ಒಂದಲ್ಲ, ಎರಡಲ್ಲ, 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ!

By Suvarna NewsFirst Published May 3, 2020, 3:51 PM IST
Highlights

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಲವು ಸಮಸ್ಯೆಗಳಿಂದ ಹೊರಬಂದು ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಹೋರಾಟಗಾರ. ಭಾರತದ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಶಮಿ 2018ರಲ್ಲಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಅನ್ನೋ ಸ್ಫೋಟಕ ಮಾಹಿತಿಯನ್ನು ಸ್ವತಃ ಶಮಿ ಬಹಿರಂಗ ಪಡಿಸಿದ್ದಾರೆ.

ಕೊಲ್ಕತಾ(ಮೇ.03): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೀ ಪ್ಲೇಯರ್ ಅನ್ನೋದರಲ್ಲಿ ಎರಡು ಮಾತಿಲ್ಲ. 2015ರ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಧೂಳೀಪಟ ಮಾಡಿದ್ದರು. ಟೀಂ ಇಂಡಿಯಾದ ಹಲವು ಐತಿಹಾಸಿಕ ಗೆಲುವಿನಲ್ಲಿ ಶಮಿ ಪಾತ್ರ ಪ್ರಮುಖವಾಗಿದೆ. ಆದರೆ 2015ರ ವಿಶ್ವಕಪ್ ಟೂರ್ನಿಯಲ್ಲಿ ಇಂಜುರಿಗೆ ತುತ್ತಾದ ಶಮಿ ಬರೋಬ್ಬರಿ 18 ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು. ಮರಳಿ ಬಂದಾಗ ಕುಟುಂಬ ಸಮಸ್ಯೆ ಶಮಿಗೆ ಮುಳುವಾಯ್ತು.

ಮಂಡಿ ಮುರಿದಿದ್ದರೂ 2015ರ ವಿಶ್ವಕಪ್‌ ಆಡಿದ್ದೆ: ನೋವಿನ ಕ್ಷಣ ಹಂಚಿಕೊಂಡ ಶಮಿ

2018ರಲ್ಲಿ ಶಮಿ ಹಾಗೂ ಪತ್ನಿ ಹಸೀನ್ ಜಹಾನ ಸಂಬಂಧ ಹಳಸಿತು. ಶಮಿ ಇತರ ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದಾರೆ. ಶಮಿ ಕಿರುಕುಳು ನೀಡುತ್ತಿದ್ದಾರೆ. ಮೋಸ ಮಾಡಿದ್ದಾರೆ ಎಂದು ಶಮಿ ಪತ್ನಿ ಹಸಿನ್ ಜಹಾನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಇತ್ತ ಪೊಲೀಸರು 2019ರಲ್ಲಿ ಶಮಿಗೆ ಅರೆಸ್ಟ್ ವಾರೆಂಟ್ ನೀಡಿದ್ದರು. ಶಮಿ ವಿರುದ್ಧ ಆರೋಪಗಳ ಸುರಿಮಳೆಗೈದ ಪತ್ನಿ ಹಸೀನ್ ಜಹಾನ್, ಮಹಿಳಾ ಹಕ್ಕು ಆಯೋಗ, ಪಶ್ಚಮ ಬಂಗಾಳ ಸರ್ಕಾರದ ಮೊರೆ ಹೋಗಿದ್ದರು.

ಪೂಜೆ ಮಾಡಿದ ಮೊಹಮ್ಮದ್ ಶಮಿ ಪುತ್ರಿ, ಮುಸ್ಲಿಂ ಸಂಪ್ರದಾಯವಾದಿಗಳು ಗರಂ!

ಇತ್ತ ಶಮಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದೇ ವೇಳೆ ಶಮಿ ಅಪಘಾತದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದರು. ಒತ್ತಡ ಸಹಿಸಿಕೊಳ್ಳಲಾರದೆ ಮೊಹಮ್ಮದ್ ಶಮಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಅನ್ನೋ ವಿಚಾರವನ್ನು ಸ್ವತಃ ಶಮಿ ಬಹಿರಂಗ ಪಡಿಸಿದ್ದಾರೆ. ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆಗಿನ ಇನ್‌ಸ್ಟಾಗ್ರಾಂ ಜೊತೆಗಿನ ಸಂವಾದಲ್ಲಿ ಮೊಹಮ್ಮದ್ ಶಮಿ ಮೊದಲ ಬಾರಿಗೆ ಆತ್ಮಹತ್ಯೆ ವಿಚಾರ ಬಾಯ್ಬಿಬಿಟ್ಟಿದ್ದಾರೆ.

ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

ನನ್ನ ಪೋಷಕರು ಹಾಗೂ ಕುಟಂಬದ ಸಹಾಯದಿಂದ ಮತ್ತೆ ಕ್ರಿಕೆಟ್ ಆಡಲು ಸಾಧ್ಯವಾಯಿತು. ನಿಜಕ್ಕೂ ನನ್ನ ಕಠಿಣ ಸಂದರ್ಭವನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ನೋವು ಅನುಭವಿಸಿದ್ದೇನೆ ಎಂದು ಶಮಿ ಹೇಳಿದ್ದಾರೆ. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶಮಿ ಕಮ್ ಬ್ಯಾಕ್ ಮಾಡಿದ್ದರು. ಬಳಿಕ ಉತ್ತಮ ಪದರ್ಶನದ ಮೂಲಕ ತಂಡದ ಅಗ್ರ ವೇಗಿಯಾಗಿ ಸಕ್ರೀಯರಾಗಿದ್ದಾರೆ. 

click me!