ಒನ್‌ಡೇ ವಿಶ್ವಕಪ್​ನಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸೋರು ಯಾರು.?

By Suvarna NewsFirst Published Jul 21, 2023, 2:55 PM IST
Highlights

* ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ
* ವಿಶ್ವಕಪ್‌ಗೂ ಮುನ್ನ ಶುರುವಾಗಿದೆ ಟೀಂ ಇಂಡಿಯಾಗೆ ದೊಡ್ಡ ತಲೆಬಿಸಿ
* ನಾಯಕ ರೋಹಿತ್ ಶರ್ಮಾ ಜತೆ ಟೀಂ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸೋರು ಯಾರು?

ಬೆಂಗಳೂರು(ಜು.21): ಏಕದಿನ ವಿಶ್ವಕಪ್ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ. ಇದಕ್ಕಾಗಿ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನೆಡಸಿವೆ. ಟೀಂ ಇಂಡಿಯಾ ಕೂಡ ಈ ಮೆಗಾ ಟೂರ್ನಿಗಾಗಿ ರೆಡಿಯಾಗ್ತಿದೆ. ಆದ್ರೆ, ಹಲವು ಸಮಸ್ಯೆಗಳು, ಗೊಂದಲಗಳು ತಂಡವನ್ನ ಕಾಡ್ತಿವೆ. ಅದರಲ್ಲೂ ಆರಂಭಿಕ ಜೋಡಿಯದ್ದೇ ದೊಡ್ಡ ತಲೆ ನೋವಾಗಿದೆ. ಕ್ಯಾಪ್ಟನ್ ರೋಹಿತ್​ ಶರ್ಮಾ ಜೊತೆ ಯಾರು ಇನ್ನಿಂಗ್ಸ್ ಆರಂಭಿಸಿದ್ರೆ ಸೂಕ್ತ ಅನ್ನೋ ಪ್ರಶ್ನೆ ಎದ್ದಿದೆ. ​ 

ಈ ಮೂವರಲ್ಲಿ ರೋಹಿತ್​ಗೆ ಸಾಥ್ ನೀಡೋರ್ಯಾರು .?

ಸದ್ಯ ಒನ್​ಡೇ ಫಾರ್ಮೆಟ್​ನಲ್ಲಿ ರೋಹಿತ್ ಜೊತೆಗೆ ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸ್ತಿದ್ದಾರೆ. ಈ ಇಬ್ಬರು ಬಲಗೈ ಬ್ಯಾಟರ್ಸ್ ಆಗಿದ್ದಾರೆ. ಆದ್ರೆ, ವಿಶ್ವಕಪ್​ನಲ್ಲಿ ರೈಟ್ ಮತ್ತು ಲೆಫ್ಟ್ ಹ್ಯಾಂಡ್​ ಕಾಂಬಿನೇಷನ್ ಇದ್ರೆ ಸೂಕ್ತ. ಎದುರಾಳಿ ಬೌಲರ್​ಗಳ ಮೇಲೆ ಒತ್ತಡ ತರಲು ಸಾಧ್ಯ. ಇದರಿಂದ ರೋಹಿತ್ ಜೊತೆಗೆ ಇಶಾನ್ ಕಿಶನ್ ಆರಂಭಿಕರಾಗಿ ಆಡ್ಬೇಕು ಅನ್ನೋ ಮಾತುಗಳು ಕೇಳಿಬರ್ತಿವೆ. ಓಪನರ್​ ಆಗಿ ಇಶಾನ್ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಟೀಂ ಇಂಡಿಯಾ ಪರ ದ್ವಿಶತಕ ಸಿಡಿಸಿದ ಏಕೈಕ ಎಡಗೈ ಬ್ಯಾಟ್ಸ್​​ಮನ್ ಆಗಿದ್ದಾರೆ. 

ಏಕದಿನ ವಿಶ್ವಕಪ್‌ ರೋಡ್‌ ಮ್ಯಾಚ್‌ ಚರ್ಚಿಸಲು ವಿಂಡೀಸ್‌ಗೆ ಹಾರಿದ ಅಜಿತ್ ಅಗರ್ಕರ್..!

ಆರಂಭಿಕರಾಗಿ ಅಬ್ಬರಿಸ್ತಿದ್ದಾರೆ ಪಂಜಾಬ್ ಪುತ್ತರ್..! 

