ಹೆಂಡ್ತಿಗೆ ಗೊತ್ತಾಗದಂತೆ ಮ್ಯಾಚ್ ನೋಡ್ತಾ ಮನೆಯಲ್ಲೇ ಗುಂಡು ಹೀರೋದೇಗೆ: ವೀಡಿಯೋ ಸಖತ್ ವೈರಲ್

By Suvarna News  |  First Published Nov 19, 2023, 4:12 PM IST

ಕ್ರಿಕೆಟ್ ಪಂದ್ಯ ರಜಾ ದಿನ ಭಾನುವಾರ ಬಂದಿರೋದ್ರಿಂದ ಗಂಡಸರಿಗೆ ಕೆಲವು ಮನೆಯಲ್ಲಿ ಮನೆಯಿಂದ ಹೊರಗೆ ಹೋಗಿ ಸ್ನೇಹಿತರೊಂದಿಗೆ ಗುಂಡು ತುಂಡಿನೊಂದಿಗೆ ಪಾರ್ಟಿ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಹೈವೋಲ್ಟೇಜ್ ಮ್ಯಾಚ್ ನಡೆಯುತ್ತಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಹೆಂಡ್ತಿಯೊಂದಿಗೆ ಗುಂಡು ಹೀರುತ್ತಾ ಮ್ಯಾಚ್ ನೋಡುವುದು ಹೇಗೆ ಎಂಬ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ.


ವಿಶ್ವಕಪ್‌ ಫೈನಲ್‌ನ ಹೈ ವೋಲ್ಟೇಜ್ ಮ್ಯಾಚ್‌ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಚೆನ್ನಾಗಿಯೇ ಆಡುತ್ತಿದೆ. ಶುಭಮನ್ ಗಿಲ್, ರೋಹಿತ್ ಶರ್ಮಾ, ಶ್ರೇಯಸ್‌ ಅಯ್ಯರ್‌ ಒಬ್ಬರಾದ ಮೇಲೆ ಒಬ್ಬರಂತೆ ಔಟಾಗುವ ಮೂಲಕ ಭಾರತೀಯ ಅಭಿಮಾನಿಗಳು ಆತಂಕದಲ್ಲೇ ಉಗುರು ಕಡಿಯುವಂತೆ ಮಾಡಿದೆ ಈ ಪಂದ್ಯ. ಇತ್ತ ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ನೋಡುವವರ ಮಜಾ ಒಂದು ಕರೆಯಾದರೆ ಮನೆಯಲ್ಲೇ ಕ್ರಿಕೆಟ್ ನೋಡಲು ಬಯಸಿರುವವರು ಅಕ್ಕಪಕ್ಕದ ಮನೆಯವರನೆಲ್ಲಾ ಗುಡ್ಡೆ ಹಾಕಿಕೊಂಡು ಮ್ಯಾಚ್ ನೋಡ್ತಿದ್ದಾರೆ.

ಈ ಮಧ್ಯೆ ಈ ಕ್ರಿಕೆಟ್ ಪಂದ್ಯ ರಜಾ ದಿನ ಭಾನುವಾರ ಬಂದಿರೋದ್ರಿಂದ ಗಂಡಸರಿಗೆ ಕೆಲವು ಮನೆಯಲ್ಲಿ ಮನೆಯಿಂದ ಹೊರಗೆ ಹೋಗಿ ಸ್ನೇಹಿತರೊಂದಿಗೆ ಗುಂಡು ತುಂಡಿನೊಂದಿಗೆ ಪಾರ್ಟಿ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಹೈವೋಲ್ಟೇಜ್ ಮ್ಯಾಚ್ ನಡೆಯುತ್ತಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಹೆಂಡ್ತಿಯೊಂದಿಗೆ ಗುಂಡು ಹೀರುತ್ತಾ ಮ್ಯಾಚ್ ನೋಡುವುದು ಹೇಗೆ ಎಂಬ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ.

Tap to resize

Latest Videos

World Cup Final: ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ತೇನಿ ಬೆಂಬಲಿಗ, ಆರೆಸ್ಟ್ ಮಾಡಿದ ಗುಜರಾತ್ ಪೊಲೀಸ್..!

