
ದುಬೈ(ಅ.15): ಜಿಂಬಾಬ್ವೆ ಹಾಗೂ ನೇಪಾಳ ಕ್ರಿಕೆಟ್ ತಂಡಗಳ ಮೇಲೆ ಹೇರಿದ್ದ ನಿಷೇಧವನ್ನು ಐಸಿಸಿ ಹಿಂಪಡೆದಿದೆ. ಸೋಮವಾರ ಇಲ್ಲಿ ನಡೆದ ಸಭೆ ವೇಳೆ ಈ ತೀರ್ಮಾನ ಪ್ರಕಟಿಸಲಾಯಿತು.
BCCIಗೆ ಬೆದರಿದ ICC; ಜಿಂಬಾಬ್ವೆ ಮೇಲಿನ ನಿಷೇಧ ವಾಪಾಸ್!
ಕ್ರಿಕೆಟ್ ಮಂಡಳಿಯ ಆಡಳಿತದಲ್ಲಿ ಅಲ್ಲಿನ ಸರ್ಕಾರಗಳು ತಲೆ ಹಾಕುತ್ತಿದ್ದ ಕಾರಣ, ಈ ವರ್ಷ ಜುಲೈನಲ್ಲಿ ಎರಡೂ ತಂಡಗಳನ್ನು ಐಸಿಸಿ ನಿಷೇಧಿಸಿತ್ತು. ಐಸಿಸಿ ನಿಯಮಗಳಿಗೆ ತಕ್ಕಂತೆ ಆಡಳಿತ ನಡೆಸುವುದಾಗಿ ಒಪ್ಪಿಕೊಂಡ ಬಳಿಕ ನಿಷೇಧ ತೆರವುಗೊಳಿಸಲು ನಿರ್ಧರಿಸಲಾಯಿತು ಎಂದು ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ.
ಜಿಂಬಾಬ್ವೆ BAN: ಅಚ್ಚರಿಗೊಳಗಾದ ಅಶ್ವಿನ್..!
2019 ಜುಲೈನಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಜಿಂಬಾಬ್ವೆ ತಂಡದ ಮೇಲೆ ತಕ್ಷಣಕ್ಕೆ ಜಾರಿಗೆ ಬರುವಂತೆ ಐಸಿಸಿ ನಿಷೇಧ ಹೇರಿತ್ತು. ಲಂಡನ್ ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಐಸಿಸಿ ಈ ತೀರ್ಮಾನಕ್ಕೆ ಬಂದಿತ್ತು. ಐಸಿಸಿ ತೀರ್ಮಾನಕ್ಕೆ ಜಿಂಬಾಬ್ವೆ ಕ್ರಿಕೆಟಿಗರು ಮಾತ್ರವಲ್ಲದೇ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಚ್ಚರಿ ವ್ಯಕ್ತಪಡಿಸಿದ್ದರು.
ಇದೇ ವೇಳೆ ಮುಂದಿನ ವರ್ಷ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡಲಾಗಿದೆ. ಚಾಂಪಿಯನ್ ಆಗುವ ತಂಡ 1 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ಗಳಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.