
ಕ್ರಿಕೆಟ್ ಮೈದಾನದಲ್ಲಿ ನಡೆಯುವ ಹಲವು ಘಟನೆಗಳು ಭಾರಿ ವೈರಲ್ ಆಗುತ್ತದೆ. ಅದು ಅಂತಾರಾಷ್ಟ್ರೀಯ ಪಂದ್ಯವೇ ಇರಲಿ, ಗಲ್ಲಿ ಕ್ರಿಕೆಟ್ ಇರಲಿ, ಕೆಲ ಘಟನೆಗಳು ಯಾವತ್ತೂ ಭಾರಿ ಸದ್ದು ಮಾಡುತ್ತದೆ. ಇದೀಗ ಕ್ರಿಕೆಟ್ ಪಂದ್ಯವೊಂದರಲ್ಲಿ ನಡದ ರನೌಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾರಣ ಹಲವರು ಇದು ರನೌಟ್ ಅಂದರೆ, ಮತ್ತೆ ಕೆಲವರು ನಾಟೌಟ್ ಎಂದಿದ್ದಾರೆ. ಇಲ್ಲಿ ಅಂಪೈರ್ ಒಂದು ಕ್ಷಣ ಯೋಚನೆ ಮಾಡದೆ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ಈ ಅಂಪೈರ್ ಕೊಟ್ಟ ತೀರ್ಪಿನ ಬಳಿಕ ಹಲವರು ಗೊಂದಲಕ್ಕೀಡಾಗಿದ್ದಾರೆ.
ಏನಿದು ಘಟನೆ?
ರಿಚರ್ಡ್ ಕೆಟಲ್‌ಬರ್ಗ್ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ. ಮೀಡಿಯಂ ಫಾಸ್ಟ್ ಬೌಲರ್ ಬೌಲಿಂಗ್ ಮಾಡಿದ್ದಾನೆ. ಬಾಲ್ ಪಿಚ್ ಆದ ಬಳಿಕ ಬೌನ್ಸ್ ಆಗಿದೆ. ಇತ್ತ ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್ ಬೀಸಿ ಹೊಡೆಯುವ ಪ್ರಯತ್ನ ಮಾಡಿದ್ದಾನೆ. ಆದರೆ ಬಾಲ್ ಟಾಪ್ ಎಡ್ಜ್ ಆಗಿದೆ. ಹೀಗಾಗಿ ಬಾಲ್ ಮತ್ತಷ್ಟು ಎತ್ತರಕ್ಕೆ ಚಿಮ್ಮಿದೆ. ಇತ್ತ ಅಲರ್ಟ್ ಆಗಿದ್ದ ಕೀಪರ್ ಕೈಗೆ ಸಿಕ್ಕಿಲ್ಲ. ಒಂದಷ್ಟು ಪ್ರಯತ್ನ ಪಟ್ಟಿದ್ದರೆ ಕೀಪರ್ ಕೈಗೆ ಕ್ಯಾಚ್ ಆಗುವ ಸಾಧ್ಯತೆ ಇತ್ತು. ಆದರೆ ಕೈಗೆ ಸಿಗಲಿಲ್ಲ.
ನಿವೃತ್ತಿ ಬೆನ್ನಲ್ಲೇ ವ್ಯವಹಾರದ ವಿಸ್ತರಣೆಗೆ ಮುಂದಾದ ಕೊಹ್ಲಿ!
