WPL 2023 ಮಹಿಳಾ ಐಪಿಎಲ್ ವೇಳಾಪಟ್ಟಿ ಪ್ರಕಟ, ಮಾರ್ಚ್ 4ಕ್ಕೆ ಉದ್ಘಾಟನೆ!

By Suvarna News  |  First Published Feb 14, 2023, 7:26 PM IST

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಹರಾಜು ನಡೆದ ಬೆನ್ನಲ್ಲೇ ಇದೀಗ ವೇಳಾಪಟ್ಟಿ ಪ್ರಕಟಗೊಂಡಿದೆ.ಮಾರ್ಚ್ 4 ರಂದು ಉದ್ಘಟನಾ ಪಂದ್ಯ ನಡೆಯಲಿದೆ. ಸರಿಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಮಹಿಳಾ ಪ್ರಿಮಿಯರ್ ಲೀಗ್ ಮಾರ್ಚ್ 26 ರಂದು ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ.
 


ಮುಂಬೈ(ಫೆ.14): ಪ್ರೇಮಿಗಳ ದಿನಾಚರಣೆಯಂದು ಬಿಸಿಸಿಐ ಕ್ರಿಕೆಟ್ ಫ್ಯಾನ್ಸ್‌ಗೆ ಬರ್ಜರಿ ಗಿಫ್ಟ್ ನೀಡಿದೆ. ನಿನ್ನೆ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಚೊಚ್ಚಲ ಹರಾಜು ಪ್ರಕ್ರಿಯೆ ನಡಿದಿತ್ತು. ಇಂದು WPL 2023ರ ವೇಳಾಪಟ್ಟಿ ಪ್ರಕಟಗೊಂಡಿದೆ. ಮೊದಲ ಆವೃತ್ತಿ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಮಾರ್ಚ್ 4 ರಂದು ಆರಂಭಗೊಳ್ಳುತ್ತಿದೆ. ಎಲ್ಲಾ ಪಂದ್ಯಗಳು ಮುುಂಬೈನಲ್ಲಿ ನಡೆಯಲಿದೆ. ಮುಂಬೈನ ಡಿವೈ ಪಾಟೀಲ್ ಹಾಗೂ ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಆಯೋಜಿಸಲಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಮಹಿಳಾ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗುತ್ತಿದೆ. ಎರಡನೇ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ , ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಹೋರಾಟ ನಡೆಸಲಿದೆ. ಮಾರ್ಚ್ 26 ರಂದು ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಆಯೋಜಿಸಲಾಗಿದೆ.

ಮೂರು ದಿನ ಡಬಲ್ ಹೆಡ್ಡರ್ ಪಂದ್ಯ ಆಯೋಜಿಸಲಾಗಿದೆ. ಮಾರ್ಚ್ 5ರ ಭಾನುವಾರ, ಮಾರ್ಚ್ 18ರ ಶನಿವಾರ ಹಾಗೂ ಮಾರ್ಚ್ 23ರ ಮಂಗಳವಾರ ಡಬಲ್ ಹೆಡ್ಡರ್ ಪಂದ್ಯ ಆಯೋಜಿಸಲಾಗಿದೆ. ಫೈನಲ್ ಪಂದ್ಯ ಸೇರಿ ಒಟ್ಟು 23 ಪಂದ್ಯಗಳು ನಡೆಯಲಿದೆ. ಚೊಚ್ಚಲ ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಜ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಹೋರಾಟ ನಡೆಸಲಿದೆ. ಡಬಲ್ ಹೆಡ್ಡರ್ ದಿನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಇನ್ನುಳಿದ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.

Tap to resize

Latest Videos

WPL Auction: ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ವೈರಲ್ ಆದ ಟಾಪ್ 10 ಮೀಮ್ಸ್‌ಗಳಿವು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಮಾರ್ಚ್ 5 ರಂದು ಮೊದಲ ಪಂದ್ಯ ಆಡಲಿದೆ. ಡಬಲ್ ಹೆಡ್ಡರ್ ಪಂದ್ಯದಲ್ಲಿ ಮೊದಲ ಪಂದ್ಯ ಆಡಲಿರುವ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಹೋರಾಟ ನಡೆಸಲಿದೆ. ಮರುದಿನ ಅಂದರೆ ಮಾರ್ಚ್ 6 ರಂದು 7.30ಕ್ಕೆ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ದ ಪಂದ್ಯ ಆಡಲಿದೆ. ಮಾರ್ಚ್ 8 ರಂದು ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಮುಖಾಮುಖಿಯಾಗಲಿದೆ. ಮಾರ್ಚ್ 13 ರಂದು ಡೆಲ್ಲಿ ವಿರುದ್ಧ ಪಂದ್ಯ ಆಡಲಿರುವ ಆರ್‌ಸಿಬಿ ವನಿತೆಯರು, ಮಾರ್ಚ್ 15 ರಂದು ಯುಪಿ ವಾರಿಯರ್ಜ್ ಜೊತೆ ಹೋರಾಟ ಮಾಡಲಿದ್ದಾರೆ. ಮಾರ್ಚ್ 18 ರಂದು ಗುಜರಾತ್ ಜೈಂಟ್ಸ್ ಹಾಗೂ ಕೊನೆಯ ಲೀಗ್ ಪಂದ್ಯವನ್ನು ಮಾರ್ಚ್ 21 ರಂದು ಮುಂಬೈ ಇಂಡಿಯನ್ಸ್ ವಿರುದ್ದ ಆಡಲಿದೆ.

