WPL 2023 ಪುರುಷರ ತಂಡದ ಹಾದಿ ಹಿಡಿಯಿತಾ ಆರ್‌ಸಿಬಿ ವುಮೆನ್ಸ್? ಮತ್ತೆ ಮುಗ್ಗರಿಸಿದ ಬೆಂಗಳೂರು!

Published : Mar 06, 2023, 11:59 PM IST
WPL 2023 ಪುರುಷರ ತಂಡದ ಹಾದಿ ಹಿಡಿಯಿತಾ ಆರ್‌ಸಿಬಿ ವುಮೆನ್ಸ್? ಮತ್ತೆ ಮುಗ್ಗರಿಸಿದ ಬೆಂಗಳೂರು!

ಸಾರಾಂಶ

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವುಮೆನ್ಸ್ ಸತತ 2ನೇ ಸೋಲು ಕಂಡಿದೆ. ಮಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ ಬೆಂಗಳೂರು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಪುರುಷರ ತಂಡದಂತೆ ಮಹಿಳಾ ತಂಡ ಸೋಲು ಕಾಣುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಮುಂಬೈ(ಮಾ.06): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡ. ಆದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಬಹುತೇಕ ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಪುರುಷರ ತಂಡದ ಹಾದಿಯಲ್ಲೇ ಸಾಗುತ್ತಿದೆ ಅನ್ನೋ ಟ್ರೋಲ್ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಕಾರಣ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವುಮೆನ್ಸ್ ಸತತ 2ನೇ ಸೋಲು ಕಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಹೀನಾಯ ಸೋಲು ಕಂಡಿದೆ.ಈ ಮೂಲಕ ಸೋಲಿನ ಸಂಖ್ಯೆಯನ್ನು 2ಕ್ಕೇರಿಸಿದೆ.

ಆರ್‌ಸಿಬಿ ವುಮೆನ್ಸ್ ತಿಣುಕಾಡಿ 155 ರನ್ ಸಿಡಿಸಿತ್ತು. 156 ರನ್ ಗುರಿಯನ್ನು ಮುಂಬೈ ಇಂಡಿಯನ್ಸ್ ವುಮೆನ್ಸ್ 1 ವಿಕೆಟ್ ಕಳೆದುಕೊಂಡು 14.2 ಓವರ್‌ಗಳಲ್ಲಿ ಗೆದ್ದುಕೊಂಡಿತು. 9 ವಿಕೆಟ್ ಭರ್ಜರಿ ಗೆಲುವು ಕಂಡ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತ ಸತತ 2 ಸೋಲು ಕಂಡ ಆರ್‌ಸಿಬಿ ವುಮೆನ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕೊನೆಯ ಸ್ಥಾನ 2 ಪಂದ್ಯ ಸೋತಿರುವ ಗುಜರಾತ್ ಜೈಂಟ್ಸ್ ಪಾಲಾಗಿದೆ.

IPL ಟೂರ್ನಿ ನೀತಿಯಲ್ಲಿ ಮಹತ್ವದ ಬದಲಾವಣೆ, ವೈಡ್ ನೋ ಬಾಲ್‌ ಖಚಿತಪಡಿಸಲು DRS ಅವಕಾಶ!

ಸುಲಭ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡ ಯಾವುದೇ ಹಂತದಲ್ಲಿ ಆತಂಕಕ್ಕೆ ಒಳಗಾಗಲಿಲ್ಲ. ಪುರಷರ ತಂಡದಲ್ಲಿರುವಂತೆ ಆರ್‌ಸಿಬಿ ಮಹಿಳಾ ತಂಡದಲ್ಲಿ ಬೌಲಿಂಗ್ ಸಮಸ್ಯೆ ಎರಡೂ ಪಂದ್ಯದಲ್ಲಿ ತಲೆದೋರಿದೆ. ಮೊದಲ ಪಂದ್ಯದಲ್ಲಿ 222 ರನ್ ಬಿಟ್ಟುಕೊಟ್ಟಿದ್ದರೆ. ಈ ಪಂದ್ಯದಲ್ಲಿ 155 ರನ್ ಡಿಫೆಂಡ್ ಮಾಡಿಕೊಳ್ಳುವುದು ದೂರದ ಮಾತು, ಕನಿಷ್ಠ ಹೋರಾಟ ನೀಡಲು ಸಾಧ್ಯವಾಗಿಲ್ಲ.