ವೀಡಿಯೋದಲ್ಲಿ ಗಂಡ ಹೆಂಡತಿ ಸೋಪಾದಲ್ಲಿ ಕುಳಿತುಕೊಂಡು ಕ್ರಿಕೆಟ್‌ ನೋಡ್ತಿದ್ದಾರೆ. ಈ ವೇಳೆ ಗಂಡ ಹೆಂಡ್ತಿ ಕಣ್ತಪ್ಪಿಸಿ ಗುಂಡು ಹೊಡೆಯುತ್ತಿದ್ದಾನೆ. ಅದು ಹೇಗೆ ಅಂತ ವೀಡಿಯೋದಲ್ಲೇ ನೀವು ನೋಡಬೇಕು. ವೀಡಿಯೋದಲ್ಲಿ ಕಾಣಿಸುವಂತೆ ಮೆಲ್ನೋಟಕ್ಕೆ ಗೊಂಬೆಯಂತೆ ಕಾಣುವ ಟೆಡ್ಡಿಬೇರ್ ಒಳಗೆ ಗಂಡ ವಿಸ್ಕಿ ಬಾಟಲ್ ಅಡಗಿಸಿಟ್ಟಿದ್ದಾನೆ. ಮತ್ತೊಂದು ಪಕ್ಕದಲ್ಲಿ ಹೆಂಡ್ತಿ ಗಂಡನಿಗೆ ಒರಗಿ ಕೂತುಕೊಂಡು ಟಿವಿ ನೋಡ್ತಿದ್ದಾಳೆ. ಇತ್ತ ಗಂಡ ಒಂದೊಂದೇ ತುಂಡು ತಿನ್ನುತ್ತಾ ಒಂದೊಂದೇ ಸೀಪ್ ಆಕೆಗೆ ಗೊತ್ತಾಗದಂತೆ ವಿಸ್ಕಿ ಹೀರುತ್ತಿದ್ದಾನೆ. ಮ್ಯಾಚ್‌ ಟೈಮಲ್ಲಿ ಈ ವೀಡಿಯೋ ಈಗ ಸಖತ್ ವೈರಲ್ ಆಗಿದ್ದು, ರಸವತ್ತಾದ ಕಾಮೆಂಟ್‌ಗಳು ಬರ್ತಿವೆ.

ಪ್ರೇಮಲೀಲಾ ಎಂಬುವವರು ಈ ಟ್ವಿಟ್ಟರ್‌ನಲ್ಲಿ  1 ನಿಮಿಷದ ವೀಡಿಯೋವನ್ನು  ಪೋಸ್ಟ್ ಮಾಡಿದ್ದು, ಈಗಾಗಲೇ ಸಾವಿರಾರು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. ಅನೇಕರು ಥಮ್ಸಪ್ ಕಮೆಂಟ್ ಮಾಡಿದ್ದು, ಮತ್ತೆ ಕೆಲವರು ನಗುವ ಇಮೋಜಿ ಕಾಮೆಂಟ್ ಮಾಡಿದ್ದಾರೆ.  ಸಾಮಾನ್ಯವಾಗಿ ಮ್ಯಾಚ್‌ ನೋಡುವ ವೇಳೆ ಗುಂಡು ತುಂಡಿನ ಜೊತೆ ಮ್ಯಾಚ್ ನೋಡಲು ಅನೇಕರು ಬಯಸುತ್ತಾರೆ. ಆದರೆ ಭಾನುವಾರವಾದ ಕಾರಣ ಹೊರಗೆ ಹೋಗಿ ತಮ್ಮ ಸ್ನೇಹಿತರ ಜೊತೆ ಮಜಾ ಮಾಡುವುದರಿಂದ ಕೆಲವರು ವಂಚಿತರಾಗಿದ್ದು, ಇಂತಹವರಿಗೆ ಈ ವೀಡಿಯೋ ಮಜಾ ನೀಡುತ್ತಿದೆ. 

ಚಿಂತೆ ಬೇಡ, ಈ ಸಲ ಕಪ್ ನಮ್ದೇ..! ಗಂಗೂಲಿ ಮಾಡಿದ ತಪ್ಪನ್ನೇ ಮಾಡಿದ್ರಾ ಕಮಿನ್ಸ್..?

ಈ ಮಜಾವಾದ ವೀಡಿಯೋವನ್ನು ನೀವು ನೋಡಿ

ಈ ಭಾನುವಾರದ ಫೈನಲ್ ಪಂದ್ಯವನ್ನು ಹೇಗೆ ವೀಕ್ಷಿಸುವುದು ಕಲಿರಿ!!!😜😁😀 pic.twitter.com/fDBv3x3xPj

— ಪ್ರೇಮಲೀಲಾ/Premaleela (@Premaleela1)

 

click me!