ವೃತ್ತಿಜೀವನದಲ್ಲಿ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡುಲ್ಕರ್ ನಡುವೆ ಮತ್ತೆ ಹೋಲಿಕೆ ಆರಂಭ
499 ಪಂದ್ಯಗಳಲ್ಲಿ ಯಾರ ಅಂಕಿ-ಅಂಶ ಹೇಗಿದೆ
ನವದೆಹಲಿ(ಜು.21) ವಿರಾಟ್ ಕೊಹ್ಲಿ ಕ್ರಿಕೆಟ್ ದುನಿಯಾಗೆ ಕಾಲಿಟ್ಟು 15 ವರ್ಷಗಳಾಗಿವೆ. ಇಷ್ಟು ವರ್ಷದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ಆದ್ರೀಗ, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದೊಂದಿಗೆ ಕೊಹ್ಲಿ 500 ಇಂಟರ್ನ್ಯಾಷನಲ್ ಪಂದ್ಯಗಳನ್ನ ಪೂರ್ತಿಗೊಳಿಸಿದ್ದಾರೆ. ಒಬ್ಬ ಕ್ರಿಕೆಟರ್ 500 ಪಂದ್ಯವಾಡೋದು ಅಂದ್ರೆ ಸಾಮಾನ್ಯ ಅಲ್ಲ. ಅಂತದ್ರಲ್ಲಿ ಕೊಹ್ಲಿ ಈ ಅಪರೂಪದ ಸಾಧನೆ ಮಾಡೋದು ಅಲ್ಲದೇ, ಎಲ್ಲದರಲ್ಲೂ ನಂ.1 ಪಟ್ಟ ಅಲಂಕರಿಸಿದ್ದಾರೆ. ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ರನ್ನೇ ಹಿಂದಿಕ್ಕಿದ್ದಾರೆ.
ಯೆಸ್, ವಿರಾಟ್ ಕೊಹ್ಲಿಗೆ ರನ್ಮಷಿನ್, ಕಿಂಗ್ ಆಫ್ ರೆಕಾರ್ಡ್ಸ್ ಅಂತ ಸುಮ್ನೆ ಕರೆಯಲ್ಲ. ಸದ್ಯ ವಿಶ್ವಕ್ರಿಕೆಟ್ನಲ್ಲಿ ರನ್, ಸೆಂಚುರಿ, ಹಾಫ್ ಸೆಂಚುರಿ ಏನೇ ತಗೊಂಡ್ರು ಕೊಹ್ಲಿಯೇ ನಂ.1. 499 ಪಂದ್ಯಗಳ ನಂತರ ಅತ್ಯಧಿಕ ರನ್, ಬೆಸ್ಟ್ ಆವರೇಜ್, ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ ಪ್ರಶಸ್ತಿ, ನಾಯಕನಾಗಿ ಅತ್ಯಧಿಕ ಆವರೇಜ್, ಅತ್ಯಧಿಕ ಅರ್ಧಶತಕ ಈ ಎಲ್ಲಾ ಕೆಟಗಿರಿಯಲ್ಲೂ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
Here's the statistical comparison of Sachin Tendulkar and Virat Kohli after 499 international matches 🏏 pic.twitter.com/5sIlPAtzlx
— Vaseem Khan (@wasimkh70972417)
undefined
499 ಪಂದ್ಯಗಳಾದ್ಮೇಲೆ ಸಚಿನ್ ಮತ್ತು ಕೊಹ್ಲಿಯ ಅಂಶಅಂಶಗಳನ್ನ ನೋಡಿದ್ರೆ, ಸಚಿನ್ಗಿಂತ ಕೊಹ್ಲಿಯೇ ಮುಂದಿದ್ದಾರೆ. ಸಚಿನ್ ತೆಂಡುಲ್ಕರ್ 499 ಪಂದ್ಯಗಳ ನಂತ್ರ 48.51ರ ಸರಾಸರಿಯಲ್ಲಿ 24, 839 ರನ್ಗಳಿಸಿದ್ರು. 75 ಶತಕ 114 ಅರ್ಧಶತಕಗಳನ್ನ ಸಿಡಿಸಿದ್ರು. 62 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ, 15 ಸರಣಿಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ರು.
ವಿಂಡೀಸ್ ಎದುರು ಭರ್ಜರಿ ಆರಂಭ ಪಡೆದ ಟೀಂ ಇಂಡಿಯಾ; ಶತಕದತ್ತ ಕಿಂಗ್ ಕೊಹ್ಲಿ ದಾಪುಗಾಲು..!
ವಿರಾಟ್ ಕೊಹ್ಲಿ ಈಗಾಗ್ಲೇ 499 ಪಂದ್ಯಗಳಿಂದ 53.48ರ ಸರಾಸರಿಯಲ್ಲಿ 25, 461 ರನ್ ಕಲೆಹಾಕಿದ್ದಾರೆ. 75 ಶತಕ 131 ಅರ್ಧಶತಕಗಳನ್ನ ಸಿಡಿಸಿದ್ದಾರೆ. 63 ಮ್ಯಾನ್ ಆಫ್ ದಿ ಮ್ಯಾಚ್ ಮತ್ತು 20 ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ನೋಡಿದ್ರಲ್ಲಾ ವಿರಾಟ್ ಕೊಹ್ಲಿ ಮತ್ತು ಸಚಿನ್ ದಾಖಲೆಗಳನ್ನ. ಸಚಿನ್ ತಮ್ಮ ಕರಿಯರ್ನಲ್ಲಿ ಒಟ್ಟು 664 ಪಂದ್ಯಗಳನ್ನಾಡಿದ್ದಾರೆ. ಆದ್ರೆ, ಕೊಹ್ಲಿ ಇನ್ನು 500ನೇ ಪಂದ್ಯವಾಡ್ತಿದ್ದಾರೆ. ಒಂದು ವೇಳೆ ಕೊಹ್ಲಿಯು ಸಚಿನ್ರಷ್ಟೇ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ರೆ, ಸಚಿನ್ರ ಮತ್ತಷ್ಟು ದಾಖಲೆಗಳನ್ನೂ ಕೊಹ್ಲಿ ಬ್ರೇಕ್ ಮಾಡೋದು ಫಿಕ್ಸ್.
Asia Cup 2023: 15 ದಿನಗಳ ಅಂತರದಲ್ಲಿ ಇಂಡೋ-ಪಾಕ್ 3 ಬಾರಿ ಮುಖಾಮುಖಿ? ಇಲ್ಲಿದೆ ಲೆಕ್ಕಾಚಾರ
ಅದೇನೆ ಇರಲಿ ಕೊಹ್ಲಿ 500ನೇ ಪಂದ್ಯದಲ್ಲಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಮೂಲಕ ಮಿಂಚಲಿ. ತಮ್ಮ ಕರಿಯರ್ನ ಐತಿಹಾಸಿಕ ಪಂದ್ಯದಲ್ಲಿ 76 ನೇ ಶತಕ ಸಿಡಿಸಲಿ ಅನ್ನೋದೆ ಅಭಿಮಾನಿಗಳ ಆಶಯ. 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದತ್ತ ದಾಪುಗಾಲಿಡುತ್ತಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ವಿರಾಟ್ ಕೊಹ್ಲಿ ಸದ್ಯ 161 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 87 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಇನ್ನು ಕೇವಲ 13 ರನ್ ಬಾರಿಸಿದರೆ 2019ರ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಳ್ಳುವಲ್ಲಿ ಸಫಲರಾಗಲಿದ್ದಾರೆ.