ಎಂ.ಎಸ್.ಧೋನಿ ಹಾಗೂ ಪುತ್ರಿ ಝಿವಾ ಹೊಸ ವಿಡಿಯೋಗೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ವಾಹನ ತೊಳೆಯುವ ವಿಡಿಯೋ ಬಳಿಕ ಇದೀಗ ಮಸಾಜ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ರಾಂಚಿ(ಅ.26): ಬಾಂಗ್ಲಾದೇಶ ವಿರುದ್ದದ ಸರಣಿಗೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಯನ್ನು ಕಡೆಗಣಿಸಲಾಗಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಆಯ್ಕೆ ಸಮಿತಿ ವಿರುದ್ದ ಗರಂ ಆಗಿದ್ದಾರೆ. ಆದರೆ ಅತ್ತ ಧೋನಿ ಮನೆಯಲ್ಲಿ ರಿಲಾಕ್ಸ್ ಮೂಡ್‌ಗೆ ಜಾರಿದ್ದಾರೆ. ಭಾರತೀಯ ಸೇನಾ ವಾಹನ ಖರೀದಿಸಿದ್ದ ಧೋನಿ, ಇತ್ತೀಚೆಗೆ ವಾಹನವನ್ನು ಧೋನಿ ಹಾಗೂ ಪುತ್ರಿ ತೊಳೆದಿದ್ದರು. ಇದೀಗ ಧೋನಿಗೆ ಪುತ್ರಿಗೆ ಮಸಾಜ್ ಮಾಡೋ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: ಧೋನಿ ಜತೆ ಕಾರ್ ತೊಳೆದ ಝಿವಾ! ಸರಳತೆಗೆ ಜೈ ಎಂದ ಫ್ಯಾನ್ಸ್
ಕುಟುಂಬದ ಜೊತೆ ಕಾಲಕಳೆಯುತ್ತಿರುವ ಧೋನಿ ನೂತನ ವಾಹನ ನಿಸಾನ್ ಜೊಂಗ ತೊಳೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಧೋನಿ ಹಾಗೂ ಪುತ್ರಿ ಝಿವಾ ಇತ್ತೀಚೆಗೆ ಖರೀದಿಸಿದ ಸೇನಾ ವಾಹನ ತೊಳೆದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಧೋನಿಗೆ ಪುತ್ರಿ ಝಿವಾ ಮಸಾಜ್ ಮಾಡೋ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಧೋನಿ ಮಗಳು ಝಿವಾ ಕನ್ನಡಕ ಕದ್ದರಾ ಈ ಬಾಲಿವುಡ್ ಸ್ಟಾರ್..?
ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ, ಮನೆಯಲ್ಲಿ ವಿಶ್ರಾಂತಿಗೆ ಜಾರಿದ್ದಾರೆ. ಧೋನಿಗೆ ಪುತ್ರಿ ಝಿವಾ ಕೂಡ ಸಾಥ್ ನೀಡಿದ್ದಾರೆ. ಮಸಾಜ್ ಮಾಡೋ ಮೂಲಕ ಧೋನಿ ವಿಶ್ರಾಂತಿಗೆ ಹೆಚ್ಚಿನ ಅರ್ಥ ನೀಡಿದ್ದಾರೆ. ಪುತ್ರಿ ಝಿವಾ ಜೊತೆ ಧೋನಿ ಮಕ್ಕಳಂತೆ ಆಡುತ್ತಾರೆ. ಇದೀಗ ಝಿವಾ ಹಾಗೂ ಧೋನಿ ಮಸಾಜ್‌ಗೆ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಧೋನಿ ಹಾಗೂ ಝಿವಾ ಮಸಾಜ್ ವಿಡಿಯೋ ಶೇರ್ ಮಾಡಿದ ಮರುಕ್ಷಣದಲ್ಲೇ 50,000 ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇದೀಗ ಲಕ್ಷದಾಟಿದೆ.