಿದ್ದರು.

ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಬುಧವಾರ ಆಗಮಿಸಿದ್ದಾರೆ. ಎಲ್ಲಾ ಸಾಮಗ್ರಿಗಳನ್ನು ತಂದಿದ್ದರು. ಆದರೆ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದ ಪ್ರವೀಣ್ ಮಧ್ಯಾಹ್ನದವರೆಗೂ ವಾಪಸ್ ಆಗಿರಲಿಲ್ಲ. ಅಳಿಯನ ಮನೆ ಮುಂದೆಯೇ ಕಾಯುತ್ತಿದ್ದ ನಾಗರಾಜ್ ಬಾಗಿಲು‌ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು,  ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯರು ವಂಚಿಸುತ್ತಿದ್ದವರ ಬಂಧನ
 ಪೂಜೆ ನೆಪದಲ್ಲಿ ಚಿನ್ನ ಪಡೆದು ಮಹಿಳೆಯರು ಹಾಗೂ ಯುವತಿಯರನ್ನು ವಂಚಿಸುತಿದ್ದ ಮೂವರು ಆರೋಪಿಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಯುವತಿ ಸೇರಿದಂತೆ ಹಲವರಿಗೆ ವಂಚನೆ ಆರೋಪ ಹೊತ್ತಿರುವ ಹುಬ್ಬಳ್ಳಿಯ ಬಂಡೆಪ್ಪ, ಭೀಮರಾವ್, ಬಾಗಲಕೋಟೆಯ ಗಣೇಶ ಶಾಸ್ತ್ರಿ ಎಂಬ ಖತರ್ನಾಕ್ ಆಸಾಮಿಗಳು ಬಂಧನವಾಗಿದ್ದಾರೆ. ಚಳ್ಳಕೆರೆ ಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿರೋ ಪೊಲೀಸರು, 6.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದೇವಿ ಪೂಜೆ ನೆಪದಲ್ಲಿ ಮಹಿಳೆಯರು, ಯುವತಿಯರಿಂದ ಚಿನ್ನಾಭರಣ ಪಡೆಯುತ್ತಿದ್ದ ವಂಚಕರು, ಪೂಜಾ ನೆಪದಲ್ಲು ನಂಬಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪ ಕೇಳಿಬಂದಿದ್ದು ಸಂಕಷ್ಟದಲ್ಲಿರುವವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಉದ್ಯೋಗ, ಶುಭ ಯೋಗ, ಕಂಕಣ ಭಾಗ್ಯದ ಬಗ್ಗೆ ನಂಬಿಕೆ ಹುಟ್ಟಿಸಿ ವಂಚಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ, ಜನರ ಗಮನ ಸೆಳೆಯುತ್ತಿದ್ದ ಆರೋಪಿಗಳು ಅಮಾಯಕರನ್ನು ವಂಚನೆಯ ಬಲೆಗೆ ಸಿಲುಕಿಸಿ ಹಣ, ಬಂಗಾರ ದೋಚಿ ಪರಾರಿಯಾಗುತ್ತಿದ್ದರು.

click me!