WPL Auction ಮತ್ತೆರಡು ಪ್ಲೇಯರ್ಸ್ ಖರೀದಿಸಿ ಆರ್‌ಸಿಬಿ, ಹರ್ಮನ್‌ಪ್ರೀತ್ 1.8 ಕೋಟಿ ರೂಗೆ ಮುಂಬೈ ಪಾಲು!

Published : Feb 13, 2023, 03:50 PM ISTUpdated : Feb 13, 2023, 03:58 PM IST
WPL Auction ಮತ್ತೆರಡು ಪ್ಲೇಯರ್ಸ್ ಖರೀದಿಸಿ ಆರ್‌ಸಿಬಿ, ಹರ್ಮನ್‌ಪ್ರೀತ್ 1.8 ಕೋಟಿ ರೂಗೆ ಮುಂಬೈ ಪಾಲು!

ಸಾರಾಂಶ

ಮಹಿಳಾ ಐಪಿಎಲ್ ಹರಾಜು ಭಾರಿ ಸಂಚಲನ ಸೃಷ್ಟಿಸಿದೆ. ಸ್ಮೃತಿ ಮಂದನಾ ಇದುವರೆಗೆ ಗರಿಷ್ಠ ಮೊತ್ತಕ್ಕೆ ಹರಾಗಿದ್ದರೆ, ಹರ್ಮನ್ ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.ಮಹಿಳಾ IPL ಹರಾಜಿನ ಅಪ್‌ಡೇಟ್ ಇಲ್ಲಿದೆ.  

ಬೆಂಗಳೂರು(ಫೆ.13): ಐಪಿಎಲ್ ಮಹಿಳಾ ಹರಾಜು ತೀವ್ರ ಕುತೂಹಲಕ್ಕೆ ಕಾರಣಾಗಿದೆ. ಇದೇ ಮೊದಲ ಬಾರಿ ನಡೆಯುತ್ತಿರುವ ಹರಾಜಿನಲ್ಲಿ ಹಲವು ದಾಖಳೆಗಳು ನಿರ್ಮಾಣವಾಗಿದೆ.  ಸ್ಮೃತಿ ಮಂದನಾಗೆ 3.4 ಕೋಟಿ ರೂಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ಹರ್ಮನ್‌ಪ್ರೀ್ ಕೌರ್‌ಗೆ 1.8 ಕೋಟಿ ರೂಪಾಯಿ ನೀಡಿ ಖರೀದಿಸಿದೆ.ಹರ್ಮನ್‌ಪ್ರೀತ್ ಕೌರ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ತಂಡದಿಂದ ತೀವ್ರ ಪೈಪೋಟಿ ಎದುರಾಗಿತ್ತು.ಆದರೆ ಮುಂಬೈ ಇಂಡಿಯನ್ಸ್ ಅಂತಿಮ ಹಂತದಲ್ಲಿ 1.8 ಕೋಟಿ ರೂಪಾಯಿಗೆ ಖರೀದಿಸಿತು.

ಮಹಿಳಾ ಐಪಿಎಲ್(Women Premier League 2023) ಹರಾಜಿನಲ್ಲಿ ಸೇಲ್ ಆದ ಎರಡನೇ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬೈ ಇಂಡಿಯನ್ಸ್ (Mumbai indians) ತಂಡ ಪ್ರಮುಖ ಆಟಗಾರ್ತಿಯರ ಖರೀದಿಗೆ ಮನಸ್ಸು ಮಾಡಿದೆ. ಇಂಗ್ಲೆಂಡ್‌ನ ನಟಲಿ ಕ್ಸಿವರ್‌ಗೆ 3.2 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿದೆ. ನ್ಯೂಜಿಲೆಂಡ್ ಆಲ್ರೌಂಡರ್ ಮೇಲಿ ಕೇರ್‌ಗೆ 1 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ.