ಹೈಲೇ ಮ್ಯಾಥ್ಯೂಸ್ ಹಾಗೂ ಯಾಸ್ತಿಕಾ ಭಾಟಿಯಾ ಜೊತೆಯಾಟ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿ ಸುಗಮಗೊಳಿಸಿತು. ಯಾಸ್ತಿಕಾ ಬಾಟಿಯಾ 23 ರನ್ ಸಿಡಿಸಿ ಔಟಾದರು . ಆದರೆ ಮ್ಯಾಥ್ಯೂಸ್ ಸ್ಫೋಟಕ ಬ್ಯಾಟಿಂಗ್ ಆರ್‌ಸಿಬಿ ವುಮೆನ್ಸ್ ತಂಡದ ಸೋಲು ಖಚಿತಪಡಿಸಿತು. ನ್ಯಾಟ್ ಸ್ಕಿವಿಯರ್ ಬ್ರಂಟ್ ಜೊತೆ ಸೇರಿದ ಮ್ಯಾಥ್ಯೂಸ್ ಹೊಡಿ ಬಡಿ ಆಟವಾಡಿದರು. ಮ್ಯಾಥ್ಯೂಸ್ ಹಾಗೂ ಬ್ರಂಟ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಮ್ಯಾಥ್ಯೂಸ್ ಅಜೇಯ 77ರನ್  ಸಿಡಿಸಿದರೆ, ಬ್ರಂಟ್ 55 ರನ್ ಸಿಡಿಸಿದರು. 14.2 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್ ಭರ್ಜರಿ ಗೆಲುವು ಕಂಡಿತು.

WPL 2023 ಮುಂಬೈ ಇಂಡಿಯನ್ಸ್ ದಾಳಿಗೆ ತಿಣುಕಾಡಿದ ಆರ್‌ಸಿಬಿ ವುಮೆನ್ಸ್, 155 ರನ್‌ಗೆ ಆಲೌಟ್

ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್ಸ್ 18.4 ಓವರ್‌ಗಳಲ್ಲಿ 155 ರನ್‌ಗೆ ಆಲೌಟ್ ಆಯಿತು. ಆರ್‌ಸಿಬಿ ಬ್ಯಾಟರ್‌ಗಳಿಂದ ಉತ್ತಮ ರನ್ ಹರಿದು ಬರಲಿಲ್ಲ. ನಾಯಕಿ ಸ್ಮೃತಿ ಮಂಧನಾ 23 ರನ್ ಸಿಡಿಸಿ ಔಟಾದರೆ, ರಿಷಾ ಘೋಷ್ 28 ರನ್ ಸಿಡಿಸಿದರು. ಕಾನಿಕಾ ಅಹುಜಾ 22 ರನ್, ಶ್ರೇಯಾಂಕ ಪಾಟೀಲ್ 23 ರನ್ ಸಿಡಿಸಿ ನಿರ್ಗಮಿಸಿದರು. ಇತತರೂ ಅಬ್ಬರಿಸಲಿಲ್ಲ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್‌ ಶರ್ಮ ಐಪಿಎಲ್‌ ಸ್ಯಾಲರಿಗಿಂತ ಹೆಚ್ಚಿನ ಮೊತ್ತಕ್ಕೆ ಐಷಾರಾಮಿ ಮನೆ ಖರೀದಿಸಿದ ಪತ್ನಿ ರಿತಿಕಾ
ಬಾಂಗ್ಲಾದೇಶ ಕ್ರಿಕೆಟರ್ ಮುಸ್ತಾಫಿಜುರ್ ರಹಮಾನ್ ಪತ್ನಿ ಓದಿದ್ದೆಷ್ಟು?