ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿ ಎಂದೇ ಬಿಂಬಿತವಾಗಿದೆ. ಹೀಗಾಗಿ ಯಾವುದೇ ಕ್ರೀಡಾಂಗಣವಾಗಿದ್ದರೂ ಧೋನಿ ಅಭಿಮಾನಿಗಳು ತುಂಬಿರುತ್ತಾರೆ. ಇದೀಗ ಸ್ವತಃ ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ನನ್ನ ನಿವೃತ್ತಿಯನ್ನು ನೀವೇ ನಿರ್ಧರಿಸಿದ್ದೀರಿ, ಆದರೆ ನಾನು ನಿವೃತ್ತಿ ನಿರ್ಧರಿಸಿಲ್ಲ ಎಂದು ಧೋನಿ ಹೇಳಿದ್ದಾರೆ.
ಲಖನೌ(ಮೇ.03): ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಈ ಸಿಹಿ ಸುದ್ದಿಯನ್ನು ಸ್ವತಃ ಎಂಎಸ್ ಧೋನಿಯೇ ನೀಡಿದ್ದಾರೆ. ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿಯಲ್ಲ. ಖುದ್ದು ಧೋನಿಯೇ ಉತ್ತರ ನೀಡಿದ್ದಾರೆ. ನನ್ನ ನಿವೃತ್ತಿಯನ್ನು ನೀವೇ ನಿರ್ಧರಿಸಿದ್ದೀರಿ. ಆದರೆ ನಾನು ನಿವೃತ್ತಿ ನಿರ್ಧರಿಸಿಲ್ಲ ಎಂದು ಎಂ.ಎಸ್.ಧೋನಿ ಹೇಳಿದ್ದಾರೆ. ಇದು ಎಂ.ಎಸ್.ಧೋನಿ ಕೊನೆಯ ಐಪಿಎಲ್ ಟೂರ್ನಿ ಎಂದೇ ಬಿಂಬಿತವಾಗಿದೆ. ಲಖನೌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ವೇಳೆ ಕಮೆಂಟೇಟರ್ ಡ್ಯಾನಿ ಮೋರಿಸನ್ ಈ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಧೋನಿ, ನಿವೃತ್ತಿ ಮಾತನ್ನು ತಳ್ಳಿ ಹಾಕಿದ್ದಾರೆ. ನೀವು ನನ್ನ ನಿವೃತ್ತಿಯನ್ನು ನಿರ್ಧರಿಸಿದ್ದೀರಿ. ಆದರೆ ನಾನು ಮಾಡಿಲ್ಲ ಎಂದು ಧೋನಿ ಉತ್ತರಿಸಿದ್ದಾರೆ.
ಲಖನೌ ಹಾಗೂ ಚೆನ್ನೈ ನಡುವಿನ ಪಂದ್ಯದ ವೇಳೆ ಟಾಸ್ ಗೆದ್ದ ಧೋನಿ, ನೇರವಾಗಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬಳಿಕ ಮಾತನಾಡಿದ ಧೋನಿ, ಟ್ರಾಕ್ ಕೊಂಚ ಸ್ಲೋ ಇದೆ. ಹೀಗಾಗಿ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತೇವೆ. ಪಿಚ್ ಕಂಡೀಷನ್ ಕೂಡ ನೋಡಬೇಕಾಗುತ್ತದೆ. ದೀಪಕ್ ಚಹಾರ್ ಫಿಟ್ ಆಗಿದ್ದಾರೆ. ಹೀಗಾಗಿ ಆಕಾಶ್ ಸಿಂಗ್ ಬದಲು ದೀಪಕ್ ಚಹರ್ ತಂಡ ಸೇರಿಕೊಂಡಿದ್ದಾರೆ. ಇತರ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಇದೇ ವೇಳೆ ಡ್ಯಾನಿ ಮೋರಿಸನ್, ನೀವು ಕೊನೆಯ ಐಪಿಎಲ್ ಟೂರ್ನಿಯನ್ನು ಆನಂದಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಷ್ಟೇ ಫನ್ನಿಯಾಗಿ ಧೋನಿ ಉತ್ತರಿಸಿದ್ದಾರೆ. ನೀವೆಲ್ಲಾ ನನ್ನ ನಿವೃತ್ತಿ ನಿರ್ಧರಿಸಿದ್ದೀರಿ. ಆದರೆ ನಾನು ಏನೂ ನಿರ್ಧರಿಸಿಲ್ಲ ಎಂದು ಉತ್ತರಿಸಿದ್ದಾರೆ.
ಎಲ್ಲಿ ಹೋದರು ಕಿರಿಕ್ ಪಾರ್ಟಿ, ಕೊಹ್ಲಿ ಮೊದಲು ಪೆರೇರಾ, ಆಫ್ರಿದಿ ವಿರುದ್ದ ಕಿತ್ತಾಡಿದ್ದ ನವೀನ್ ಉಲ್ ಹಕ್!
