ಕೊಡಗು: ಕೌಟುಂಬಿಕ ಜಂಜಾಟ ಮರೆತು ಕ್ರಿಕೆಟ್ ಆಡಿ ಸಂಭ್ರಮಿಸಿದ ಮಹಿಳೆಯರು..!

By Girish Goudar  |  First Published Nov 5, 2023, 9:04 PM IST

6 ಓವರುಗಳ ಪಂದ್ಯಾವಳಿಯಲ್ಲಿ 25 ವರ್ಷ ಮೇಲ್ಪಟ್ಟ ಒಟ್ಟು 15 ಮಹಿಳಾ ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ಪ್ರವೇಶ ಪಡೆದ ಟೀಂ ಮಾಲ್ದಾರೆ ತಂಡ ಹಾಗೂ ಟೀಂ ಮಾಸ್ಟರ್ ಬ್ಲಾಸ್ಟರ್ ತಂಡ ಗೆಲುವನ್ನು ಸಾಧಿಸುವ ಮೂಲಕ ಅಂತಿಮ ಹಂತಕ್ಕೆ  ಪ್ರವೇಶಿಸಿದವು. ಫೈನಲ್ ಹಂತದಲ್ಲಿ ಟಾಸ್ ಗೆದ್ದಂತ ಮಾಸ್ಟರ್ ಬ್ಲಾಸ್ಟ್ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿ ನಿಗದಿತ ನಾಲ್ಕು ಓವರುಗಳಿಗೆ 23 ಗಳ ಗುರಿ ನೀಡಿತ್ತು. ಈ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಮಾಲ್ದಾರೆ ತಂಡ  2.3 ಎಸೆತಗಳಲ್ಲಿ ಗೆದ್ದು ಬೀಗಿತು. 


ಕೊಡಗು(ನ.05):  ಕೌಟುಂಬಿಕ ಜಂಜಾಟ, ನಿತ್ಯದ ಕೆಲಸ ಕಾರ್ಯಗಳನ್ನೆಲ್ಲಾ ಬದಿಗೊತ್ತಿ ಸಮವಸ್ತ್ರತೊಟ್ಟ ಮಹಿಳೆಯರು ಪುರುಷರಿಗಿಂತ ನಾವೇನು ಕಡಿಮೆ ಎಂದು ಕ್ರಿಕೆಟ್ ಬ್ಯಾಟ್ ಹಿಡಿದು ಸಿಕ್ಸ್‌, ಫೋರು ಬಾರಿಸಿ ಸಂಭ್ರಮಿಸುತಿದ್ದರೆ, ಉಳಿದ ಮಹಿಳೆಯರು ಚಿಯರ್ ಗರ್ಲ್ಸ್ ಗಳಾಗಿ ನರ್ತಿಸಿ ಆಟಗಾರ್ತಿಯರಿಗೆ ಅಷ್ಟೇ ಅಲ್ಲ ಉಳಿದ ಪ್ರೇಕ್ಷಕರಿಗೂ ಫುಲ್ ಎಂಜಾಯ್ಮೆಂಟ್ ನೀಡಿದರು. ಈ ದೃಶ್ಯ ಕಂಡಿದ್ದು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ  ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ ನಡೆದ 2ನೇ ವರ್ಷ ಮಹಿಳೆಯರ ಮುಕ್ತ ನಾಕೌಟ್ ಕ್ರಿಕೆಟ್ ಪಂದ್ಯಾಟದಲ್ಲಿ.  

6 ಓವರುಗಳ ಪಂದ್ಯಾವಳಿಯಲ್ಲಿ 25 ವರ್ಷ ಮೇಲ್ಪಟ್ಟ ಒಟ್ಟು 15 ಮಹಿಳಾ ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ಪ್ರವೇಶ ಪಡೆದ ಟೀಂ ಮಾಲ್ದಾರೆ ತಂಡ ಹಾಗೂ ಟೀಂ ಮಾಸ್ಟರ್ ಬ್ಲಾಸ್ಟರ್ ತಂಡ ಗೆಲುವನ್ನು ಸಾಧಿಸುವ ಮೂಲಕ ಅಂತಿಮ ಹಂತಕ್ಕೆ  ಪ್ರವೇಶಿಸಿದವು. ಫೈನಲ್ ಹಂತದಲ್ಲಿ ಟಾಸ್ ಗೆದ್ದಂತ ಮಾಸ್ಟರ್ ಬ್ಲಾಸ್ಟ್ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿ ನಿಗದಿತ ನಾಲ್ಕು ಓವರುಗಳಿಗೆ 23 ಗಳ ಗುರಿ ನೀಡಿತ್ತು. ಈ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಮಾಲ್ದಾರೆ ತಂಡ  2.3 ಎಸೆತಗಳಲ್ಲಿ ಗೆದ್ದು ಬೀಗಿತು. 

Tap to resize

Latest Videos

undefined

ಮಡಿಕೇರಿ ದಸರಾ ಅವೈಜ್ಞಾನಿಕ ಮಂಟಪಗಳಿಂದ ತೀವ್ರ ಸಮಸ್ಯೆ : ಕೊಡಗು ಎಸ್ಪಿ ಕೆ. ರಾಮರಾಜನ್

ಸಂಭ್ರಮ ತಂಡದೊಂದಿಗೆ ಸೆಣಸಾಡಿದ ನೀಲಿ ಆಟ್ ಟೀ ಕೋಕೇರಿ ತಂಡ ಮೂರನೇ ಬಹುಮಾನ ಪಡೆಯಿತು. ಟೀಂ ಮಾಲ್ದಾರೆ ತಂಡ ಪ್ರಥಮ ಬಹುಮಾನ 21 ಸಾವಿರ ನಗದು ಹಾಗು ಟ್ರೋಫಿ ಪಡೆದರೆ ಮಾಸ್ಟರ್ ಬ್ಲಾಸ್ಟರ್ ತಂಡ ದ್ವಿತೀಯ ಸ್ಥಾನ ಪಡೆದು 11 ಸಾವಿರ ನಗದು ಹಾಗು ಟ್ರೋಫಿ ಪಡೆದರು. 

