
ನವದೆಹಲಿ: ಕೆ.ಎಲ್.ರಾಹುಲ್, ಡೇವಿಡ್ ಮಿಲ್ಲರ್ ಹೋರಾಟದ ಹೊರತಾಗಿಯೂ ಕೊನೆ ಓವರ್‌ನಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ 1 ರನ್ ವೀರೋಚಿತ ಸೋಲನುಭವಿಸಿದೆ. ಸತತ 2ರಲ್ಲಿ ಗೆದ್ದಿದ್ದ ಡೆಲ್ಲಿಗಿದು ಮೊದಲ ಸೋಲು. ಗುಜರಾತ್ ಮೂರರಲ್ಲಿ ಮೊದಲ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ 4 ವಿಕೆಟ್‌ಗೆ 210 ರನ್ ಗಳಿಸಿತು. ನಾಯಕ ಶುಭ್‌ಮನ್ ಗಿಲ್ 45 ಎಸೆತಕ್ಕೆ 70, ಜೋಸ್ ಬಟ್ಲರ್ 27 ಎಸೆತಕ್ಕೆ 52, ವಾಷಿಂಗ್ಟನ್ ಸುಂದರ್ 32 ಎಸೆತಗಳಲ್ಲಿ 55 ರನ್ ಸಿಡಿಸಿದರು. ಮುಕೇಶ್ 2 ವಿಕೆಟ್ ಕಿತ್ತರು.
ದೊಡ್ಡ ಗುರಿ ಬೆನ್ನತ್ತಿದ ಡೆಲ್ಲಿ 8 ವಿಕೆಟ್ ನಷ್ಟದಲ್ಲಿ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕ 2 ಪಂದ್ಯದಲ್ಲಿ ವಿಫಲರಾಗಿದ್ದ ಕೆ.ಎಲ್.ರಾಹುಲ್ ಈ ಪಂದ್ಯದಲ್ಲಿ 52 ಎಸೆತಕ್ಕೆ 92 ರನ್ ಸಿಡಿಸಿದರು. ಇತರರು ಕೈಕೊಟ್ಟರೂ ಕೊನೆವರೆಗೂ ಕ್ರೀಸ್‌ನಲ್ಲಿದ್ದ ಡೇವಿಡ್ ಮಿಲ್ಲರ್ 20 ಎಸೆತಕ್ಕೆ 41 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ರಶೀದ್ 3 ವಿಕೆಟ್ ಕಿತ್ತರು.
ಸ್ಕೋರ್: ಗುಜರಾತ್ 210/4 (ಗಿಲ್ 70, ಸುಂದರ್ 55, ಬಟ್ಲರ್ 52, ಮುಕೇಶ್ 2-55), ಡೆಲ್ಲಿ 209/8 (ರಾಹುಲ್ 92, ಮಿಲ್ಲರ್ ಔಟಾಗದೆ 41, ರಶೀದ್ 3-17)
ಪಂದ್ಯಶ್ರೇಷ್ಠ:
ಡೆಲ್ಲಿಗೆ ಕೊನೆ 2 ಓವರ್‌ನಲ್ಲಿ 36 ರನ್ ಬೇಕಿತ್ತು. ಸಿರಾಜ್ ಎಸೆದ 19ನೇ ಓವರ್‌ನಲ್ಲಿ ತಂಡ 23 ರನ್ ಸಿಡಿಸಿತು. ಮಿಲ್ಲರ್ 2 ಸಿಕ್ಸರ್, 1 ಬೌಂಡರಿ, ವಿಪ್ರಾಜ್ 1 ಬೌಂಡರಿ ಬಾರಿಸಿದರು. ಕೊನೆ ಓವರ್‌ನಲ್ಲಿ 13 ರನ್ ಅಗತ್ಯವಿತ್ತು. ಪ್ರಸಿದ್ಧ್ ದಾಳಿಗಿಳಿದರು. ವಿಪ್ರಾಜ್ ಮೊದಲ ಎಸೆತಕ್ಕೆ ಬೌಂಡರಿ, 2ನೇ ಎಸೆತಕ್ಕೆ ಔಟ್. 3ನೇ ಎಸೆತದಲ್ಲಿ ಕುಲ್ದೀಪ್ 1 ರನ್. 4ನೇ ಎಸೆತದಲ್ಲಿ ಮಿಲ್ಲರ್ ಸಿಕ್ಸರ್. 5ನೇ ಎಸೆತದಲ್ಲಿ ಸಿಂಗಲ್ ಪಡೆಯುವ ಅವಕಾಶವಿದ್ದರೂ ಮಿಲ್ಲರ್ ಓಡಲಿಲ್ಲ. ಕೊನೆ ಎಸೆತಕ್ಕೆ 2 ರನ್ ಬೇಕಿದ್ದಾಗ ಬೌನ್ಸರ್ ಬಾಲ್ ಡಾಟ್ ಆಗಿ, ಮಿಲ್ಲರ್ ರನೌಟ್ ಆದರು.
ಡೆಲ್ಲಿ ಐಪಿಎಲ್‌ನಲ್ಲಿ 4 ಬಾರಿ 1 ರನ್ ಅಂತರದಲ್ಲಿ ಸೋತಿದೆ. 2015ರಲ್ಲಿ ಸಿಎಸ್‌ಕೆ, 2016ರಲ್ಲಿ ಗುಜರಾತ್ ಲಯನ್ಸ್, 2021ರಲ್ಲಿ ಆರ್‌ಸಿಬಿ, 2026ರಲ್ಲಿ ಗುಜರಾತ್ ವಿರುದ್ಧ ವೀರೋಚಿತ ಸೋಲು ಕಂಡಿದೆ. ಇಷ್ಟು ಬಾರಿ 1 ರನ್ ಅಂತರದಲ್ಲಿ ಬೇರೆ ಯಾವುದೇ ತಂಡ ಸೋತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.