
ವಿಶಾಖಪಟ್ಟಣಂ (ಏ.08) ಕ್ರಿಕೆಟ್‌ನಲ್ಲಿ ಅಂಪೈರ್ ತೀರ್ಮಾನವೇ ಅಂತಿಮ. ಹೀಗೆ ರೋಚಕ ಪಂದ್ಯದ ನಡುವೆ ಬ್ಯಾಟ್ಸ್‌ಮನ್‌ಗೆ ಅಂಪೈರ್ ರನೌಟ್ ತೀರ್ಪು ನೀಡಿದ್ದಾರೆ. ಇದು ವಿವಾದಕ್ಕೆ ಕಾರಣಾಗಿದೆ. ಪಂದ್ಯದ ರೋಚಕ ಘಟ್ಟದಲ್ಲಿ ಅಂಪೈರ್ ನೀಡಿದ ತೀರ್ಪು ಪಂದ್ಯದ ಗತಿಯನ್ನೇ ಬದಲಿಸಿತ್ತು. ಹೀಗಾಗಿ ಮೈದಾನದಲ್ಲಿ ಜಗಳ ಶುರುವಾಗಿದೆ. ವಾಗ್ವಾದ ತಾರಕಕ್ಕೇರಿದೆ. ಎಲ್ಲರನ್ನು ಸಮಾಧಾನ ಮಾಡಿದ ಅಂಪೈರಸ್ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿದ್ದಾರೆ. ಆದರೆ ಪಂದ್ಯದ ಬಳಿಕ ಇದೇ ರನೌಟ್ ವಿವಾದ ಅಂಪೈರ್ ಜೀವವನ್ನೇ ತೆಗೆದ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.
ವಿಶಾಖಪಟ್ಟಣದ ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಈ ದುರಂತ ನಡೆದಿದೆ. ಪಂದ್ಯದಲ್ಲಿ ದೋಲಾ ಅಜಿತ್ ಬಾಬು ಹಾಗೂ ಬುಡುಮುರಿ ಚಿರಂಜೀವಿ ಅಂಪೈರ್ ಆಗಿದ್ದರು. ಪಂದ್ಯ ರೋಚಕ ಘಟ್ಟ ತಲುಪಿದೆ. ಈ ವೇಲೆ ಬ್ಯಾಟರ್ ರನೌಟ್ ಆಗಿದ್ದಾನೆ. ಅಂಪೈರ್ ಅಜಿತ್ ಬಾಬು ನೀಡಿದ ತೀರ್ಪು ವಿವಾದವಾಗಿ ಮಾರ್ಪಟ್ಟಿದೆ. ಇಬ್ಬರು ಬ್ಯಾಟರ್ ವಾಗ್ವಾದ ಶುರು ಮಾಡಿದ್ದಾರೆ. ಬ್ಯಾಟಿಂಗ್ ತಂಡ ಜಗಳ ಶುರುಮಾಡಿದೆ. ಇಬ್ಬರು ಅಂಪೈರ್ ಸಮಾಧಾನ ಮಾಡಿ ಪಂದ್ಯ ಮುಂದುವರಿಸಿದ್ದಾರೆ.
ಪಂದ್ಯ ನೋಡುತ್ತಿದ್ದ ಅಭಿಮಾನಿ ಕಾಂತ ಕಿಶೋರ್ ಈ ರನೌಟ್‌ನಿಂದ ತೀವ್ರ ಆಕ್ರೋಶಗೊಂಡಿದ್ದಾರೆ. ಮೈದಾನಕ್ಕೆ ನುಗ್ಗಿದ ಕಾಂತಾ ಕಿಶೋರ್ ಕಿತ್ತಾಡಿದ್ದಾನೆ. ಪಂದ್ಯ ಮುಗಿದ ಬಳಿಕ ಇದೇ ಕಾಂತಾ ಕಿಶೋರ್ ಅಂಪೈರ್‌ಗೆ ಕರೆ ಮಾಡಿ ವಿವಾದ ಸೆಟ್ಲೆಮೆಂಟ್ ಮಾಡಲು ಸೂಚಿಸಿದ್ದಾನೆ. ಇದಕ್ಕಾಗಿ ಬೇರೆ ಜಾಗಕ್ಕೆ ಅಂಪರೈ ಇಬ್ಬರನ್ನು ಕರೆದಿದ್ದಾನೆ. ವಿವಾದ ಮುಂದುವರಿಸುವುದು ಸೂಕ್ತವಲ್ಲ ಎಂದು ಇಬ್ಬರು ಅಂಪೈರ್ ಕಾಂತಾ ಕಿಶೋರ್ ಸೂಚಿಸಿದ ಜಾಗಕ್ಕೆ ತೆರಳಿದ್ದಾರೆ. ಆದರೆ ಮೊದಲೇ ಪ್ಲಾನ್ ಮಾಡಿದ್ದ ಕಾಂತಾ ಕಿಶೋರ್ ದಾಳಿಗೆ ಸಜ್ಜಾಗಿದ್ದ.
ಅಂಪೈರ್ ಸ್ಥಳಕ್ಕೆ ಬರುತ್ತಿದ್ದಂತೆ ಮತ್ತೆ ಕಿಶೋರ್ ಕೆರಳಿದ್ದಾನೆ. ತಂದಿದ್ದ ಚಾಕು ಮೂಲಕ ಅಂಪೈರ್ ಅಜಿತ್ ಬಾಬು ಮೇಲೆ ದಾಳಿ ಮಾಡಿದ್ದಾನೆ. ತಡೆಯಲು ಬಂದ ಮತ್ತೊಬ್ಬ ಅಂಪೈರ್ ಚಿರಂಜೀವಿ ಮೇಲೂ ದಾಳಿ ಮಾಡಿದ್ದಾನೆ. ಅಜಿತ್ ಬಾಬು ಮೇಲೆ ತೀವ್ರ ದಾಳಿಯಾಗಿತ್ತು. ರಂಜಿತ್ ಬಾಬು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಂಜಿತ್ ಬಾಬು ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಬದುಕುಳಿಯಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.