WPL 2024: ಆರ್‌ಸಿಬಿಗೆ ಸತತ 2ನೇ ಸೋಲಿನ ಕಹಿ!

Published : Mar 03, 2024, 09:15 AM IST
WPL 2024: ಆರ್‌ಸಿಬಿಗೆ ಸತತ 2ನೇ ಸೋಲಿನ ಕಹಿ!

ಸಾರಾಂಶ

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಆರ್‌ಸಿಬಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಪವರ್‌-ಪ್ಲೇ ಮುಗಿಯುವ ಮೊದಲೇ ಸ್ಮೃತಿ ಮಂಧನಾ, ಎಸ್‌.ಮೇಘನಾ ಹಾಗೂ ಸೋಫಿ ಡಿವೈನ್‌ರ ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ, ಎಲೈಸಿ ಪೆರ್ರಿಯ ಹೋರಾಟದಿಂದ 20 ಓವರಲ್ಲಿ 6 ವಿಕೆಟ್‌ಗೆ 131 ರನ್‌ ಗಳಿಸಿತು.

ಬೆಂಗಳೂರು: ಕಳೆದ ಪಂದ್ಯದಲ್ಲಿ ಫೀಲ್ಡಿಂಗ್‌ ಹಾಗೂ ಬೌಲಿಂಗ್‌ ವೈಫಲ್ಯ ಅನುಭವಿಸಿದ್ದ ಆರ್‌ಸಿಬಿ, ಶನಿವಾರ ನಡೆದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಗಿ 7 ವಿಕೆಟ್‌ಗಳ ಸೋಲು ಅನುಭವಿಸಿತು. ಸತತ 2 ಸೋಲು ಕಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದರೆ, 3ನೇ ಗೆಲುವು ದಾಖಲಿಸಿದ ಮುಂಬೈ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿನ ಪ್ರದರ್ಶನ ಆರ್‌ಸಿಬಿ, ತನ್ನ ತಾರಾ ಆಟಗಾರ್ತಿಯರ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತಗೊಂಡಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಂತಿತ್ತು.

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಆರ್‌ಸಿಬಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಪವರ್‌-ಪ್ಲೇ ಮುಗಿಯುವ ಮೊದಲೇ ಸ್ಮೃತಿ ಮಂಧನಾ, ಎಸ್‌.ಮೇಘನಾ ಹಾಗೂ ಸೋಫಿ ಡಿವೈನ್‌ರ ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ, ಎಲೈಸಿ ಪೆರ್ರಿಯ ಹೋರಾಟದಿಂದ 20 ಓವರಲ್ಲಿ 6 ವಿಕೆಟ್‌ಗೆ 131 ರನ್‌ ಗಳಿಸಿತು.

ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಹಿಡಿಶಾಪ ಹಾಕಿದ ಫ್ಯಾನ್ಸ್

ಸುಲಭ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌, ತನ್ನ ಕಾಯಂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ರ ಅನುಪಸ್ಥಿತಿಯಲ್ಲೂ ಧೃತಿಗೆಡದೆ ನಿರಾಯಾಸವಾಗಿ ಗುರಿ ತಲುಪಿತು. ಯಸ್ತಿಕಾ ಭಾಟಿಯಾ 15 ಎಸೆತದಲ್ಲಿ 31 ರನ್‌ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರೆ, ಅಮೆಲಿಯಾ ಕೆರ್ರ್‌ 24 ಎಸೆತದಲ್ಲಿ ಔಟಾಗದೆ 40, ನಾಯಕಿ ನಥಾಲಿ ಸ್ಕೀವರ್‌ 27, ಹೇಯ್ಲಿ ಮ್ಯಾಥ್ಯೂಸ್‌ 26 ರನ್‌ ಕೊಡುಗೆ ನೀಡಿದರು. ಮುಂಬೈ ಇನ್ನೂ 4.5 ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಒಂದೂ ಸಿಕ್ಸ್‌ ಇಲ್ಲ!: ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳಿಗೆ ಕೊರತೆ ಕಂಡುಬಂದಿತು. ಪೆರ್ರಿ 5 ಬೌಂಡರಿ ಬಾರಿಸಿದರೆ, ಜಾರ್ಜಿಯಾ ವೇರ್‌ಹ್ಯಾಮ್‌ 3 ಬೌಂಡರಿ ಗಳಿಸಿದರು. ಬ್ಯಾಟ್‌ ಮಾಡಿದ ಇನ್ನುಳಿದ ಎಲ್ಲರೂ ತಲಾ 1 ಬೌಂಡರಿ ಗಳಿಸಿದರಷ್ಟೇ. ತಂಡದ ಇನ್ನಿಂಗ್ಸಲ್ಲಿ ಒಂದೂ ಸಿಕ್ಸರ್‌ ಇರಲಿಲ್ಲ. ಸ್ಮೃತಿ (09), ಡಿವೈನ್‌ (09), ಮೇಘನಾ (11), ರಿಚಾ (07) ವೈಫಲ್ಯ ಕಂಡರು. ಪೆರ್ರಿ ಔಟಾಗದೆ 44, ವೇರ್‌ಹ್ಯಾಮ್‌ 27 ರನ್‌ ಗಳಿಸಿದರು.

'ವಿರಾಟ್ ಕೊಹ್ಲಿ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿ ತಪ್ಪಿಸಿಕೊಂಡಿದ್ದು ನಾಚಿಕೆಗೇಡು'

ಸ್ಕೋರ್‌:

ಆರ್‌ಸಿಬಿ 20 ಓವರಲ್ಲಿ 131/6 (ಪೆರ್ರಿ 44, ಜಾರ್ಜಿಯಾ 27, ಪೂಜಾ 2-14)

ಮುಂಬೈ 15.1 ಓವರಲ್ಲಿ 133/3 (ಅಮೆಲಿಯಾ 40*, ಯಸ್ತಿಕಾ 31, ಶ್ರೇಯಾಂಕ 1-15)

ಐಪಿಎಲ್‌: ಲಖನೌಗೆ ಲ್ಯಾನ್ಸ್‌ ಕ್ಲೂಸ್ನರ್‌ ಕೋಚ್‌

ಲಖನೌ: ಮುಂಬರುವ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್ರೌಂಡರ್‌ ಲ್ಯಾನ್ಸ್‌ ಕ್ಲೂಸ್ನರ್‌, ಲಖನೌ ಸೂಪರ್‌ ಜೈಂಟ್ಸ್‌ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಧಾನ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಜೊತೆ ಕ್ಲೂಸ್ನರ್‌ ಕಾರ್ಯನಿರ್ವಹಿಸಲಿದ್ದಾರೆ. ದ.ಆಫ್ರಿಕಾ ಟಿ20 ಲೀಗ್‌ನಲ್ಲಿ ಲಖನೌ ಫ್ರಾಂಚೈಸಿಯ ಡರ್ಬನ್‌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಕ್ಲೂಸ್ನರ್‌ ಪ್ರಧಾನ ಕೋಚ್‌ ಆಗಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!