
ನವದೆಹಲಿ(ಜೂ.21): ಭಾರತ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸ್ಪಿನ್ನರ್ ಆಡಿಸದ ನ್ಯೂಜಿಲೆಂಡ್ ತಂಡದ ನಿರ್ಧಾರವನ್ನು ಟ್ವೀಟರಲ್ಲಿ ಟೀಕಿಸಿದ್ದಕ್ಕೆ ಆಸ್ಪ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್‌ಗೆ ಕ್ರಿಕೆಟ್ ಅಭಿಮಾನಿಯೊಬ್ಬ ಸ್ಪಿನ್ ಪಾಠ ಮಾಡಿದ್ದಾನೆ.
‘ಈ ಪಿಚ್‌ನಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಆಡಿಸದೆ ಇರುವುದು ನಿರಾಸೆ ಮೂಡಿಸಿದೆ. ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುತ್ತಿದ್ದು, ಉತ್ತಮ ನಿರ್ಧಾರ ಎನಿಸುತ್ತಿದೆ’ ಎಂದು ವಾರ್ನ್ ಟ್ವೀಟಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿ ‘ವಾರ್ನ್ ನಿಮಗೆ ಸ್ಪಿನ್ ಹೇಗೆ ವರ್ಕ್ ಆಗುತ್ತೆ ಗೊತ್ತಾ?, ಪಿಚ್ ಒಣಗಿದರಷ್ಟೇ ಚೆಂಡು ಸ್ಪಿನ್ ಆಗಲಿದೆ. ಮಳೆ ಬೀಳುತ್ತಲೇ ಇರುವಾಗ ಸ್ಪಿನ್ ಹೇಗೆ ಆಗುತ್ತೆ’ ಎಂದಿದ್ದಾನೆ. ಈ ಟ್ವೀಟ್ ಭಾರೀ ವೈರಲ್ ಆಗಿದೆ.
ಈ ಟ್ವೀಟ್ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸ್ಪಿನ್ ಕುರಿತಂತೆ ಅರ್ಥಮಾಡಿಕೊಳ್ಳಲು ವಾರ್ನ್ ಇದನ್ನು ಫ್ರೇಮ್ ಮಾಡಿಟ್ಟುಕೊಳ್ಳಲಿ ಎಂದು ತಮಾಷೆ ಮಾಡಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 217 ರನ್ ಬಾರಿಸಿ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿದೆ. ನಾಲ್ಕನೇ ದಿನದಾಟದಲ್ಲಿ ಪಿಚ್ ಯಾವ ರೀತಿ ವರ್ತಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.