WTC final: ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ ಔಟ್; ಸಂಕಷ್ಟದಲ್ಲಿ ಭಾರತ!

Published : Jun 20, 2021, 04:00 PM ISTUpdated : Jun 20, 2021, 04:08 PM IST
WTC final: ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ ಔಟ್; ಸಂಕಷ್ಟದಲ್ಲಿ ಭಾರತ!

ಸಾರಾಂಶ

ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪತನ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡ ಭಾರತ ವಿಶ್ವ ಟೆಸ್ಟ್ ಟಾಂಪಿಯನ್‌ಶಿಪ್ ಫೈನಲ್ ಪಂದ್ಯ  

ಸೌಥಾಂಪ್ಟನ್(ಜೂ.20):  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪೈನಲ್ ಪಂದ್ಯ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಮಳೆ ಕಾರಣ ವಿಳಂಭವಾಗಿ ಆರಂಭಗೊಂಡ 3ನೇ ದಿನದಾಟ ಆರಂಭದಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಕಾರಣ ತಂಡಕ್ಕೆ ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಿದೆ.

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್!.

2ನೇ ದಿನದಾಟದಲ್ಲಿ ಟೀಂ ಇಂಡಿಯಾಗೆ ಆಸರೆಯಾಗಿದ್ದ ಕೊಹ್ಲಿ ಅಜೇಯ 44 ರನ್ ಸಿಡಿಸಿದ್ದರು. ರಹಾನೆ ಹಾಗೂ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ತಿರುಗೇಟು ನೀಡುವ ಸೂಚನೆ ನೀಡಿತ್ತು. ಆದರೆ 3ನೇ ದಿನದಾಟ ಆರಂಭವಾದ ಬೆನ್ನಲ್ಲೇ ಕೊಹ್ಲಿ ವಿಕೆಟ್ ಪತನಗೊಂಡಿದೆ. 

ಮಿಲ್ಖಾ ಸಿಂಗ್‌ಗೆ ಗೌರವ ನಮನ; WCTfinal ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ!.

44 ರನ್ ಸಿಡಿಸಿದ ವಿರಾಟ್ ಕೊಹ್ಲಿ LBW ಮೂಲಕ ವಿಕೆಟ್ ಕೈಚೆಲ್ಲಿದರು. ಈ ಮೂಲಕ ಭಾರತ 149 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಸದ್ಯ ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಹೋರಾಟದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದರೆ ಒದ್ದೆಯಾದ ಮೈದಾನ, ತೇವಾಂಶದ ಪಿಚ್‌ನಲ್ಲಿ ವಿಕೆಟ್ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?