ನೀಲೀ ಆಟ್ ಟೀ.ಕೋಕೇರಿ ಮಹಿಳಾತಂಡ ಮೂರನೇ ಬಹುಮಾನ ಪಡೆದು 6 ಸಾವಿರ ನಗದು ಹಾಗು ಟ್ರೋಫಿ ಪಡೆದರು. ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದ ಭಾರತಿ ಬೆಸ್ಟ್ ಬಾಲರ್, ಟೀಂ ಮಾಲ್ದಾರೆ ತಂಡದ ಸುಜಿತಾ ಬೆಸ್ಟ್ ಬ್ಯಾಟರ್ ಹಾಗು ಟೀಂ ಸಂಭ್ರಮಾ ತಂಡದ ಅಂಜನಾ ಅತ್ಯದಿಕ ರನ್ ಬಹುಮಾನ ಪಡೆದವರು, ಅತ್ಯುತಮ ವಿಕೇಟ್ ಕೀಪರ್ ಟೀಂ ಸಂಭ್ರಮಾ ತಂಡದ ನಿಶಾ, ಟೀಂ ಸಂಭ್ರಮದ ಲೀಲಾವೇಣು, ಹಿರಿಯ ಆಟಗಾರ್ತಿ ಬಹುಮಾನ ಪಡೆದರು. ಪೊಮ್ಮಕ್ಕಡ ಕೂಟ ಮಡಿಕೇರಿ ಹಾಗು ಚೆಟ್ಟಳ್ಳಿಯ ಅವರ್ ಕ್ಲಬ್ ತಂಡ ಚಿಯರ್ ಗರ್ಲಸ್ ಬಹುಮಾನ ನೀಡಲಾಯಿತು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ ಪ್ರಾಂಶುಪಾಲೆ ಮಂಡೆಪಂಡ ಡಾ. ಪುಪ್ಪಕುಟ್ಟಣ್ಣ ದೀಪಬೆಳಗುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. 

ಕೊಡಗು ಜಿಲ್ಲೆಯ ಅಂಗನವಾಡಿಗಳಿಗೆ ಕತ್ತಲೆ ಭಾಗ್ಯ..!

ಬಳಿಕ ಮಾತನಾಡಿದ ಡಾ. ಪುಪ್ಪಕುಟ್ಟಣ್ಣ ಅವರು, ಸಮಾಜದಲ್ಲಿ ಬಹುಮುಖ ಪಾತ್ರವನ್ನು ವಹಿಸುತಿರುವ ಮಹಿಳೆಯ ಪಾತ್ರ ಗೌರವಿಸುವಂತದ್ದು. ಕುಟುಂಬಗಳ ನಡುವೆ ಬದುಕು ಕಳೆಯುವ ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಚೆಟ್ಟಳ್ಳಿಯ ಅವರ್ ಕ್ಲಬ್ ಕಾರ್ಯಕ್ಕೆ ಶ್ಲಾಘಿಸಿ ಇಂತಹ ವಿವಾಹಿತ ಮಹಿಳೆಯರ ಕ್ರಿಕೆಟ್, ಕ್ರೀಡೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿದೆಂದರು. 

ಕ್ಲಬ್ ನ ಅಧ್ಯಕ್ಷೆ ಐಚೆಟ್ಟೀರ ಸುನಿತ ಮಾಚಯ್ಯ ಮಾತನಾಡಿ, ಮಹಿಳೆಯರನ್ನು ಒಟ್ಟು ಸೇರಿಸಿ 2010 ರಲ್ಲಿ ಚೆಟ್ಟಳ್ಳಿ ಯಲ್ಲಿ ಅವರ್ ಕ್ಲಬ್ ನ್ನು ಮಾಡಲಾಗಿದೆ. ತಿಂಗಳಿಗೊಮ್ಮೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಕಳೆದ ಬಾರಿ ಮೊದಲ ವರ್ಷದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗಿತ್ತು. ಆಗ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆ ಈ ಬಾರಿ ಎರಡನೇ ವರ್ಷದ ವಿವಾಹಿತ ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಡೆಸಲು ಸಾಧ್ಯವಾಯಿತೆಂದರು.
ಉಪಾಧ್ಯಕ್ಷೆ ಮುಳ್ಳಂಡ ಶೋಭಾಚಂಗಪ್ಪ, ಕಾರ್ಯದರ್ಶಿ ಮನೆಪಂಡ ಅಂಜಲಿ, ಖಜಾಂಚಿ ಮುಳ್ಳಂಡ ಮಾಯಮ್ಮ ತಮ್ಮಯ್ಯ, ಮಾಜಿ ಅಧ್ಯಕ್ಷರಾದ ಕೊಂಗೇಟಿರ ದೇಚುಮುದ್ದಯ್ಯ ವೇದಿಕೆಯಲ್ಲಿದ್ದರು.

click me!