ವಿಶ್ವದ ಅತ್ಯುತ್ತಮ ಕಾರನ್ನು ಗ್ಯಾರೇಜ್‌ನಲ್ಲಿಟ್ಟಿದೆ ಭಾರತ, ಯುವ ಕ್ರಿಕೆಟಿಗನ ಹೊರಗಿಟ್ಟಿದ್ದಕ್ಕೆ ಲೀ ಆಕ್ರೋಶ!

Published : Oct 13, 2022, 03:38 PM IST
ವಿಶ್ವದ ಅತ್ಯುತ್ತಮ ಕಾರನ್ನು ಗ್ಯಾರೇಜ್‌ನಲ್ಲಿಟ್ಟಿದೆ ಭಾರತ, ಯುವ ಕ್ರಿಕೆಟಿಗನ ಹೊರಗಿಟ್ಟಿದ್ದಕ್ಕೆ ಲೀ ಆಕ್ರೋಶ!

ಸಾರಾಂಶ

ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಈಗಾಗಲೇ ತಂಡ ಆಯ್ಕೆ ಮಾಡಿದೆ. ಇದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವದಲ್ಲೇ ಇಲ್ಲದ ಅತ್ಯುತ್ತಮ ಕಾರು ಭಾರತದಲ್ಲಿದೆ. ಆದರೆ ಈ ಕಾರನ್ನು ಭಾರತ ಗ್ಯಾರೇಜ್‌ನಲ್ಲಿಟ್ಟಿದೆ ಎಂದು ಯುವ ಕ್ರಿಕೆಟಿಗನನ್ನು ಹೊರಗಿಟ್ಟಿರುವ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಬ್ರಿಟ್ ಲೀ ಹೇಳಿದೆ ಆ ಕ್ರಿಕೆಟಿಗ ಯಾರು?

ಮುಂಬೈ(ಅ.13): ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಹಂತದ ತಯಾರಿಯಲ್ಲಿರುವ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದೆ. ಅಭ್ಯಾಸ, ತಯಾರಿಗಳು ಆರಂಭಗೊಂಡಿದೆ. ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಬಳಿಕ ಮತ್ತೆ ಟ್ರೋಫಿ ಕೈವಶ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಟ್ರೋಫಿಗಾಗಿ ಕಠಿಣ ಪ್ರಯತ್ನಗಳು ನಡೆಯುತ್ತಿದೆ. ಬಿಸಿಸಿಐ ಅಳೆದು ತೂಗಿ ತಂಡ ಆಯ್ಕೆ ಮಾಡಿದೆ.  ಈ ತಂಡದ ಕುರಿತು ಪರ ವಿರೋಧ ವ್ಯಕ್ತವಾಗಿದೆ. ಆದರೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಿಟ್ ಲೀ, ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯ್ಕೆ ಸಮಿತಿ ಪ್ರಮುಖ ಯುವ ಕ್ರಿಕೆಟಿಗನ ಕೈಬಿಟ್ಟಿದೆ. ಭಾರತ ವಿಶ್ವದಲ್ಲೇ ಇಲ್ಲದ ಅತ್ಯುತ್ತಮ ಕಾರು ಹೊಂದಿದೆ. ಆದರೆ ಈ ಕಾರನ್ನು ಭಾರತ ಗ್ಯಾರೇಜ್‌ನಲ್ಲಿಟ್ಟಿದೆ ಎಂದು ಆಯ್ಕೆ ಸಮಿತಿ ವಿರುದ್ಧ ಲೀ ಆಕ್ರೋಶ ಹೊರಹಾಕಿದ್ದಾರೆ. ಬ್ರೆಟ್ ಲೀ ಇಂಪ್ರೆಸ್ ಮಾಡಿದ ಹಾಗೂ ಟಿ20 ವಿಶ್ವಕಪ್ ತಂಡದಲ್ಲಿ ಇರಲಬೇಕು ಎಂದು ಆಗ್ರಹಿಸುತ್ತಿರುವ ಕ್ರಿಕೆಟಿಗ ಉಮ್ರಾನ್ ಮಲಿಕ್. ಜಮ್ಮು ಮತ್ತು ಕಾಶ್ಮೀರ ವೇಗಿ ಉಮ್ರಾನ್ ಮಲಿಕ್ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿ ವಿಶ್ವದ ಗಮನಸೆಳೆದಿದ್ದಾರೆ. 140ಕ್ಕೂ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಉಮ್ರಾನ್ ಮಲಿಕ್ ಟಿ20 ವಿಶ್ವಕಪ್ ತಂಡದಿಂದ ಹೊರಗಿಟ್ಟಿರುವುದು ಬಿಸಿಸಿಐ ಆಯ್ಕೆ ಸಮಿತಿಯ ತಪ್ಪು ನಿರ್ಧಾರ ಎಂದು ಲೀ ಹೇಳಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ(bcci selection committee) ಪ್ರಕಟಿಸಿದ ತಂಡ ನೋಡಿದಾಗ ಅಚ್ಚರಿಯಾಗಿದೆ. ಈ ತಂಡದಲ್ಲಿ (Team India)ವೇಗಿ ಉಮ್ರಾನ್ ಮಲಿಕ್(umran malik) ಕಬಿಟ್ಟಿದ್ದಾರೆ. ಸತತವಾಗಿ 140ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಮಲಿಕ್‌ನನ್ನು ಯಾಕೆ ಹೊರಗಿಟ್ಟಿದ್ದೀರಿ ಎಂದು ಬ್ರಿಟ್ ಲೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಮ್ರಾನ್ ಮಲಿಕ್ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಆಸೀಸ್(Australia Condition) ಕಂಡೀಷನ್‌ಗೆ ಉಮ್ರಾನ್ ಮಲಿಕ್ ಸೂಕ್ತ ವೇಗಿಯಾಗಿದ್ದಾರೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಹಾಗೂ ದೀಪಕ್ ಚಹಾರ್(Deepak Chahar) ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ನೀಡುವುದು ಸೂಕ್ತ ಎಂದು ಲೀ ಹೇಳಿದ್ದಾರೆ.

