
ಎಡ್ಜ್‌ಬಾಸ್ಟನ್ (ಜೂ.14) ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ದಿಟ್ಟ ಹೋರಾಟ ನೀಡಿದೆ. ಪಾಕಿಸ್ತಾನ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಮಹಿಳಾ ತಂಡಕ್ಕೆ ಸ್ಮೃತಿ ಮಂಧನಾ, ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ರಿಚಾ ಘೋಷ್ ಹೋರಾಟದಿಂದ 6 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿದೆ. ಇದರೊಂದಿಗೆ ಪಾಕಿಸ್ತಾನ ಮಹಿಳಾ ತಂಡಕ್ಕೆ 171 ರನ್ ಟಾರ್ಗೆಟ್ ನೀಡಿದೆ.
ಭಾರತ ಬ್ಯಾಟಿಂಗ್ ಆರಂಭಕ್ಕೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರೆ. ಪಂದ್ಯದ ಮೊದಲ ಓವರ್‌ನ ಮೊದಲ ಎಸೆತವನ್ನೇ ಶೆಫಾಲಿ ವರ್ಮಾ ಸಿಕ್ಸರ್ ಸಿಡಿಸಿದರು. ಆದೇ ಓವರ್‌ನಲ್ಲಿ ಶೆಫಾಲಿ ವರ್ಮಾ ವಿಕೆಟ್ ಕೈಚೆಲ್ಲಿದರು. ಹೀಗಾಗಿ ಆರಂಭದಲ್ಲೇ ಭಾರತ ವಿಕೆಟ್ ಆಘಾತ ಅನುಭವಿಸಿತು. ಜೇಮಿ ರೋಡಿಗ್ರಸ್ ಕೂಡ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ಸ್ಮೃತಿ ಮಂಧನಾ ದಿಟ್ಟ ಹೋರಾಟದ ಮೂಲಕ ಭಾರತ ಮತ್ತೆ ಕಮ್‌ಬ್ಯಾಕ್ ಮಾಡಿತು.
ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ ಜೊತೆಯಾಟದಿಂದ ಭಾರತ ಮತ್ತೆ ಹೋರಾಟ ಮುಂದುವರಿಸಿತು. ಸ್ಮೃತಿ ಮಂಧನಾ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. 44 ಎಸೆತದಲ್ಲಿ 68 ರನ್ ಸಿಡಿಸಿ ಸ್ಮೃತಿ ಮಂಧನಾ ವಿಕೆಟ್ ಪತನಗೊಂಡಿತು. ಈ ವೇಳೆ ಭಾರತ ಮಹಿಳಾ ತಂಡದಲ್ಲಿ ಮತ್ತೆ ಕುಸಿತ ಆರಂಭಗೊಂಡಿತು.
ಹರ್ಮನ್‌ಪ್ರೀತ್ ಕೌರ್ 36 ರನ್ ಸಿಡಿಸಿದರು. ಇತ್ತ ರಿಚಾ ಘೋಷ್ ಅಬ್ಬರ ಆರಂಭಗೊಂಡಿತು. ಕೇವಲ 17 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 34 ರನ್ ಸಿಡಿಸಿದರು. 200ರ ಸ್ಟ್ರೈಕ್‌ರೇಟ್‌ನಲ್ಲಿ ರಿಚಾ ಘೋಷ್ ಬ್ಯಾಟಿಂಗ್ ಭಾರತ ಮಹಿಳಾ ತಂಡಕ್ಕೆ ನೆರವಾಯಿತು. ದೀಪ್ತಿ ಶರ್ಮಾ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಭಾರತ 6 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.