ZIM vs IND ಶುಬಮನ್ ಗಿಲ್ ಆಕರ್ಷಕ ಸೆಂಚುರಿ, ಜಿಂಬಾಬ್ವೆಗೆ ಬೃಹತ್ ಗುರಿ!

By Suvarna NewsFirst Published Aug 22, 2022, 4:32 PM IST
Highlights

ಶುಬಮನ್ ಗಿಲ್ ಆಕರ್ಷಕ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 3ನೇ ಅಂತಿಮ ಏಕದಿನ ಪಂದ್ಯದಲ್ಲಿ 289 ರನ್ ಸಿಡಿಸಿದೆ.

ಹರಾರೆ(ಆ.22);  ಜಿಂಬಾಬ್ವೆ ವಿರುದ್ದದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 289 ರನ್ ಸಿಡಿಸಿದೆ. ಶುಬಮನ್ ಗಿಲ್ ಸಿಡಿಸಿದ ಆಕರ್ಷಕ ಸೆಂಚುರಿ, ಇಶಾನ್ ಕಿಶನ್ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು.  ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕ ಶಿಖರ್ ಧವನ್ ಹಾಗೂ ನಾಯಕ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 63 ರನ್ ಜೊತೆಯಾಟ ನೀಡಿದರು. ಕೆಎಲ್ ರಾಹುಲ್ 30 ರನ್ ಸಿಡಿಸಿ ಔಟಾದರು. ಇತ್ತ ಧವನ್ 40 ರನ್ ಕಾಣಿಕೆ ನೀಡಿದರು. ಆದರೆ ಶುಬಮನ್ ಗಿಲ್ ಹೋರಾಟ ಟೀಂ ಇಂಡಿಯಾದಿಂದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಗಿಲ್ ಹಾಗೂ ಇಶಾನ್ ಕಿಶನ್ ಹೋರಾಟ ಜಿಂಬಾಬ್ವೆ ಬೌಲರ್‌ಗಳ ತಲೆನೋವು ಹೆಚ್ಚಿಸಿದರು.

ಇಶಾನ್ ಕಿಶನ್ 61 ಎಸೆತದಲ್ಲಿ6 ಬೌಂಡರಿ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. 50 ರನ್ ಸಿಡಿಸಿದ ಬೆನ್ನಲ್ಲೇ ಇಶಾನ್ ಕಿಶನ್ ವಿಕೆಟ್ ಪತನಗೊಂಡಿತು. ಆದರೆ ಗಿಲ್ ಹೋರಾಟ ಮುಂದುವರಿಸಿದರು. ದಿಟ್ಟ ಹೋರಾಟ ನೀಡಿದ ಗಿಲ್ ಏಕದಿನದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಆದರೆ ದೀಪಕ್ ಹೂಡ, ಸಂಜು ಸ್ಯಾಮ್ಸನ್ ಸೇರಿದಂತೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. 

Asia Cup 2022 ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಗುರವಾಗಿ ಪರಿಗಣಿಸಬೇಡಿ: ಪಾಕ್ ಸ್ಪಿನ್ನರ್ ಎಚ್ಚರಿಕೆ..!

ಹೂಡ 1 ರನ್ ಸಿಡಿಸಿದರೆ, ಸ್ಯಾಮ್ಸನ್ 15 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ 1 ರನ್ ಸಿಡಿಸಿ ಔಟಾದರು. ಶುಬಮನ್ ಗಿಲ್ 97 ಎಸೆತದಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 130 ರನ್ ಸಿಡಿಸಿ ಔಟಾದರು. ದೀಪಕ್ ಚಹಾರ್ ಅಜೇಯ 1 ರನ್ ಹಾಗೂ ಕುಲ್ದೀಪ್ ಯಾದವ್ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 289 ರನ್ ಸಿಡಿಸಿತು.

ಆರಂಭಿಕ ಎರಡು ಪಂದ್ಯ ಗೆದ್ದು ಸರಣಿ ಗೆದ್ದಿರುವ ಭಾರತ
ಶಿಸ್ತುಬದ್ಧ ಬೌಲಿಂಗ್‌ ದಾಳಿ, ಬ್ಯಾಟರ್‌ಗಳ ಜವಾಬ್ದಾರಿಯುತ ಆಟದ ನೆರವಿನಿಂದ ಜಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ. ಇದು ಕೆ.ಎಲ್‌.ರಾಹುಲ್‌ರ ನಾಯಕತ್ವದಲ್ಲಿ ಭಾರತಕ್ಕೆ ದೊರೆತ ಮೊದಲ ಸರಣಿ ಗೆಲುವು ಎನಿಸಿದೆ.
ಸ್ಕೋರ್‌: ಜಿಂಬಾಬ್ವೆ 38.1 ಓವರಲ್ಲಿ 161/10 (ವಿಲಿಯಮ್ಸ್‌ 42, ಬಲ್‌ರ್‍ 39, ಶಾರ್ದೂಲ್‌ 3-38), ಭಾರತ 25.4 ಓವರಲ್ಲಿ 167/​5 (ಸ್ಯಾಮ್ಸನ್‌ 43*, ಧವನ್‌ 33, ಗಿಲ್‌ 33, ಜೊಂಗ್ವೆ 2-33)

click me!