ಐಪಿಎಲ್‌-2025ರಿಂದ ಅರ್ಧಕ್ಕೆ ಹೊರಟ 8 ಆಟಗಾರರು? BCCIಗೆ ಎದುರಾಯ್ತು ಬಿಗ್‌ ಚಾಲೆಂಜ್!

Published : May 14, 2025, 04:39 PM IST
ಐಪಿಎಲ್‌-2025ರಿಂದ ಅರ್ಧಕ್ಕೆ ಹೊರಟ 8 ಆಟಗಾರರು? BCCIಗೆ ಎದುರಾಯ್ತು ಬಿಗ್‌ ಚಾಲೆಂಜ್!

ಸಾರಾಂಶ

ಐಪಿಎಲ್ 2025 ಮರು ನಿಗದಿತ ದಿನಾಂಕಗಳಿಂದಾಗಿ,  ಎಂಟು ಆಟಗಾರರು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತಯಾರಿಗಾಗಿ ಪಂದ್ಯಾವಳಿಯನ್ನು ಅರ್ಧದಲ್ಲಿಯೇ ತೊರೆಯಬಹುದು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕಾರ್ಮೋಡ ಕವಿದ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು (IPL 2025) ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮೇ 17ರಿಂದ ಐಪಿಎಲ್ ಕ್ರಿಕಟ್ ಪಂದ್ಯಗಳು (IPL Rescheduled) ನಡೆಯಲಿವೆ. ಇದೀಗ ಬಿಸಿಸಿಐಗೆ ಹೊಸ ಸವಾಲುಗಳು ಎದುರಾಗುತ್ತಿವೆ. ವಿದೇಶಿ ಕ್ರಿಕೆಟ್ ಆಟಗಾರರು ಸೀಮಿತ ಅವಧಿಗಾಗಿ ಐಪಿಎಲ್ ಪಂದ್ಯಗಳನ್ನಾಡಲು ಭಾರತಕ್ಕೆ ಆಗಮಿಸಿರುತ್ತಾರೆ. ಎಲ್ಲವೂ ಅಂದ್ಕೊಂಡಂತೆ ಆಗಿದ್ರೆ ಮೇ 25ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಬೇಕಿತ್ತು. ಆದ್ರೆ ಇದೀಗ ಮರು ಹೊಂದಾಣಿಕೆಯಿಂದಾಗಿ ಜೂನ್ 3ರಂದು ಫೈನಲ್ ನಡೆಯಲಿದೆ. 

ಈ ಕಾರಣದಿಂದ ವಿದೇಶಿ ಆಟಗಾರರು ಹೆಚ್ಚಿನ ದಿನ ಭಾರತದಲ್ಲಿರಬೇಕಾಗುತ್ತದೆ. ಇತ್ತೀಚಿನ ವರದಿಗಳ ಪ್ರಕಾರ, ಸೌಥ್ ಆಫ್ರಿಕಾದ 8 ಆಟಗಾರರು ಅರ್ಧದಲ್ಲಿಯೇ ಐಪಿಎಲ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ತನ್ನ ಆಟಗಾರರು ಐಪಿಎಲ್‌ನಲ್ಲಿ ಆಡಲು ಗಡುವನ್ನು ನಿಗದಿಪಡಿಸಿದೆ. ಆ ಗಡುವು ಮುಗಿದ ಕೂಡಲೇ ಸೌಥ್ ಆಫ್ರಿಕಾದ ಆಟಗಾರರು ಹಿಂದಿರುಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

ಜೂನ್ 11ರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯ
ಎಲ್ಲಾ ವಿದೇಶಿ ಆಟಗಾರರು ಇಡೀ ಐಪಿಎಲ್ ಆಡಬೇಕೆಂದು ಬಿಸಿಸಿಐ ಬಯಸುತ್ತಿದೆ. ಒಂದು ವೇಳೆ ಸೌಥ್ ಆಪ್ರಿಕಾ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರವನ್ನು ಸಡಿಲಸದಿದ್ದರೆ ಆಟಗಾರರು ಹಿಂದಿರುಗಬೇಕಾಗುತ್ತದೆ. ಐಪಿಎಲ್ 2025 ಮೇ 17 ರಂದು ಮತ್ತೆ ಪ್ರಾರಂಭವಾಗಲಿದೆ. ಈಗ ಲೀಗ್‌ನ ಅಂತಿಮ ಪಂದ್ಯ ಜೂನ್ 3 ರಂದು ನಡೆಯಲಿದೆ. ಜೂನ್ 11 ರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯ ನಡೆಯಲಿದೆ. ಈ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರು ಐಪಿಎಲ್‌ನಲ್ಲಿ ಆಡಲು ಗಡುವು ವಿಧಿಸಿದೆ ಎಂದು ವರದಿಯಾಗಿದೆ. 