WPL Auction: ಹರಾಜಿನಲ್ಲಿ RCB ಭರ್ಜರಿ ಭೇಟೆ, ತಾರಾ ವಿದೇಶಿ ಆಟಗಾರ್ತಿಯರು ಬೆಂಗಳೂರು ತೆಕ್ಕೆಗೆ..!

ಸ್ಮೃತಿ ಮಂದನಾ ಖರೀದಿಗೂ  ಮುಂಬೈ ಇಂಡಿಯನ್ಸ್ ಮಗಿಬಿದ್ದಿತ್ತು. ಆದರೆ ಆರ್‌ಸಿಬಿ ಜೊತೆ ತೀವ್ರ ಪೈಪೋಟಿ ಎದುರಿಸಿತ್ತು. ಆದರೆ 3.4 ಕೋಟಿ ರೂಪಾಯಿ ನೀಡುವ ಮೂಲಕ ಆರ್‌ಸಿಬಿ ಖರೀದಿಸಿದೆ. ಸ್ಮೃತಿ ಮಂದನಾ ಖರೀದಿಸಿದ ಬಳಿಕ ಆರ್‌ಸಿಬಿ ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್‌ಗೆ ಮೂಲ ಬೆಲೆ 50 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಭಾರತ ಮಹಿಳಾ ತಂಡದ ಆಟಗಾರ್ತಿ ರೇಣುಕಾ ಸಿಂಗ್‌ಗೆ 1.5 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ. 

ಇತ್ತ ಗುಜರಾತ್ ಜೈಂಟ್ಸ್ ಮಹಿಳಾ ಫ್ರಾಂಚೈಸಿ ಕೂಡ ದಿಗ್ಗಜ ಆಟಗಾರ್ತಿಯರ್ನೇ ಟಾರ್ಗೆಟ್ ಮಾಡಿದೆ. ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸುತ್ತಿರುವ ಆಟಗಾರ್ತಿಯರನ್ನು ಗುಜರಾತ್ ಖರೀದಿಗೆ ಮುಂದಾಗುತ್ತಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೇ ಗಾರ್ಡ್ನರ್‌ಗೆ 3.2 ಕೋಟಿ ರೂಪಾಯಿ ನೀಡಿ ಗುಜರಾತ್ ಜೈಂಟ್ಸ್ ತಂಡ ಖರೀದಿಸಿದೆ.

ಹರಾಜು ಪಟ್ಟಿ​ಯಲ್ಲಿರುವ ಒಟ್ಟು ಭಾರತೀಯ ಆಟಗಾರ್ತಿಯರು.
ಇದೇ ಮೊದಲ ಬಾರಿಗೆ ನಡೆಯುತ್ತಿರುವ ಮಹಿಳಾ ಐಪಿಎಲ್ ಹರಾಜಿನಲ್ಲಿ ಒಟ್ಟು 90 ಆಟಗಾರ್ತಿಯರು ಪಾಲ್ಗೊಂಡಿದ್ದಾರೆ. 5 ತಂಡಗಳು ಆಟಗಾರ್ತಿಯರನ್ನು ಹರಾಜಿನ ಮೂಲಕ ಖರೀದಿಸುತ್ತಿದೆ. ಪ್ರತಿ ತಂಡ ಹರಾಜಿನಲ್ಲಿ ಗರಿಷ್ಠ 12 ಕೋಟಿ ರೂಪಾಯಿ ಬಳಕೆ ಮಾಡಲು ಅವಕಾಶ ನೀಡಲಿದೆ. 12 ಕೋಟಿ ರೂಪಾಯಿ ಮೊತ್ತದಲ್ಲಿ ಸಂಪೂರ್ಣ ತಂಡ ಖರೀದಿ ಮಾಡಬೇಕಿದೆ.  ಮತ್ತೊಂದು ವಿಶೇಷತೆ ಅಂದರೆ ಈ ಬಾರಿಯ ಹರಾಜಿನಲ್ಲಿ ಕರ್ನಾಟದ 21 ಆಟಗಾರ್ತಿಯರು ಪಾಲ್ಗೊಂಡಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!