WPL 2023 ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್!

Published : Mar 04, 2023, 07:35 PM ISTUpdated : Mar 04, 2023, 07:49 PM IST
WPL 2023 ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್!

ಸಾರಾಂಶ

ಚೊಚ್ಚಲ ಮಹಿಳಾ ಐಪಿಎಲ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ನಡಸುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ವನಿತೆಯರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದಲ್ಲಿ ಯಾರು ಸ್ಥಾನ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

ಮುಂಬೈ(ಮಾ.04): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಡಿದೆ. ವರ್ಣರಂಜಿತ ಸಮಾರಂಭದ ಬಳಿಕ ಇದೀಗ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕಿ ಬೆತ್ ಮೂನಿ ಟಾಸ್ ಗೆಲುವಿನ ಬೆನ್ನಲ್ಲೇ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎದುರಾಳಿಗಳನ್ನು ಕಟ್ಟಿಹಾಕಿ ರನ್ ಚೇಸ್ ಮಾಡುವ ವಿಶ್ವಾಸವಿದೆ ಎಂದರು. ಗುಜರಾತ್ ಜೈಂಟ್ಸ್ ಮೂವರು ವೇಗಿಗಳು ಹಾಗೂ ನಾಲ್ವರು ವೇಗಿಗಳನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಗುಜರಾತ್ ಜೈಂಟ್ಸ್ ಪ್ಲೇಯಿಂಗ್ 11
ಬೆತ್ ಮೂನಿ(ನಾಯಕಿ), ಸಬ್ಬಿನೇನಿ ಮೇಘನಾ, ಹರ್ಲಿನ್ ಡಿಯೋಲ್, ಅಶ್ಲೆ ಗಾರ್ಡ್ನರ್, ಅನ್ನಾಬೆಲ್ ಸದರ್ಲೆಂಡ್, ಡೈಲೆನ್ ಹೇಮಲಥಾ, ಜಾರ್ಜಿಯಾ ವರೆಹ್ಯಾಮ್, ಸ್ನೇಹ ರಾಣ, ತನಜು ಕನ್ವಾರ್, ಮೋನಿಕಾ ಪಟೇಲ್, ಮಾನ್ಸಿ ಜೋಶಿ

'ಕೆಟ್ಟ ಟೈಮ್‌ನಲ್ಲೂ ವಿನ್‌ ಆಗ್ತಾರಲ್ಲ, ಅವರೇ ಚಾಂಪಿಯನ್ಸ್‌..' ಆರ್‌ಸಿಬಿಯಲ್ಲಿ ಆರಂಭವಾಯ್ತು ಸಾನಿಯಾ ಸ್ಫೂರ್ತಿ!

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ಹರ್ಲೆ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್(ನಾಯಕಿ), ನ್ಯಾಟ್ ಸ್ಕೀವಿಯರ್ ಬ್ರಂಟ್, ಅಮೆಲಿಯಾ ಕೆರ್, ಅಮ್ಜೋತ್ ಕೌರ್, ಪೂಜಾ ವಸ್ತ್ರಾಕರ್, ಹಮೈರಾ ಕಜಿ, ಇಸ್ಸಿ ವೊಂಗ್, ಜಿಂತಿಮಣಿ ಕಲಿತಾ, ಸೈಕಾ ಇಶಾಖ್ 

ಡಬಲ್‌ ರೌಂಡ್‌ ರಾಬಿನ್‌ ಮಾದ​ರಿ​ಯಲ್ಲಿ ಲೀಗ್‌ ಹಂತ ನಡೆ​ಯ​ಲಿದ್ದು, ಪ್ರತಿ ತಂಡ ಇತರ 4 ತಂಡ​ಗಳ ವಿರುದ್ಧ ತಲಾ 2 ಬಾರಿ ಸೆಣ​ಸಲಿದೆ. ಲೀಗ್‌ ಹಂತ​ದಲ್ಲಿ ಅಗ್ರ​ಸ್ಥಾನ ಪಡೆದ ತಂಡ ನೇರ​ವಾಗಿ ಫೈನಲ್‌ ಪ್ರವೇ​ಶಿ​ಸ​ಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡ​ಗಳು ಎಲಿ​ಮಿ​ನೇ​ಟ​ರ್‌​ನಲ್ಲಿ ಸೆಣ​ಸ​ಲಿ​ವೆ.

WPL 2023: ತಂಡದಲ್ಲಿ ಎಷ್ಟು ವಿದೇಶಿ ಆಟಗಾರ್ತಿಯರು ಕಣಕ್ಕಿಳಿಯಬಹುದು? ಡಿಆರ್‌ಎಸ್ ಇದೆಯಾ?

ಇದೇ ಮೊದಲ ಬಾರಿಗೆ ಪುರಷರ ಐಪಿಎಲ್ ಟೂರ್ನಿಯಂತೆ ಮಹಿಳಾ ಐಪಿಎಲ್ ಟೂರ್ನಿ ನಡೆಯುತ್ತಿದೆ.ಇದಕ್ಕಾಗಿ ಹರಾಜು ಪ್ರಕ್ರಿಯೆಯೂ ನಡೆದಿತ್ತು. ಹರಾಜಿನಲ್ಲಿ ಸ್ಮೃತಿ ಮಂಧನಾ ಬರೋಬ್ಬರಿ 3.4 ಕೋಟಿ ರೂಪಾಯಿ ಮೊತ್ತಕ್ಕೆ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು(ಆರ್‌ಸಿಬಿ) ಪಾಲಾಗಿದ್ದರು. ಇದು ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಹರಾಜದ ಗರಿಷ್ಠ ಮೊತ್ತವಾಗಿದೆ.ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 1.8 ಕೋಟಿ ರು.ಗೆ ಮುಂಬೈ ತಂಡ ಸೇರಿ, ನಿರೀಕ್ಷೆಗೂ ಕಡಿಮೆ ಮೊತ್ತ ಪಡೆದರು. ಜೆಮಿಮಾ ರೋಡಿಗ್ರೆಸ್(2.2 ಕೋಟಿ ರು), ಶಫಾಲಿ ವರ್ಮಾ(2 ಕೋಟಿ ರು.), ರಿಚಾ ಘೋಷ್‌(1.9 ಕೋಟಿ ರು.) ಸೇರಿ ಭಾರತದ 10 ಆಟಗಾರ್ತಿಯರ ಮೊತ್ತ ಒಂದು ಕೋಟಿ ರು. ದಾಟಿತು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