ಯೆಸ್, ಸದ್ಯ ಈ ಪಂಜಾಬ್ ಪುತ್ತರ್ ಶುಭ್‌ಮನ್ ಗಿಲ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್​​ಮನ್ ಆಗಿ ಅಬ್ಬರಿಸ್ತಿದ್ದಾರೆ. IPLನಲ್ಲೂ ಧೂಳೆಬ್ಬಿಸಿದ್ದಾರೆ. ಇದರಿಂದ ರೋಹಿತ್ ಶರ್ಮಾಗೆ​ ಗಿಲ್ ಪರ್ಫೆಕ್ಟ್ ಪಾಟ್ನರ್ ಅಂತ ಹೇಳಲಾಗ್ತಿದೆ. ಜನವರಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಇವರಿಬ್ಬರು ಮಿಂಚಿದ್ರು. ಮೂರನೇ ಏಕದಿನ ಪಂದ್ಯದಲ್ಲಿ 210 ರನ್​ ಬಾರಿಸಿದ್ರು.

499 ಅಂತಾರಾಷ್ಟ್ರೀಯ ಪಂದ್ಯಗಳ ನಂತರ ಕ್ರಿಕೆಟ್‌ ದೇವರು ಸಚಿನ್​ಗಿಂತ ಕೊಹ್ಲಿಯೇ ಟಾಪ್..!

ರೋಹಿತ್​ಗೆ ಮತ್ತೆ ಜೊತೆಯಾಗ್ತಾರಾ ಧವನ್​..? 

ಈ ಹಿಂದಿನ ಎರಡು ವಿಶ್ವಕಪ್​ ಟೂರ್ನಿಗಳಲ್ಲಿ ರೋಹಿತ್​ ಶರ್ಮಾ ಮತ್ತು ಶಿಖರ್​ ಧವನ್ ಇನ್ನಿಂಗ್ಸ್ ಆರಂಭಿಸಿದ್ರು. ಈ ರೈಟ್​ ಮತ್ತು ಲೆಫ್ಟ್​ ಹ್ಯಾಂಡ್ ಕಾಂಬಿನೇಷನ್​ ಸಖತ್ ವರ್ಕೌಟ್ ಆಗಿತ್ತು. ವಿಶ್ವಕಪ್​ನಲ್ಲಿ ಮಾತ್ರವಲ್ಲ. ಹಲವು ಟೂರ್ನಿಗಳಲ್ಲಿ, ರೋಹಿತ್ ಮತ್ತು ಧವನ್ ಜೋಡಿ ಮಿಂಚಿತ್ತು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರಿಬ್ಬರು ತಂಡಕ್ಕೆ ಅದ್ಭುತ ಆರಂಭ ತಂದುಕೊಟ್ಟಿದ್ರು. ಆದ್ರೆ, ಈ ಬಾರಿ ಧವನ್​ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗೋದು ಅನುಮಾನವೆನಿಸಿದೆ. 

ಶಿಖರ್‌ ಧವನ್​ರನ್ನ ಏಕದಿನ ತಂಡದಿಂದ ಕೈಬಿಡಲಾಗಿದೆ. ಆದ್ರೆ, ಆಯ್ಕೆ ಸಮಿತಿಯ ವಿಶ್ವಕಪ್ ಪ್ಲಾನ್ ಶಿಖರ್‌​ ಧವನ್ ಸ್ಥಾನ ಪಡೆದಿದ್ದಾರೆ. ಮೇನ್ ತಂಡದಲ್ಲೂ ಶಿಖರ್ ಧವನ್ ಸ್ಥಾನ ಸಿಕ್ರೆ, ಮತ್ತೆ ರೋಹಿತ್ - ಧವನ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ..! 

ಒಟ್ಟಿನಲ್ಲಿ ವಿಶ್ವಕಪ್​ ಮಹಾಯುದ್ಧದಲ್ಲಿ ಹಿಟ್​ಮ್ಯಾನ್​ಗೆ ಯಾರು ಬೆಸ್ಟ್​ ಜೋಡಿಯಾಗಲಿದ್ದಾರೆ. ಯಾರನ್ನ ಆಡಿಸಿದ್ರೆ ತಂಡಕ್ಕೆ ಸಕ್ಸಸ್ ಸಿಗಲಿದೆ ಅಂತ, ಕೋಚ್ ದ್ರಾವಿಡ್​ ಮತ್ತು ಟೀಮ್ ಮ್ಯಾನೇಜ್​ಮೆಂಟ್ ತಲೆಕೆಡಿಸಿಕೊಂಡಿದೆ.

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಫೈನಲ್‌ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

click me!