
ಅಹಮದಾಬಾದ್ (ನ.19): ಕ್ರೀಡೆಯ ಎಲ್ಲಾ ಗಡಿಗಳನ್ನು ಮೀರಿದ ಐತಿಹಾಸಿಕ ಕ್ಷಣದಲ್ಲಿ, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಪಂದ್ಯದ ಅರಂಭದ ವೇಳೆ 1 ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ಭಾರತದ ರಾಷ್ಟ್ರಗೀತೆ ಹಾಡುವಾಗ ಮೈನವಿರೇಳಿಸುವಂಥ ಕ್ಷಣಗಳು ದಾಖಲಾದವು. ರಾಷ್ಟ್ರಗೀತೆಯ ಒಂದೊಂದು ಸಾಲು ಹಾಡುವಾಗಲೂ ಇಡೀ ಕ್ರೀಡಾಂಗಣದಾದ್ಯಂತ ದೇಶಭಕ್ತಿಯ ಸ್ವರಮೇಳವಾದಂತೆ ಕಂಡಿತು. ಏಕಕಾಲದಲ್ಲಿ ಭಾರೀ ಪ್ರಮಾಣದ ಜನರಿಂದ ರಾಷ್ಟ್ರಗೀತೆ ಹಾಡುವ ದೃಶ್ಯ, ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರ ಮೈನಡುಗಿಸಿದ್ದಂತೂ ಸತ್ಯ. ಏಕತೆ ಮತ್ತು ಗುರುತಿನ ಸಂಕೇತವಾದ ರಾಷ್ಟ್ರಗೀತೆಯು ಕ್ರೀಡಾಂಗಣದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ ಪ್ರೇಕ್ಷಕರಲ್ಲಿ ನರನಾಡಿಗಳಲ್ಲಿ ಮಿಂಚಿನ ಸಂಚಾರವಾದಂತಾಯಿತು. ವಿವಿಧ ಸಮುದಾಯಗಳ ನಡುವೆ ಕ್ರೀಡೆಗಳು ಬೆಸೆಯಬಹುದಾದ ಭಾವನಾತ್ಮಕ ಸಂಬಂಧವನ್ನು ಇಂಥ ಕ್ಷಣಗಳು ಇನ್ನಷ್ಟು ಹೆಚ್ಚು ಮಾಡುತ್ತದೆ.
ಈ ಸ್ಮರಣೀಯ ದೃಶ್ಯಾವಳಿಯೊಂದಿಗೆ, ಸ್ಟೇಡಿಯಂನ ಗ್ಯಾಲರಿಯಲ್ಲಿ 500 ಫೀಟ್ ಉದ್ದದ ಭಾರತೀಯ ಧ್ವಜವನ್ನು ಹಾರಿಸಿದ್ದು ಆಕರ್ಷಕವಾಗಿ ಕಂಡಿತು. ಭಾರತದ ಅಭಿಮಾನಿಗಳು ಹೆಮ್ಮೆಯಿಂದ ಈ ಧ್ವಜವನ್ನು ಹಿಡಿದುಕೊಂಡಿದ್ದರು. ಧ್ವಜದ ದೊಡ್ಡ ಗಾತ್ರವು ಈ ಸಂದರ್ಭದ ಅಗಾಧತೆಯನ್ನು ಮತ್ತು ಪ್ರೇಕ್ಷಕರಲ್ಲಿ ಪ್ರತಿಧ್ವನಿಸಿದ ಹೆಮ್ಮೆಯನ್ನು ಸಂಕೇತಿಸಿತ್ತು. ಇದು ರಾಷ್ಟ್ರವನ್ನು ರೂಪಿಸುವ ವೈವಿಧ್ಯಮಯ ಮತ್ತು ರೋಮಾಂಚಕತೆಯ ಪ್ರಾತಿನಿಧ್ಯವಾಗಿದ್ದು, ಕ್ರೀಡೆಯ ಸಾಮಾನ್ಯ ಬ್ಯಾನರ್ ಅಡಿಯಲ್ಲಿ ಸ್ಮರಣೀಯವಾಗಿ ಒಟ್ಟುಗೂಡಿಸಲಾಗಿತ್ತು.
