ಗಂಗೂಲಿಗೆ BCCI ಅಧ್ಯಕ್ಷ ಪಟ್ಟ; ಕೊನೆಗೂ ಪ್ರತಿಕ್ರಿಯೆ ನೀಡಿದ ರವಿ ಶಾಸ್ತ್ರಿ!

By Web Desk  |  First Published Oct 26, 2019, 3:17 PM IST

ಬಿಸಿಸಿಐ ಅಧ್ಯಕ್ಷ ಪಟ್ಟ ಮುಡಿಗೇರಿಸಿಕೊಂಡ ಸೌರವ್ ಗಂಗೂಲಿಗೆ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದರು. ಆದರೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಯಾವುದೇ ಪ್ರತಿಕ್ರಿಯೆ ನೀಡಿದ ಮೌನಕ್ಕೆ ಶರಣಾಗಿದ್ದರು. ಕೊನೆಗೂ ಶಾಸ್ತ್ರಿ ಗಂಗೂಲಿ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 
 


ಮುಂಬೈ(ಅ.26): ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ನಡುವಿನ ಸಂಬಂಧ ಅಷ್ಟಕಷ್ಟೆ. ಈ ಹಿಂದೆ ಹಲವು ಬಾರಿ ಗಂಗೂಲಿ ಹಾಗೂ ಶಾಸ್ತ್ರಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.  ಗಂಗೂಲಿ ಬಿಸಿಸಿಐ ಅಧ್ಯಕ್ಷಗಾದಿಗೇರುತ್ತಿದ್ದಂತೆ ಅಭಿಮಾನಿಗಳು, ಶಾಸ್ತ್ರಿಯನ್ನು ಟ್ರೋಲ್ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ನೀಡಿದೆ ಮೌನಕ್ಕೆ ಜಾರಿದ್ದ ಶಾಸ್ತ್ರಿ, ಕೊನೆಗೂ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಗಾದಿ; ಟ್ರೋಲ್ ಆದ ಕೋಚ್ ಶಾಸ್ತ್ರಿ!

Latest Videos

ಖಾಸಗಿ ಇಂಗ್ಲೀಷ್ ಮಾಧ್ಯಮಕ್ಕೆ ರವಿ ಶಾಸ್ತ್ರಿ ಪ್ರತಿಕ್ರೆಯ ನೀಡಿದ್ದಾರೆ. ಬಿಸಿಸಿಐ ನೂತನ ಅಧ್ಯಕ್ಷ ಗಂಗೂಲಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಗಂಗೂಲಿ ಆಯ್ಕೆಯಿಂದ ಭಾರತೀಯ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ. ಗಂಗೂಲಿ ಅತ್ಯುತ್ತಮ ನಾಯಕ. ನಾಲ್ಕೈದು ವರ್ಷಗಳಿಂದ ಕ್ರಿಕೆಟ್ ಆಡಳಿತದಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಬಿಸಿಸಿಐ ಅಧ್ಯಕ್ಷನಾಗಿರುವುದು ಭಾರತಕ್ಕೆ ಸಿಕ್ಕ ಅತೀ ದೊಡ್ಡ ಗೆಲುವು. ಬಿಸಿಸಿಐ ಹಲವು ಅಡೆತಡೆ, ಹಿನ್ನಡೆಗಳನ್ನು ಅನುಭವಿಸಿದೆ.ಲ ಬಿಸಿಸಿಐ ಗತವೈಭವವನ್ನು ಮರುಕಳಿಸಲು ಗಂಗೂಲಿಗೆ ಮುಂದೆ ಸಾಕಷ್ಟು ಸವಾಲುಗಳಿವೆ. ಗಂಗೂಲಿಗೆ ನಾನು ಶುಭಹಾರೈಸುತ್ತೇನೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎದೆಯಲ್ಲಿ ಢವ-ಢವ..!

2016ರಲ್ಲಿ ಟೀಂ ಇಂಡಿಯಾ ಕೋಚ್ ಆಯ್ಕೆಯಿಂದ ಗಂಗೂಲಿ ಹಾಗೂ ಶಾಸ್ತ್ರಿ ನಡುವಿನ ಸಂಘರ್ಷ ಆರಂಭಗೊಂಡಿತು. ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದ ಗಂಗೂಲಿ, ಶಾಸ್ತ್ರಿ ಬದಲು ಕನ್ನಡಿಗ ಅನಿಲ್ ಕುಂಬ್ಳೆಗೆ ಮಣೆ ಹಾಕಿದ್ದರು. ಇದಾದ ಬಳಿಕ ಶಾಸ್ತ್ರಿ ಹಾಗೂ ಗಂಗೂಲಿ ಟ್ವಿಟರ್ ಮೂಲಕ, ಮಾಧ್ಯಮಗಳ ಮೂಲಕ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಕೊನೆಗೆ ಬಿಸಿಸಿಸಿ ಮಧ್ಯಪ್ರವೇಶಿಸಿ, ಬಹಿರಂಗ ಸಮರ ನಿಲ್ಲಿಸಲು ಸೂಚಿಸಿತ್ತು.

2016ರಿಂದ ಆರಂಭಗೊಂಡ ಮನಸ್ತಾಪ ಇನ್ನೂ ನಿಂತಿಲ್ಲ. ಗಂಗೂಲಿ ಬಿಸಿಸಿಐ ಅಧ್ಯಕ್ಷನಾಗುತ್ತಿದ್ದಂತೆ, ಶಾಸ್ತ್ರಿ ಕುರ್ಚಿ ಅಲುಗಾಡುತ್ತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಊಹಾಪೋಹಗಳಿಗೆ ಗಂಗೂಲಿ ತೆರೆಎಳೆದಿದ್ದರು.

ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!