ಟೀಂ ಇಂಡಿಯಾ ಹೋರಾಟಕ್ಕೆ ಮಳೆ ಅಡ್ಡಿ; ನ್ಯೂಜಿಲೆಂಡ್‌ಗೆ 2ನೇ ದಿನದಾಟದ ಗೌರವ!

By Suvarna NewsFirst Published Jun 19, 2021, 10:46 PM IST
Highlights
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ
  • 2ನೇ ದಿನದಾಟಕ್ಕೂ ಅಡ್ಡಿಯಾದ ಮಳೆ ಮೋಡ
  • ಕೊಹ್ಲಿ, ರಹಾನೆ ಹೋರಾಟ, 3 ವಿಕೆಟ್ ಕಬಳಿಸಿದ ಕಿವೀಸ್

ಸೌಥಾಂಪ್ಟನ್(ಜೂ.19):  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟಾ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ವಿಘ್ನಗಳೇ ಕಾಡುತ್ತಿದೆ. ಮೊದಲ ದಿನ ಸಂಪೂರ್ಣ ಮಳೆಗೆ ಆಹುತಿಯಾಗಿದೆ. ಇದೀಗ ಎರಡನೇ ದಿನದಾಟವೂ ಸಂಪೂರ್ಣವಾಗಿ ನಡೆಯಲು ಅನುವು ಮಾಡಿಕೊಡಲಿಲ್ಲ. ಮಳೆ ಮೋಡ ಕಾರಣ ಮಂದ ಬೆಳಕು ಆವರಿಸಿತ್ತು. ಹೀಗಾಗಿ ಬ್ಯಾಡ್ ಲೈಟ್ ಕಾರಣ 2ನೇ ದಿನದಾಟ ಅಂತ್ಯಗೊಂಡಿದೆ. ಭಾರತ 3 ವಿಕೆಟ್ ಕಳೆದು ಕೊಂಡು 146 ರನ್ ಸಿಡಿಸಿದೆ.

WTCfinal; ಕೊಹ್ಲಿ, ರಹಾನೆ ಹೋರಾಟಕ್ಕೆ ಬ್ಯಾಡ್ ಲೈಟ್ ಬ್ರೇಕ್!.

2ನೇ ದಿನದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನಿವಾರ್ಯವಾಗಿ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ರೋಹಿತ್ ಶರ್ಮಾ 38 ಹಾಗೂ ಗಿಲ್ 28 ರನ್ ಸಿಡಿಸಿ ಔಟಾದರು.

ಚೇತೇಶ್ವರ್ ಪೂಜಾರ 8 ರನ್ ಸಿಡಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಹೋರಾಟ ಟೀಂ ಇಂಡಿಯಾಗೆ ನೆರವಾಯಿತು. ಕೊಹ್ಲಿ ದಿಟ್ಟ ಹೋರಾಟ ನೀಡೋ ಮೂಲಕ ಸುನಿಲ್ ಗವಾಸ್ಕರ್ ದಾಖಲೆ ಸರಿಗಟ್ಟಿದರು. ಗವಾಸ್ಕರ್ 92 ಪಂದ್ಯದಿಂದ 7,500 ರನ್ ಪೂರೈಸಿದ್ದರು. ಇದೀಗ ಕೊಹ್ಲಿ ಕೂಡ 92 ಪಂದ್ಯಗಳ 154 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್!

ಕೊಹ್ಲಿ ಅಜೇಯ 44 ರನ್ ಸಿಡಿಸಿದರೆ, ರಾಹನೆ ಅಜೇಯ 29 ರನ್ ಸಿಡಿಸಿದರು. ಈ ವೇಳೆ ಮಂದ ಬೆಳಕಿನ ಕಾರಣ ಪಂದ್ಯ ಸ್ಥಗಿತಗೊಂಡಿತು. ಆದರೆ ಮತ್ತೆ ಪಂದ್ಯ ಪುನರ್ ಆರಂಭಿಸಲು ಮಳೆ ಮೋಡ ಅನುವು ಮಾಡಿಕೊಡಲಿಲ್ಲ. ಹೀಗಾಗಿ 2ನೇ ದಿನದಾಟ ಅಂತ್ಯಗೊಂಡಿತು.

click me!