ಮಾರ್ಚ್ 21ಕ್ಕೆ ಯುಪಿ ವಾರಿಯರ್ಜ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯೊಂದಿಗೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಮಾರ್ಚ್ 24 ರಂದು ಎಲಿಮಿನೆಟರ್ ಪಂದ್ಯ ಆಯೋಜಿಸಲಾಗಿದೆ. ಇನ್ನು ಮಾರ್ಚ್ 26 ರಂದು ಫೈನಲ್ ಪಂದ್ಯ ನಡೆಯೆಲಿದೆ. ರೋಚಕ ಹೋರಾಟಕ್ಕೆ ವೇದಿಕೆ ಸಿದ್ದಗೊಂಡಿದೆ. ನಿನ್ನೆ(ಫೆ.13) ಬಿಸಿಸಿಐ ಮಹಿಳಾ ಐಪಿಎಲ್ ಟೂರ್ನಿಯ ಹರಾಜು ನಡೆಸಿತ್ತು. ಸ್ಮೃತಿ ಮಂಧನಾ 3.4 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡಕ್ಕೆ ಸೇಲ್ ಆಗುವ ಮೂಲಕ ಗರಿಷ್ಠ ಮೊತ್ತದ ದಾಖಲೆ ಬರೆದಿದ್ದರು.

WPL Auction: ಕರ್ನಾಟಕದ ನಾಲ್ವರು ಆಟಗಾರ್ತಿಯರು ಹರಾಜು..! ಆರ್‌ಸಿಬಿ ತೆಕ್ಕೆಗೆ ಇಬ್ಬರು ಕನ್ನಡತಿಯರು

ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 1.8 ಕೋಟಿ ರು.ಗೆ ಮುಂಬೈ ತಂಡ ಸೇರಿ, ನಿರೀಕ್ಷೆಗೂ ಕಡಿಮೆ ಮೊತ್ತ ಪಡೆದರು. ಜೆಮಿಮಾ ರೋಡ್ರಿಗ್‌್ಸ(2.2 ಕೋಟಿ ರು), ಶಫಾಲಿ ವರ್ಮಾ(2 ಕೋಟಿ ರು.), ರಿಚಾ ಘೋಷ್‌(1.9 ಕೋಟಿ ರು.) ಸೇರಿ ಭಾರತದ 10 ಆಟಗಾರ್ತಿಯರ ಮೊತ್ತ ಒಂದು ಕೋಟಿ ರು. ದಾಟಿತು. 10 ವಿದೇಶಿ ಆಟಗಾರ್ತಿಯರೂ ಕೋಟಿ ರು. ಅಥವಾ ಅದಕ್ಕಿಂತ ಹೆಚ್ಚು ಮೊತ್ತ ಪಡೆದರು.

ಒಟ್ಟು 448 ಆಟಗಾರ್ತಿಯರು ಹರಾಜಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಗರಿಷ್ಠ 90 ಆಟಗಾರ್ತಿಯರು ಬಿಕರಿಯಾಗಬಹುದಿತ್ತು. 5 ತಂಡಗಳು 30 ವಿದೇಶಿಗರು ಸೇರಿ ಒಟ್ಟು 87 ಆಟಗಾರ್ತಿಯರನ್ನು ಖರೀದಿಸಿದವು. ಪ್ರತಿ ತಂಡವು ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿ ಮಾಡಬಹುದಿತ್ತು. ಆರ್‌ಸಿಬಿ, ಡೆಲ್ಲಿ, ಗುಜರಾತ್‌ ತಲಾ 18 ಆಟಗಾರ್ತಿಯರನ್ನು ಖರೀದಿಸಿದರೆ, ಮುಂಬೈ 17, ಯುಪಿ ವಾರಿಯ​ರ್‍ಸ್ 16 ಆಟಗಾರ್ತಿರನ್ನು ಖರೀದಿಸಿದವು.

click me!