ಯುವ ಕ್ರಿಕೆಟಿಗರಿಗೆ ಮಹತ್ವದ ಸಲಹೆ ನೀಡಿದ ಯುವರಾಜ್ ಸಿಂಗ್!

By Suvarna NewsFirst Published May 3, 2020, 6:42 PM IST
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆನ್ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್‌ನಲ್ಲಿ ಫಿಯರ್‌ಲೆಸ್ ವ್ಯಕ್ತಿತ್ವ. ಇದೀಗ ಯುವಿ ಯುವ ಕ್ರಿಕೆಟಿಗರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಈ ಮೂಲಕ  ಕೆಲ ಟೀಂ ಇಂಡಿಯಾ ಕ್ರಿಕೆಟಿಗರಿಗೂ ಛಾಟಿ ಬೀಸಿದ್ದಾರೆ.

ಪಂಜಾಬ್(ಮೇ.03): ಕ್ರಿಕೆಟ್ ವೃತ್ತಿಯಾಗಿ ಸ್ವೀಕರಿಸುವ, ಈಗಾಗಲೇ ಸ್ವೀಕರಿಸಿ ರಾಜ್ಯ ತಂಡಗಳಿಗೆ ಆಡುತ್ತಿರುವ ಹಾಗೂ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಯುವ ಕ್ರಿಕೆಟಿಗರಿಗೆ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮಹತ್ವದ ಸಲಹೆ ನೀಡಿದ್ದಾರೆ. ಯುವ ಕ್ರಿಕೆಟಿಗರು ಸಾಮರ್ಥ್ಯ, ಪ್ರತಿಭೆಯನ್ನು ಮೈದಾನಲ್ಲಿ ಪ್ರದರ್ಶನದ ಮೂಲಕ ತೋರಿಸಬೇಕು. ಅದು ಬಿಟ್ಟು ಸಾಮಾಜಿಕ  ಜಾಲತಾಣದಲ್ಲಿ ಅಲ್ಲ ಎಂದು ಯುವಿ ಸಲಹೆ ನೀಡಿದ್ದಾರೆ.

ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಅತೀ ದೊಡ್ಡ 3 ತಪ್ಪು ಬಹಿರಂಗ ಪಡಿಸಿದ MSK ಪ್ರಸಾದ್!

ಮೈದಾನದಲ್ಲಿ ಕೆಲ ಕ್ರಿಕೆಟಿಗರು ಸಭ್ಯರಂತೆ ಕಾಣುತ್ತಾರೆ. ಸರಾಸರಿ ಪ್ರದರ್ಶನ ನೀಡುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರ ಅವತಾರ ನೋಡಿದರೆ ಬೆಚ್ಚಿ ಬೀಳವುದು ಖಚಿತ. ಇದು ಉತ್ತಮಲ್ಲ. ಕ್ರಿಕೆಟಿನಾಗಬೇಕು ಎಂದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನದ ಬದಲು, ಮೈದಾನಲ್ಲಿ ನಿಮ್ಮ ಪ್ರತಿಭೆ ಸಾಬೀತು ಪಡಿಸಬೇಕು. ಇದಕ್ಕಾಗಿ ಅಭ್ಯಾಸ ಮಾಡಬೇಕು ಎಂದು ಯುವಿ ಹೇಳಿದ್ದಾರೆ.

ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!

ಟೀಂ ಇಂಡಿಯಾದ ಯುವ ಕ್ರಿಕೆಟಿಗರಾದ ಯಜುವೇಂದ್ರ ಚಹಾಲ್ ಸೇರಿದಂತೆ ಕೆಲ ಕ್ರಿಕೆಟಿಗರು ಟಿಕ್ ಟಾಕ್ ಸೇರಿದಂತೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ಕುರಿತು ಯವರಾಜ್ ಸಿಂಗ್ ಸಲಹೆ ನೀಡಿದ್ದಾರೆ. ಕ್ರಿಕೆಟ್, ಅಭ್ಯಾಸ, ನಿನ್ನೆಗಿಂತ ಇಂದು ಉತ್ತಮ ಪ್ರದರ್ಶನ ನೀಡಲು ಕಾತರ, ಕ್ರಿಕೆಟ್ ಟೆಕ್ನಿಕ್, ಫಿಟ್ನೆಸ್ ಕುರಿತು ತಿಳಿದುಕೊಳ್ಳಬೇಕು. ಇದರ ಬದಲಾಗಿ ಯುವ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಾಗಿ ಅಭ್ಯಾಸ, ಹೊಸ ಐಡಿಯಾಗೆ ಚಿಂತನೆ ನಡೆಸಿ ಸಮಯ ಹಾಳುಮಾಡಬಾರದು ಎಂದು ಯುವಿ ಕಿವಿಮಾತು ಹೇಳಿದ್ದಾರೆ.

click me!