ಆಟಗಾರರಿಗೆ ಮೇ 26ರ ಗಡುವು
ಡಬ್ಲ್ಯೂಟಿಸಿ ಫೈನಲ್‌ಗೆ ಸಿದ್ಧತೆ ನಡೆಸುವುದು ತನ್ನ ಮೊದಲ ಆದ್ಯತೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸ್ಪಷ್ಟಪಡಿಸಿದೆ. ಈ ಕಾರಣಕ್ಕಾಗಿ, ಮಂಡಳಿಯು ತನ್ನ ಆಟಗಾರರನ್ನು ಮೇ 26 ರವರೆಗೆ ಮಾತ್ರ ಐಪಿಎಲ್‌ನಲ್ಲಿ ಆಡುವಂತೆ ಕೇಳಿಕೊಂಡಿದೆ. ಸಿಎಸ್‌ಎ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಎನೋಚ್ ಎನ್‌ಕ್ವೆ ಪತ್ರಿಕಾಗೋಷ್ಠಿಯಲ್ಲಿ, "ಲೀಗ್ ಆಟಕ್ಕೆ ಮರಳಬೇಕೆ ಅಥವಾ ಬೇಡವೇ ಎಂಬುದು ಆಟಗಾರರ ವೈಯಕ್ತಿಕ ನಿರ್ಧಾರ. ಟೆಸ್ಟ್ ಆಟಗಾರರಿಗೆ ಮೇ 26 ಕೊನೆಯ ದಿನಾಂಕವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆಟಗಾರರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಕೂತಹಲ ಮೂಡಿದೆ.

ಯಾವೆಲ್ಲಾ ಆಟಗಾರರು ಹಿಂದಿರುಬಹುದು?
ಈ ವರ್ಷದ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾದ 8 ಟೆಸ್ಟ್ ಆಟಗಾರರು ಆಡುತ್ತಿದ್ದಾರೆ. ಕಗಿಸೊ ರಬಾಡ ಗುಜರಾತ್ ಟೈಟಾನ್ಸ್ ಪರ, ಲುಂಗಿ ಎನ್‌ಗಿಡಿ ಆರ್‌ಸಿಬಿ ಪರ, ಟ್ರೆಸ್ಟನ್ ಸ್ಟಬ್ಸ್ ಡೆಲ್ಲಿ ಕ್ಯಾಪಿಟಲ್ಸ್ ಪರ, ಐಡೆನ್ ಮಾರ್ಕ್ರಾಮ್ ಲಕ್ನೋ ಸೂಪರ್ ಜೈಂಟ್ಸ್ ಪರ, ರಯಾನ್ ರಿಕಲ್ಟನ್ ಮುಂಬೈ ಇಂಡಿಯನ್ಸ್ ಪರ, ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ಪರ, ಮಾರ್ಕೊ ಜಾನ್ಸೆನ್ ಪಂಜಾಬ್ ಕಿಂಗ್ಸ್ ಪರ ಮತ್ತು ವಿಯಾನ್ ಮುಲ್ಡರ್ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. ಅವರೆಲ್ಲರೂ ಐಪಿಎಲ್ ಬಿಟ್ಟು ಮಧ್ಯದಲ್ಲಿಯೇ ಹಿಂದಿರಗಹಬುದು. ಒಂದು ವೇಳೆ ಆಟಗಾರರು ಹಿಂದಿರುಗಿದ್ರೆ ಐಪಿಎಲ್ ತಂಡದ ಮಾಲೀಕರು ಮತ್ತು ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