ಧೋನಿ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಧೋನಿ ನಿವೃತ್ತಿ ನಿರ್ಧರಿಸಿಲ್ಲ. ಹೀಗಾಗಿ ಮುಂದಿನ ಐಪಿಎಲ್ ಟೂರ್ನಿಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ಸಂದೇಶ ರವಾನಿಸುತ್ತಿದ್ದಾರೆ. ನಿವೃತ್ತಿ ಕುರಿತು ಧೋನಿ ನೀಡಿದ ಉತ್ತರದ ವಿಡಿಯೋ ವೈರಲ್ ಆಗಿದೆ. ಈ ಬಾರಿಯ ಧೋನಿ ಕೊನೆಯದಾಗಿ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕ್ರೀಡಾಂಗಕ್ಕೆ ಆಗಮಿಸುತ್ತಿದ್ದಾರೆ. ಎಲೆಲ್ಲೂ ಧೋನಿ ಅಭಿಮಾನಿಗಳು ಕಾಣಿಸುತ್ತಿದ್ದಾರೆ. ಇದೀಗ ಧೋನಿ ನೀಡಿದ ಉತ್ತರಿಂದ ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ.
MSD keeps everyone guessing 😉
The Lucknow crowd roars to 's answer 🙌🏻 | | pic.twitter.com/rkdVq1H6QK
ಐಪಿಎಲ್ ಟೂರ್ನಿಯಲ್ಲಿ ಧೋನಿ ನಿವೃತ್ತಿ ಸೂಚನೆ ನೀಡಿಲ್ಲ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಇತ್ತೀಚೆಗೆ ಹೇಳಿದ್ದರು. ಎಂ.ಎಸ್.ಧೋನಿ ಈ ಆವೃತ್ತಿ ಐಪಿಎಲ್ ಬಳಿಕ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳನ್ನು ಸ್ವತಃ ಚೆನ್ನೈ ತಂಡದ ಕೋಚ್ ಫ್ಲೆಮಿಂಗ್ ಅಲ್ಲಗಳೆದಿದ್ದು, ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದಿದ್ದರು. ಈಗಾಗಲೇ ತಮ್ಮ ನಿವೃತ್ತಿ ಬಗ್ಗೆ ಧೋನಿಯೇ ಹಲವು ಬಾರಿ ಸುಳಿವು ನೀಡಿದ್ದರು. ಇತ್ತೀಚೆಗಷ್ಟೇ ಕ್ರಿಕೆಟ್ ಬದುಕಿನ ಕೊನೆ ಹಂತದಲ್ಲಿದ್ದೇನೆ ಎಂದಿದ್ದ ಧೋನಿ, ಕಳೆದ ವಾರ ಕೋಲ್ಕತಾ ವಿರುದ್ಧದ ಪಂದ್ಯದ ಬಳಿಕ, ಅಭಿಮಾನಿಗಳು ನನಗೆ ಬೀಳ್ಕೊಡುಗೆ ನೀಡಲು ಪ್ರಯತ್ನಿಸಿದರು ಎಂದಿದ್ದರು. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
IPL 2023 ಕೊಹ್ಲಿ ಗಂಭೀರ್ ನಡುವಿನ ಕಿತ್ತಾಟಕ್ಕೆ ಕಾರಣ ಬಹಿರಂಗ? ಪಂದ್ಯದಲ್ಲಿ ನಡೆದಿತ್ತು ಜಟಾಪಟಿ!
ಇತ್ತೀಚೆಗಷ್ಟೇ ಧೋನಿ ಟಿ20 ಕ್ರಿಕೆಟ್ನ ಕೊನೆ ಓವರಲ್ಲಿ 1000 ರನ್ ಪೂರ್ತಿಗೊಳಿಸಿದ್ದು, ವೆಸ್ಟ್ಇಂಡೀಸ್ನ ಕೀರನ್ ಪೊಲ್ಲಾರ್ಡ್ ಬಳಿಕ ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಭಾನುವಾರ ಪಂಜಾಬ್ ವಿರುದ್ಧ ಕೊನೆ 2 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಅವರು ಈ ಮೈಲಿಗಲ್ಲು ಸಾಧಿಸಿದರು. ಐಪಿಎಲ್ನಲ್ಲಿ ಅವರು 20ನೇ ಓವರಲ್ಲಿ 290 ಎಸೆತಗಳಲ್ಲಿ ಎದುರಿಸಿ 709 ರನ್ ಗಳಿಸಿದ್ದಾರೆ. ಇದರಲ್ಲಿ 59 ಸಿಕ್ಸರ್, 49 ಬೌಂಡರಿಗಳು ಒಳಗೊಂಡಿವೆ.