T20 World Cup 2022: ಇಲ್ಲಿದೆ ನೋಡಿ ಟೀಂ ಇಂಡಿಯಾ ವೇಳಾಪಟ್ಟಿ, ಪಂದ್ಯ ಆರಂಭ, ತಂಡದ ಕಂಪ್ಲೀಟ್‌ ಡೀಟೈಲ್ಸ್‌

ಆಸ್ಟ್ರೇಲಿಯಾದಂತ ಕಂಡೀಷನ್ ವೇಗಿಗಳಿಗೆ ನೆರವಾಗಲಿದೆ. ಹೀಗಾಗಿ ಟಿ20 ವಿಶ್ವಕಪ್(T20 World cup 2022) ಟೂರ್ನಿಯಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಬೌಲರ್ ತಂಡದಲ್ಲಿದ್ದರೆ ಅರ್ಧ ಪಂದ್ಯ ಗೆದ್ದಂತೆ ಎಂದು ಲೀ(Bret lee) ಹೇಳಿದ್ದಾರೆ. 

ಟಿ20 ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಗೆದ್ದ ಭಾರತ
ಸೂರ್ಯಕುಮಾರ್‌ ಯಾದವ್‌ ತಮ್ಮ ಬ್ಯಾಟಿಂಗ್‌ ಲಯ ಮುಂದುವರಿಸಿದ್ದು, ಪಶ್ಚಿಮ ಆಸ್ಪ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ 13 ರನ್‌ ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಉದ್ದೇಶದಿಂದ 2 ಅಭ್ಯಾಸ ಪಂದ್ಯ ಆಯೋಜಿಸಲಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರಲ್ಲಿ 6 ವಿಕೆಟ್‌ಗೆ 158 ರನ್‌ ಗಳಿಸಿತು. ಸೂರ್ಯಕುಮಾರ್‌ ತಲಾ 3 ಬೌಂಡರಿ, ಸಿಕ್ಸರ್‌ನೊಂದಿಗೆ 35 ಎಸೆತದಲ್ಲಿ 52 ರನ್‌ ಸಿಡಿಸಿದರು. ಪಶ್ಚಿಮ ಆಸ್ಪ್ರೇಲಿಯಾ 145 ರನ್‌ ಗಳಿಸಿತು. ಅಶ್‌ರ್‍ದೀಪ್‌ 3 ಓವರಲ್ಲಿ 6 ರನ್‌ಗೆ 3 ವಿಕೆಟ್‌ ಕಿತ್ತರು.

T20 World Cup: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ INOX

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