ಬಾಲ್ ಟಾಪ್ ಎಡ್ಜ್ ಆಗಿ ಕೀಪರ್ ಮೇಲಿನಿಂದ ಹಿಂದಕ್ಕೆ ಬೀಳುತ್ತಿದ್ದಂತೆ ಸ್ಲಿಪ್‌ನಲ್ಲಿದ್ದ ಫೀಲ್ಡರ್ ಓಡೋಡಿ ಬಂದು ಫೀಲ್ಡಿಂಗ್ ಮಾಡಿದ್ದಾನೆ. ಇಷ್ಟೊತ್ತಿದೆ ಬ್ಯಾಟ್ಸ್‌ಮನ್ ಬಾಲ್ ಎಲ್ಲಿದೆ, ಏನಾಗುತ್ತಿದೆ ಎಂದು ನೋಡುತ್ತಿದ್ದರೆ, ಅತ್ತ ನಾನ್ ಸ್ಟ್ರೈಕರ್ ನೇರವಾಗಿ ರನ್‌ಗಾಗಿ ಓಡೋಡಿ ಬಂದಿದ್ದಾನೆ. ಇತ್ತ ಸ್ಟ್ರೈಕ್ ಬ್ಯಾಟ್ಸ್‌ಮನ್ ಕೊನೆಯ ಕ್ಷಣದಲ್ಲಿ ಬೇಡ ಬೇಡ ಎಂದರೂ ನಾನ್ ಸ್ಟ್ರೈಕರ್ ಕ್ರೀಸ್‌ಗೆ ಬಂದಾಗಿತ್ತು. ಇತ್ತ ಫೀಲ್ಡರ್ ನೇರವಾಗಿ ಬೌಲರ್ ಕೈಗೆ ಚೆಂಡು ಎಸೆದಿದ್ದಾನೆ. ಅಷ್ಟೊತ್ತಿಗೆ ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್ ಅನಿವಾರ್ಯವಾಗಿ ನಾನ್ ಸ್ಟ್ರೈಕ್‌ನತ್ತ ಓಡಲು ಆರಂಭಿಸಿದ್ದಾನೆ. ಆದರೆ ಬೌಲರ್ ಕೈಯಲ್ಲಿ ಚೆಂಡು ಇದ್ದ ಕಾರಣ, ಬೇಲ್ಸ್ ಎಗರಿಸಿ ಕೈಯಲ್ಲಿ ಹಿಡಿದಿದ್ದಾನೆ. ಬಳಿಕ ಒಂದು ಸೆಂಕೆಂಡ್ ಬಳಿಕ ಮತ್ತೆ ಬೇಲ್ಸ್ ಇಟ್ಟು ವಿಕೆಟ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಅಷ್ಟೊತ್ತಿಗೆ ಬ್ಯಾಟರ್ ಕ್ರೀಸ್‌ಗೆ ಆಗಮಿಸಿದ್ದಾನೆ. ಕ್ರೀಸ್ ಸೇರಿಕೊಂಡ ಬೆನ್ನಲ್ಲೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದಾರೆ. ಅಂಪೈರ್ ಪ್ರಕಾರ ಬೇಲ್ಸ್ ಕೈಯಲ್ಲಿ ಹಿಡಿದಿದ್ದೀರಿ. ಕೆಳಕ್ಕೆ ಬಿದ್ದಿಲ್ಲ ಅನ್ನೋದು ವಾದ. ಇತ್ತ ಬೇಲ್ಸ್ ತೆಗೆದಿದ್ದೇವೆ, ಇದು ರನೌಟ್ ಎಂದು ಬೌಲರ್ ಹಾಗೂ ಇತರ ಸದಸ್ಯರು ವಾದ ಮಾಡಿದ್ದಾರೆ.
ಈ ವಿಡಿಯೋದಲ್ಲಿರುವ ರನೌಟ್ ಇದೀಗ ಹಲವರನ್ನು ಗೊಂದಲಕ್ಕೀಡು ಮಾಡಿದೆ. ರನೌಟ್ ಅಥವಾ ನಾಟೌಟ್ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಪೈರ್ ನಿರ್ಧಾರ ಸರಿಯಾಗಿದೆ. ಕಾರಣ ಬೇಲ್ಸ್ ಕೆಳಕ್ಕೆ ಬೀಳಬೇಕು. ಇಲ್ಲಿ ಬೌಲರ್ ಕೈಯಲ್ಲಿ ತೆಗೆದಿರಬಹುದು. ಆದರೆ ಕೆಳಕ್ಕೆ ಬಿದ್ದಿಲ್ಲ. ಕೈಯಲ್ಲಿ ಬೇಲ್ಸ್ ತೆಗೆದರೂ ಕೆಳಕ್ಕೆ ಬಾಕಬೇಕು. ಬೇಲ್ಸ್ ನಾಟ್ ಡೌನ್. ಸೋ ನಾಟೌಟ್ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಬ್ಯಾಟರ್ ಕ್ರೀಸ್‌ಗೆ ಆಗಮಿಸುವ ವೇಳೆ ಬೇಲ್ಸ್ ವಿಕೆಟ್ ಮೇಲಿತ್ತು. ಇಲ್ಲಿ ಬೇಲ್ಸ್ ಕೆಳಕ್ಕೆ ಬಿದ್ದಿಲ್ಲ. ಹೀಗಾಗಿ ನಾಟೌಟ್ ಅನ್ನೋದು ಹಲವರ ವಾದ.
ವಿಕೆಟ್‌ನಿಂದ ಬೇಲ್ಸ್ ತೆಗೆದಿದ್ದಾರೆ. ಇದು ಔಟ್. ನೆಲಕ್ಕೆ ಬೇಳಬೇಕು ಎಂದಿಲ್ಲ ಎಂದು ಮತ್ತೆ ಕೆಲವರು ವಾದ ಮಂಡಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಈ ವಿಡಿಯೋ ನೋಡಿ ಗೊಂದಲಕ್ಕೀಡಾಗಿದ್ದಾರೆ.
WTC ಫೈನಲ್‌ಗೆ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಬಲಿಷ್ಠ ತಂಡಗಳ ಘೋಷಣೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.