WPL Auction: ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!

Published : Feb 13, 2023, 02:57 PM IST
WPL Auction: ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!

ಸಾರಾಂಶ

ಸ್ಮೃತಿ ಮಂಧನಾರನ್ನು ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂಧನಾ 3.40 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮುಂಬೈ(ಫೆ.13): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಮೊದಲ ಸ್ಥಾನದಲ್ಲೇ ಸ್ಮೃತಿ ಮಂಧನಾ ಖರೀದಿಸಿಲು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ

50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂಧನಾ ಖರೀದಿಸಲು ಮುಂಬೈ ಹಾಗೂ ಆರ್‌ಸಿಬಿ ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತಾದರೂ 3.40 ಕೋಟಿ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಆರ್‌ಸಿಬಿ ಫ್ರಾಂಚೈಸಿ ಯಶಸ್ವಿಯಾಯಿತು. ಇನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕ ಹರ್ಮನ್‌ಪ್ರೀತ್ ಕೌರ್ ಅವರನ್ನು 1.80 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನು ಕೌರ್ ಕೂಡಾ ಮೂಲ ಬೆಲೆ 50 ಲಕ್ಷ ರುಪಾಯಿ ಹೊಂದಿದ್ದರು.

ಇನ್ನು ಸೋಫಿ ಡಿವೈನ್ ಅವರನ್ನು ಮೂಲ ಬೆಲೆ 50 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಯಶಸ್ವಿಯಾಯಿತು.

ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಮ​ಹಿಳಾ ಐಪಿ​ಎ​ಲ್‌​)ನ ಹರಾ​ಜು ಪ್ರಕ್ರಿ​ಯೆ ಇಂದು ಮುಂಬೈ​ನಲ್ಲಿ ಆರಂಭವಾಗಿದ್ದು, 246 ಭಾರ​ತೀ​ಯರು ಸೇರಿ​ದಂತೆ ಒಟ್ಟು 409 ಆಟ​ಗಾ​ರ್ತಿಯರು ವಿವಿಧ ತಂಡ​ಗ​ಳಿಗೆ ಬಿಕ​ರಿ​ಯಾ​ಗುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

ಪಟ್ಟಿ​ಯಲ್ಲಿ 163 ವಿದೇಶಿ ಆಟ​ಗಾರ್ತಿಯರ ಜೊತೆ​ಗೆ, 199 ಅಂತಾ​ರಾ​ಷ್ಟ್ರೀಯ ಪಂದ್ಯ​ವಾ​ಡ​ದ​ ಆಟ​ಗಾ​ರ್ತಿಯರೂ ಇದ್ದಾರೆ. ಟೂರ್ನಿಯ 5 ತಂಡ​ಗಳು ಹರಾ​ಜಿ​ನಲ್ಲಿ ಪಾಲ್ಗೊ​ಳ್ಳ​ಲಿದ್ದು ಕನಿಷ್ಠ 30 ವಿದೇ​ಶಿ​ಗರು ಸೇರಿ ಗರಿಷ್ಠ 90 ಆಟ​ಗಾ​ರ್ತಿಯರು ಬಿಕ​ರಿ​ಯಾ​ಗಬಹುದು. ಪ್ರತೀ ತಂಡ ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಿಬಹುದಾಗಿದ್ದು, ಗರಿಷ್ಠ 12 ಕೋಟಿ ರು. ಬಳ​ಸ​ಬ​ಹು​ದಾ​ಗಿ​ದೆ. 24 ಅಟಗಾ​ರ್ತಿ​ಯರು ಗರಿಷ್ಠ ಅಂದರೆ 50 ಲಕ್ಷ ರು. ಮೂಲ​ಬೆಲೆ, 30 ಅಟ​ಗಾ​ರ್ತಿ​ಯರು 40 ಲಕ್ಷ ರು. ಮೂಲ​ಬೆ​ಲೆಯ ಪಟ್ಟಿ​ಯ​ಲ್ಲಿ​ದ್ದಾರೆ.

ವೇದಾ ಕೃಷ್ಣ​ಮೂರ್ತಿ, ರಾಜೇ​ಶ್ವರಿ, ವೃಂದಾ ಸೇರಿ​ದಂತೆ ಕರ್ನಾ​ಟ​ಕದ 21 ಆಟ​ಗಾ​ರ್ತಿ​ಯರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರೇಂದ್ರ ಸೆಹ್ವಾಗ್ ಜೆರ್ಸಿ ನಂಬರ್‌ 3 ಸಲ ಬದಲಾಗಿದ್ದೇಕೆ? ಅತ್ತೆ-ಸೊಸೆ ಜಗಳ ನಿಲ್ಲಿಸಲು ವೀರೂ ಮಾಡಿದ್ದೇನು?
ವಿಜಯ್ ಹಜಾರೆ ಟ್ರೋಫಿ: ಮುಂಬೈ ಬಗ್ಗುಬಡಿದು ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ! ಮತ್ತೆ ಅಬ್ಬರಿಸಿದ ಪಡಿಕ್ಕಲ್