ಜಿಂಬಾಬ್ವೆ ಠಕ್ಕರ್‌ಗೆ ಗಲಿಬಿಲಿಗೊಂಡ ಭಾರತ, ಕೊನೆಯ ಹಂತದಲ್ಲಿ ಹರಸಾಹಸದ ಗೆಲುವು!

Published : Aug 22, 2022, 08:56 PM ISTUpdated : Aug 22, 2022, 09:09 PM IST
ಜಿಂಬಾಬ್ವೆ ಠಕ್ಕರ್‌ಗೆ ಗಲಿಬಿಲಿಗೊಂಡ ಭಾರತ, ಕೊನೆಯ ಹಂತದಲ್ಲಿ ಹರಸಾಹಸದ ಗೆಲುವು!

ಸಾರಾಂಶ

ಜಿಂಬಾಬ್ವೆ ವಿರುದ್ದದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಹರಸಾಹಸದ ಗೆಲುವು ಸಾಧಿಸಿದೆ. ಸಿಖಂದರ್ ರಾಜಾ ಭರ್ಜರಿ ಸೆಂಚುರಿ ಮೂಲಕ ಅಬ್ಬರಿಸಿ ಜಿಂಬಾಬ್ವೆಗೆ ಆಸರೆಯಾಗಿದ್ದರು. ಆದರೆ ಗೆಲುವಿಗೆ ಇನ್ನೇನು 15 ರನ್ ಅವಶ್ಯಕತೆ ಇರುವಾಗ ರಾಜಾ ವಿಕೆಟ್ ಪತನದಿಂದ ಜಿಂಬಾಬ್ವೆ ವಿರೋಚಿತ ಸೋಲು ಕಂಡಿತು.

ಹರಾರೆ(ಆ.22): ಟೀಂ ಇಂಡಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 13 ರನ್ ಸೋಲು ಕಂಡಿದೆ. ಆದರೆ ಜಿಂಬಾಬ್ವೆ ತಂಡದ ಹೋರಾಟಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.  ಸಿಖಂದರ್ ರಾಜಾ ಹೋರಾಟದ ಸೆಂಚುರಿ ವ್ಯರ್ಥಗೊಂಡರೂ ಏಕಾಂಗಿ ಹೋರಾಟಕ್ಕೆ ಒಂದು ಕ್ಷಣ ಟೀಂ ಇಂಡಿಯಾವೂ ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ. ಅಂತಿಮ ಪಂದ್ಯದಲ್ಲಿ 13 ರನ್ ಗೆಲುವು ದಾಖಲಿಸಿದ ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಜಿಂಬಾಬ್ವೆ ಗೆಲುವಿಗೆ ಭಾರತ 290 ರನ್ ಟಾರ್ಗೆಟ್ ನೀಡಿತ್ತು. ಇತ್ತ ಜಿಂಬಾಬ್ವೆಗೆ ನಿರೀಕ್ಷಿತ ಆರಂಭವೂ ಸಿಗಲಿಲ್ಲ. ತಕುಡ್ಜವಾನ್ಶೆ ಕೈಟಾನೋ ಹಾಗೂ ಇನೋಸೆಂಟ್ ಕೈಯಿಯಾ ಹೋರಾಟ ಬಹುಬೇಗನೆ ಅಂತ್ಯಗೊಂಡಿತ್ತು. ಕೈಟಾನೋ 13 ರನ್ ಸಿಡಿಸಿ ಔಟಾದರೆ, ಕೆಯಿಯಾ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಸೀನ್ ವಿಲಿಯಮ್ಸ್ ಹಾಗೂ ಟೊನಿ ಮುನ್ಯೊಂಗ ಜೊತೆಯಾಟದಿಂದ ಚೇತರಿಸಿಕೊಂಡಿತು. ಸೀನ್ ವಿಲಿಯಮ್ಸ್ 46 ಎಸೆತದಲ್ಲಿ 45 ರನ್ ಕಾಣಿಕೆ ನೀಡಿದರು. ಇತ್ತ ಟೋನಿ 15 ರನ್ ಸಿಡಿಸಿ ನಿರ್ಗಮಿಸಿದರು.

