WTCfinal; ಕೊಹ್ಲಿ, ರಹಾನೆ ಹೋರಾಟಕ್ಕೆ ಬ್ಯಾಡ್ ಲೈಟ್ ಬ್ರೇಕ್!

Published : Jun 19, 2021, 10:00 PM IST
WTCfinal; ಕೊಹ್ಲಿ, ರಹಾನೆ ಹೋರಾಟಕ್ಕೆ ಬ್ಯಾಡ್ ಲೈಟ್ ಬ್ರೇಕ್!

ಸಾರಾಂಶ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕಾಡುತ್ತಿದೆ ಮಳೆ 3 ವಿಕೆಟ್ ಕಳೆದುಕೊಂಡ ಭಾರತಕ್ಕೆ ಕೊಹ್ಲಿ, ರಹಾನೆ ಆಸರೆ

ಸೌಥಾಂಪ್ಟನ್(ಜೂ.19):  ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ಆಟಕ್ಕಿಂತ ಮಳೆರಾಯನ ಆರ್ಭಟವೇ ಹೆಚ್ಚಾಗಿದೆ. ಮೊದಲ ದಿನ ಸಂಪೂರ್ಣವಾಗಿ ಆಹುತಿ ಪಡೆದ ಮಳೆರಾಯದ ಇದೀಗ 2ನೇ ದಿನದಾಟದ ಅಂತಿಮ ಸೆಶನ್‌‌ಗೆ ಕಾಟ ನೀಡಿದೆ. ಮಳೆ ಹಾಗೂ ಬ್ಯಾಡ್ ಲೈಟ್ ಪರಿಣಾಣ ಆಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

 

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಕೊಹ್ಲಿ ದಿಟ್ಟ ಬ್ಯಾಟಿಂಗ್

ಅಂತಿಮ ಸೆಶನ್ ಆಟಕ್ಕೆ ಮೋಡ ಕವಿದ ವಾತಾವರಣ ಮುಳುವಾಗಿದೆ. ಮಂದ ಬೆಳಕಿನ ಕಾರಣ ಆಟ ಸ್ಥಗಿತಗೊಳಿಸಲಾಗಿದೆ. 2ನೇ ದಿನದಾಟದ ಆರಂಭದಿಂದಲೇ ಟೀಂ ಇಂಡಿಯಾ ಸವಾಲುಗಳನ್ನು ಎದುರಿಸುತ್ತಲೇ ಇದೆ. ಟಾಸ್ ಸೋತು ಕಾರಣ ಬ್ಯಾಟಿಂಗ್ ಇಳಿದ ಭಾರತ ಉತ್ತಮ ಆರಂಭ ಪಡೆಯಿತು. ಆದರೆ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಜೊತೆಯಾಟ 62 ರನ್‌ಗೆ ಅಂತ್ಯವಾಯಿತು.

 

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್

ರೋಹಿತ್ ಶರ್ಮಾ 34 ರನ್ ಸಿಡಿಸಿ ಔಟಾದ ಬೆನ್ನಲ್ಲೇ, ಗಿಲ್ 28 ರನ್ ಸಿಡಿಸಿ ಔಟಾದರು. ಚೇತೇಶ್ವರ್ ಪೂಜಾರ 8 ರನ್ ಸಿಡಿಸಿ ಔಟಾದರು. 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಆಸರೆಯಾದರು. ಕೊಹ್ಲಿ ಹಾಗೂ ರಹಾನೆ ಜೊತೆಯಾಟಕ್ಕೆ ಮಳೆ ಮೋಡ  ಬ್ರೇಕ್ ಹಾಕಿದೆ.  ಮಂದ ಬೆಳಕು ಪಂದ್ಯ ಮತ್ತೆ ಆರಂಭಿಸಲು ಅನುವು ಮಾಡಿಕೊಟ್ಟಿಲ್ಲ.

ಸದ್ಯ ಭಾರತ 3 ವಿಕೆಟ್ ನಷ್ಟಕ್ಕೆ 146 ರನ್ ಸಿಡಿಸಿದೆ. ಕೊಹ್ಲಿ ಅಜೇಯ 44 ರನ್ ಹಾಗೂ ರಹಾನೆ 29 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