
ಮುಂಬೈ(ಮಾ.06): ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ತನ್ನ ಎರಡನೇ ಪಂದ್ಯದಲ್ಲಿ ತಿಣುಕಾಡಿದೆ. ಮುಂಬೈ ಇಂಡಿಯನ್ಸ್ ದಾಳಿಗೆ ಅಬ್ಬರಿಸಲು ವಿಫಲವಾದ ಆರ್‌ಸಿಬಿ 155 ರನ್ ಸಿಡಿಸಿ ಆಲೌಟ್ ಆಗಿದೆ. 18.4 ಓವರ್‌ಗಳಲ್ಲಿ ತನ್ನಲ್ಲೆ ವಿಕೆಟ್ ಕಳೆದುಕೊಂಡಿತು. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಬೌಲಿಂಗ್‌ನಲ್ಲಿ ದುಬಾರಿಯಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 222 ರನ್ ಬಿಟ್ಟುಕೊಟ್ಟಿತು. ಹೀಗಾಗಿ ಈ ಪಂದ್ಯದಲ್ಲಿ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಪಂದ್ಯದಲ್ಲಿ ಬಿಟ್ಟುಕೊಟ್ಟ ರನ್‌ಗೆ ಪ್ರತಿಯಾಗಿ ರನ್ ಸಿಡಿಸುವ ಲೆಕ್ಕಾಚಾರ ಹಾಕಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಲು ತಯಾರಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ದಾಳಿ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತು. 39 ರನ್‌ಗಳಿಗೆ ಆರ್‌ಸಿಬಿ ಮೊದಲ ವಿಕೆಟ್ ಕಳೆದುಕೊಂಡಿತು. ಸೋಫಿ ಡಿವೈನ್ 16 ರನ್ ಸಿಡಿಸಿ ನಿರ್ಗಮಿಸಿದರು. ದಿಶಾ ಕಸತ್ ಡಕೌಟ್ ಆದರು. ಈ ಮೂಲಕ ಸತತ ಎರಡು ವಿಕೆಟ್ ಕಳೆದುಕೊಂಡು ಆರ್‌ಸಿಬಿ ವನಿತೆಯರು ಆತಂಕ ಎದುರಿಸಿದರು.
ಧಾರಾವಿ ಸ್ಲಂ ಬೀದಿಯಿಂದ WPLವರೆಗೆ, ಸಿಮ್ರನ್ ಜರ್ನಿಯೇ ಒಂದು ಸ್ಪೂರ್ತಿಯ ಕಥೆ..!
ನಾಯಕಿ ಸ್ಮೃತಿ ಮಂಧನಾ 23 ರನ್ ಸಿಡಿಸಿ ನಿರ್ಗಮಿಸಿದರು.ಇತ್ತ ಹೀದರ್ ನೈಟ್ ಶೂನ್ಯ ಸುತ್ತಿದರು. ಹೋರಾಟ ನೀಡುವ ಸೂಚನೆ ನೀಡಿದ ಎಲ್ಲಿಸ್ ಪೆರಿ 13 ರನ್ ಸಿಡಿಸಿ ನಿರ್ಗಮಿಸಿದರು. ರಿಚಾ ಘೋಷ್ ಹಾಗೂ ಕಾನಿಕಾ ಅಹುಜ ಜೊತೆಯಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. ಆಧರೆ ಕಾನಿಕಾ ಅಹುಜಾ 22 ರನ್ ಸಿಡಿಸಿ ಔಟಾದದರು. ರಿಚಾ ಘೋಷ್ 28 ರನ್ ಕಾಣಿಕೆ ನೀಡಿದರು.
ಅಂತಿಮ ಹಂತದಲ್ಲಿ ಶ್ರೇಯಾಂಕ ಪಾಟೀಲ್ ಹಾಗೂ ಮೆಗನ್ ಸ್ಕಟ್ ಜೊತೆಯಾಟ ನೆರವಾಯಿತು. ಶ್ರೇಯಾಂಕ ಪಾಟೀಲ್ 23 ರನ್ ಸಿಡಿಸಿದರೆ ಮೆಗನ್ 20 ರನ್ ಸಿಡಿಸಿದರು. ರೇಣುಕಾ ಠಾಕೂರ್ ಸಿಂಗ್ 2 ರನ್ ಸಿಡಿಸಿ ಔಟಾದರು. ಈ ಮೂಲಕ ಆರ್‌ಸಿಬಿ 18.4 ಓವರ್‌ಗಳಲ್ಲಿ 155 ರನ್ ಸಿಡಿಸಿದರು.
WPL 2023: ರನ್ ಹೊಳೆ ಹರಿಸಲು ಸಣ್ಣ ಬೌಂಡರಿ..! BCCI ಮಾಸ್ಟರ್ ಪ್ಲಾನ್
ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಮುಗ್ಗರಿಸಿದ್ದ ಆರ್‌ಸಿಬಿ
ಭರ್ಜರಿ ಶುಭಾರಂಭದ ನಿರೀಕ್ಷೆಯಲ್ಲಿದ್ದ ಹಲವು ತಾರೆಯರನ್ನೊಳಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮಹಿಳಾ ತಂಡ ಮೊದಲ ಪಂದ್ಯದಲ್ಲಿ ಮುಗ್ಗರಿಸಿತ್ತು. ಬೌಲಿಂಗ್‌ನಲ್ಲಿ 222 ರನ್ ಬಿಟ್ಟುಕೊಟ್ಟ ಆರ್‌ಸಿಬಿ ವುವೆನ್ಸ್, ಬ್ಯಾಟಿಂಗ್‌ನಲ್ಲಿ 163 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ 2 ವಿಕೆಟ್ಗೆ ಬರೋಬ್ಬರಿ 223 ರನ್ ಕಲೆಹಾಕಿತು. ಬೃಹತ್ ಮೊತ್ತ ನೋಡಿಯೇ ಕಂಗಾಲಾದ ಆರ್‌ಸಿಬಿ 8 ವಿಕೆಟ್ಗೆ 163 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕಿ ಸ್ಮೃತಿ ಮಂಧನಾ ಹಾಗೂ ಸೋಫಿ ಡಿವೈನ್(14) ಮೊದಲ 4.2 ಓವರಲ್ಲಿ 41 ರನ್ ಸಿಡಿಸಿದರೂ ಬಳಿಕ ಡೆಲ್ಲಿ ಮೇಲುಗೈ ಸಾಧಿಸಿತು. ಮಂಧನಾ 23 ಎಸೆತಗಳಲ್ಲಿ 35, ಎಲೈಸಿ ಪೆರ್ರಿ 19 ಎಸೆತಗಳಲ್ಲಿ 31 ರನ್ ಸಿಡಿಸಿ ಔಟಾದ ಬಳಿಕ ತಂಡ ಸಂಕಷ್ಟಕ್ಕೊಳಗಾಯಿತು. 89ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 8 ರನ್‌ಗೆ 5 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಹೀಥರ್ ನೈಟ್(34), ಮೇಗನ್ ಶುಟ್(30) ಹೋರಾಡಿ ತಂಡ ಕಳಪೆ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.