ಸಿಖಂದರ್ ರಾಜಾ ಹೋರಾಟ ಜಿಂಬಾಬ್ವೆ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿತು. ಟೀಂ ಇಂಡಿಯಾ ದಾಳಿಗೆ ದಿಟ್ಟ ಹೋರಾಟ ನೀಡಿದ ಸಿಖಂದರ್ ರಾಜಾ ಜಿಂಬಾಬ್ವೆ ತಂಡಕ್ಕೆ ಆಸರೆಯಾದರು. ಆದರೆ ರಾಜಾಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಇದು ಜಿಂಬಾಬ್ವೆ ತಂಡಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿತು. ಆದರೆ ರಾಜಾ ಏಕಾಂಗಿ ಹೋರಾಟದ ಮೂಲಕ ಜಿಂಬಾಬ್ವೆ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತುಕೊಂಡರು. ಆಕರ್ಷಕ ಸೆಂಚುರಿ ಸಿಡಿಸಿ ಮಿಂಚಿದರು.

ಹಿಂದೆಂದೂ ನೋಡಿರದ ದಿನೇಶ್ ಕಾರ್ತಿಕ್‌ ಜತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ದೀಪಿಕಾ ಪಲ್ಲಿಕಲ್

ನಾಯಕ ರೆಗಿಸ್ ಚಕಬ್ವಾ 16 ರನ್ ಸಿಡಿಸಿ ಔಟಾದರು. ರ್ಯಾನ್ ಬರ್ಲ್ 8 ರನ್ ಸಿಡಿಸಿ ಔಟಾದರು. ಲ್ಯೂಗಿ ಜಾಂಗ್ವೆ 14 ರನ್ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ ಬ್ರಾಡ್ ಇವಾನ್ಸ್ ಹಾಗೂ ಸಿಖಂದರ್ ರಾಜಾ ಹೋರಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಬ್ರಾಡ್ ಇವಾನ್ಸ್ 28 ರನ್ ಸಿಡಿಸಿ ಔಟಾದರು.ಇತ್ತ ಸಿಖಂದರ್ ರಾಜಾ 95 ಎಸೆತದಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 115 ರನ್ ಸಿಡಿಸಿ ಔಟಾದರು. ರಾಜಾ ವಿಕೆಟ್ ಪತನದೊಂದಿಗೆ ಜಿಂಬಾಬ್ವೆ ಗೆಲುವು ದೂರವಾಯಿತು. ಅಂತಿಮ ಎರಡು ಓವರ್‌ಗಳಲ್ಲಿ ಜಿಂಬಾಬ್ವೆ ಗೆಲುವಿಗೆ ಕೇವಲ 15 ರನ್‌ಗಳ ಅವಶ್ಯಕತೆ ಇತ್ತು. ಆದರೆ 49.3 ಓವರ್‌ಗಳಲ್ಲಿ ಜಿಂಬಾಬ್ವೆ 276 ರನ್‌ಗಳಿಗೆ ಆಲೌಟ್ ಆಯಿತು. 

ಶುಬಮನ್ ಗಿಲ್ ಸೆಂಚುರಿ ಅಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಶುಬಮನ್ ಗಿಲ್ ಆಕರ್ಷಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಗಿಲ್ 97 ಎಸೆತದಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 130 ರನ್ ಸಿಡಿಸಿ ಔಟಾದರು. ಇತ್ತ ಇಶಾನ್ ಕಿಶ್ 50 ರನ್ ಕಾಣಿಕೆ ನೀಡಿದರು. ಶಿಖರ್ ಧವನ್ 40 ರನ್ ಸಿಡಿಸಿ ಔಟಾದರು. ನಾಯಕ ಕೆಎಲ್ ರಾಹುಲ್ 30 ರನ್ ಸಿಡಿಸಿದರು.  ಈ ಮೂಲಕ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 289 ರನ್ ಸಿಡಿಸಿತ್ತು.

ICC T20 World Cup 2022: ಸೆಪ್ಟೆಂಬರ್ 15ಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ..!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!