ಭಾರತ ಮತ್ತು ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಫೈನಲ್ ಕೇವಲ ಕ್ರಿಕೆಟ್ ಸ್ಪರ್ಧೆಗಿಂತ ಹೆಚ್ಚಾಗಿರುವಂತೆ ಕಂಡಿತು. ಇದು ರಾಷ್ಟ್ರೀಯ ಗುರುತು ಮತ್ತು ಹೆಮ್ಮೆಯ ಆಚರಣೆಯಾಗಿ ರೂಪಾಂತರವಾದಂತೆ ಅನಿಸಿತು. ರಾಷ್ಟ್ರಗೀತೆಯ ಅನುರಣನವು ಭಾರತೀಯ ಧ್ವಜದೊಂದಿಗೆ ಸೇರಿಕೊಂಡು ಕ್ರೀಡೆ ಮತ್ತು ದೇಶಪ್ರೇಮವು ಸ್ಟೇಡಿಯಂನಲ್ಲಿ ವಿಲೀನಗೊಂಡಿತು.
ರಾಷ್ಟ್ರ ಗೀತೆಯು ಪ್ರತಿಧ್ವನಿಸುತ್ತಿದ್ದಂತೆ ಮತ್ತು ಧ್ವಜವು ತಂಗಾಳಿಯಲ್ಲಿ ಬೀಸುತ್ತಿದ್ದಂತೆ, ಇದು ಕೇವಲ ವಿಶ್ವಕಪ್ ಕ್ರೀಡೆಯ ಫೈನಲ್ ಅಲ್ಲ ಎನ್ನುವುದು ಸ್ಪಷ್ಟವಾಗಿ ಕಂಡಿತು. ಇದು ಏಕತೆ ಮತ್ತು ಹೆಮ್ಮೆಯ ದ್ಯೋತಕವಾಗಿತ್ತು. ರಾಷ್ಟ್ರಗೀತೆಯನ್ನು ಹಾಡಿದ ಅನುಭವವು ಅಭಿಮಾನಿಗಳಲ್ಲಿ ಬಾಂಧವ್ಯವನ್ನು ಸೃಷ್ಟಿಸಿತು, ನರೇಂದ್ರ ಮೋದಿ ಕ್ರೀಡಾಂಗಣವನ್ನು ಸಾಮೂಹಿಕ ಭಾವನೆಗಳ ಬೃಹತ್ ತಾಣವಾಗಿ ಪರಿವರ್ತಿಸಿತ್ತು.
7,546 ದಿನದ ಬಳಿಕ ಅಂಕಿ ಸಂಖ್ಯೆ ಜೊತೆ ಗೂಗಲ್ ಹೇಳುತ್ತಿದೆ ಭಾರತಕ್ಕೆ ಟ್ರೋಫಿ!
ಇನ್ನು ಕ್ರಿಕೆಟ್ ರಣಾಂಗಣಕ್ಕೆ ಬಂದರೆ, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕ್ರಿಕೆಟ್‌ನ ಪ್ರಭುತ್ವಕ್ಕಾಗಿ ಹೋರಾಟ ನಡೆಸುತ್ತಿದೆ. ಇದು ಅಭಿಮಾನಿಗಳಲ್ಲಿ ಎಂದೂ ಮರೆಯಲಾಗದ ನೆನಪನ್ನೂ ನೀಡುವುದು ಖಂಡಿತು. ಒಂದು ಲಕ್ಷಕ್ಕೂ ಹೆಚ್ಚು ಧ್ವನಿಗಳು ಸಾಮರಸ್ಯದಿಂದ ಹಾಡಿದ್ದಲ್ಲದೆ, ಬೃಹದಾಕಾರದ ಭಾರತೀಯ ಧ್ವಜವು ಹೆಮ್ಮೆಯಿಂದ ಸ್ಟೇಡಿಯಂನಲ್ಲಿ ಬೀಸಿತು. ಇದು ಗಡಿಗಳನ್ನು ಮೀರಿದ ಮತ್ತು ಆಟದ ಪ್ರೀತಿಯಲ್ಲಿ ರಾಷ್ಟ್ರವನ್ನು ಒಂದುಗೂಡಿಸುವ ಚೈತನ್ಯದ ಆಚರಣೆ ರೀತಿ ಕಂಡಿತು.
ಫೈನಲ್ ಮ್ಯಾಚ್‌ಗೂ ಮುನ್ನ ಮೋದಿ ಸ್ಟೇಡಿಯಂನಲ್ಲಿ ಅತ್ಯಾಕರ್ಷಕ ಏರ್‌ಶೋ: ಬೆರಗಾದ ಪ್ರೇಕ್ಷಕರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.