Women's Asia Cup: ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಶ್ರೀಲಂಕಾ

Published : Oct 14, 2022, 10:21 AM ISTUpdated : Oct 14, 2022, 10:47 AM IST
Women's Asia Cup: ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಶ್ರೀಲಂಕಾ

ಸಾರಾಂಶ

ಮಹಿಳಾ ಏಷ್ಯಾಕಪ್ ಸೆಮೀಸ್‌ನಲ್ಲಿ ಪಾಕ್ ಬಗ್ಗುಬಡಿದ ಶ್ರೀಲಂಕಾ ಕೊನೆಯ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯ ಅಕ್ಟೋಬರ್‌ 15ರಂದು ಏಷ್ಯಾಕಪ್‌ ಟ್ರೋಫಿಗಾಗಿ ಭಾರತ-ಲಂಕಾ ಫೈಟ್

ಸೈಲೆಟ್‌(ಅ.14): 4 ಬಾರಿ ರನ್ನರ್‌-ಅಪ್‌ ಶ್ರೀಲಂಕಾ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ. 2ನೇ ಸೆಮಿಫೈನಲ್‌ನಲ್ಲಿ ತಂಡ ಪಾಕಿಸ್ತಾನ ವಿರುದ್ಧ 1 ರನ್‌ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 3ನೇ ಬಾರಿ ಫೈನಲ್‌ ಪ್ರವೇಶಿಸುವ ಪಾಕ್‌ ಕನಸು ಭಗ್ನಗೊಂಡಿತು.

ಮೊದಲು ಬ್ಯಾಟ್‌ ಮಾಡಿದ ಲಂಕಾ 6 ವಿಕೆಟ್‌ ಕಳೆದುಕೊಂಡು 122 ರನ್‌ ಗಳಿಸಿತು. ಹರ್ಷಿತಾ ಮಾದವಿ 35, ಅನುಷ್ಕಾ ಸಂಜೀವನಿ 26 ರನ್‌ ಗಳಿಸಿದರು. ನಶ್ರಾ ಸಂಧು 3 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದರೂ ಪಾಕ್‌ಗೆ ಲಂಕಾ ಬೌಲರ್‌ಗಳು ಕಂಟಕವಾದರು. ಆರಂಭಿಕ ಆಘಾತದ ಬಳಿಕ ನಾಯಕಿ ಬಿಸ್ಮಾ ಮಾರೂಫ್‌ 41 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆ 3 ಓವರಲ್ಲಿ ಗೆಲುವಿಗೆ 18 ರನ್‌ ಬೇಕಿತ್ತು. ಬಿಸ್ಮಾ ನಿರ್ಗಮನದ ಬಳಿಕ ಉಳಿದ ಬ್ಯಾಟರ್‌ಗಳು ಕೈಕೊಟ್ಟರು. ಕೊನೆ ಎಸೆತದಲ್ಲಿ 3 ರನ್‌ ಬೇಕಿದ್ದಾಗ ನಿದಾ ದಾರ್‌(26) ರನ್‌ ಔಟಾಗುವುದರೊಂದಿಗೆ ಲಂಕಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಸ್ಕೋರ್‌

ಶ್ರೀಲಂಕಾ 20 ಓವರಲ್ಲಿ 122/6, ಹರ್ಷಿತಾ 35, ನಶ್ರಾ 3-17)
ಪಾಕಿಸ್ತಾನ 20 ಓವರಲ್ಲಿ 121/6 (ಬಿಸ್ಮಾ 42, ರಣವೀರ 2-17)

ಪಂದ್ಯಶ್ರೇಷ್ಠ: ಇನೋಕ ರಣವೀರ

15ಕ್ಕೆ ಫೈನಲ್‌ ಫೈಟ್‌

ಟೂರ್ನಿಯ ಫೈನಲ್‌ ಹಣಾಹಣಿ ಶನಿವಾರ ನಡೆಯಲಿದ್ದು, ಭಾರತ 7ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2004ರಿಂದ ಸತತ 4 ಆವೃತ್ತಿಗಳಲ್ಲೂ ಭಾರತ, ಲಂಕಾ ವಿರುದ್ಧವೇ ಗೆದ್ದು ಚಾಂಪಿಯನ್‌ ಆಗಿತ್ತು. ಕಳೆದ ವರ್ಷ ಭಾರತ, ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಲಂಕಾ ಈ ಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದೆ.

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು

ಪತ್‌ರ್‍: ಟಿ20 ವಿಶ್ವಕಪ್‌ಗೆ ಪೂರ್ವಭಾವಿ ತಯಾರಿಯ ಭಾಗವಾಗಿ ನಡೆದ ಪಶ್ಚಿಮ ಆಸ್ಪ್ರೇಲಿಯಾ ವಿರುದ್ಧ 2ನೇ ಅಭ್ಯಾಸ ಪಂದ್ಯದಲ್ಲಿ ಭಾರತ 36 ರನ್‌ ಸೋಲನುಭವಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಶ್ಚಿಮ ಆಸ್ಪ್ರೇಲಿಯಾ 7 ವಿಕೆಟ್‌ಗೆ 168 ರನ್‌ ಕಲೆ ಹಾಕಿತು. ನಿಕ್‌ ಹಾಬ್ಸನ್‌(64), ಡಾರ್ಸಿ ಶಾರ್ಚ್‌(52) ತಲಾ ಅರ್ಧಶತಕಗಳ ಮೂಲಕ ತಂಡಕ್ಕೆ ಆಸರೆಯಾದರು. 

Women's Asia Cup: ಥಾಯ್ಲೆಂಡ್‌ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಹರ್ಮನ್‌ಪ್ರೀತ್ ಕೌರ್ ಪಡೆ

ಭಾರತದ ಪರ ಆರ್‌.ಅಶ್ವಿನ್‌ 3, ಹರ್ಷಲ್‌ ಪಟೇಲ್‌ 2 ವಿಕೆಟ್‌ ಪಡೆದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಯಿತು. ಕೆ.ಎಲ್‌.ರಾಹುಲ…(74) ಹೊರತುಪಡಿಸಿ ಇತರೆಲ್ಲ ಬ್ಯಾಟರ್‌ಗಳು ವಿಫಲರಾದರು. ಈ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಮಾಡಿರಲಿಲ್ಲ. ರಿಷಭ್‌ ಪಂತ್‌(09), ದೀಪಕ್‌ ಹೂಡಾ(06), ಹಾರ್ದಿಕ್‌(17) ನಿರಾಸೆ ಮೂಡಿಸಿದರು. ಪಶ್ಚಿಮ ಆಸ್ಪ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 13 ರನ್‌ ಗೆಲುವು ದಾಖಲಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