T20 World Cup ನಂತರ ದಿನೇಶ್‌ ಕಾರ್ತಿಕ್‌ ಭವಿಷ್ಯವೇನು? ಭಾರತ ತಂಡದಲ್ಲಿ ಸಿಗತ್ತಾ ಸ್ಥಾನ

By Sharath Sharma KalagaruFirst Published Nov 1, 2022, 12:47 PM IST
Highlights

Dinesh Karthik Injury update: ಇನ್ನೇನು ದಿನೇಶ್‌ ಕಾರ್ತಿಕ್‌ ಕರಿಯರ್‌ ಮುಗಿದೇ ಹೋಯಿತು ಎಂದಾಗ ಫೀನಿಕ್ಸ್‌ನಂತೆ ಮತ್ತೆ ಎದ್ದು ಬಂದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿರುವ ಫಿನಿಷರ್‌ ವಿಶ್ವಕಪ್‌ ನಂತರ ತಂಡದಲ್ಲಿರುತ್ತಾರಾ ಇಲ್ಲವಾ? ಈ ಬಗ್ಗೆ ಬಿಸಿಸಿಐ ಕೊಟ್ಟಿದೆ ಅಪ್‌ಡೇಟ್‌.

ನವದೆಹಲಿ: ಹಲವು ವರ್ಷಗಳ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದ ಹಿರಿಯ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಚುಟುಕು ಕ್ರಿಕೆಟ್‌ ವಿಶ್ವಕಪ್‌ ನಂತರ ತಂಡದಲ್ಲಿರಲಿದ್ದಾರಾ? ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡತೊಡಗಿದೆ. ಯಾಕೆಂದರೆ ನ್ಯೂಜಿಲೆಂಡ್‌ ಮತ್ತು ಬಾಂಗ್ಲಾ ವಿರುದ್ಧದ ಎರಡೂ ಸರಣಿಗೆ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು ದಿನೇಶ್‌ ಕಾರ್ತಿಕ್‌ಗೆ ಅವಕಾಶ ನೀಡಿಲ್ಲ. ರಿಷಬ್‌ ಪಂತ್‌, ಸಂಜು ಸ್ಯಾಮ್ಸನ್‌ ಮತ್ತು ಇಶಾನ್‌ ಕಿಶನ್‌ ವಿಕೆಟ್‌ ಕೀಪಿಂಗ್‌ ಬ್ಯಾಟರ್‌ಗಳಾಗಿ ಸರಣಿಗೆ ಆಯ್ಕೆಯಾಗಿದ್ದಾರೆ. ಇದರಿಂದ ದಿನೇಶ್‌ ಕಾರ್ತಿಕ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಯಣ ವಿಶ್ವಕಪ್‌ನೊಂದಿಗೆ ಅಂತ್ಯವಾಗಲಿದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ದಿನೇಶ್‌ ಕಾರ್ತಿಕ್‌ ಉತ್ತಮ ಫಿನಿಷರ್‌ ಆಗಿ ಗಮನ ಸೆಳೆದಿದ್ದರು. ಐಪಿಎಲ್‌ಗೂ ಮುನ್ನ ಹೇಳಿಕೆ ನೀಡಿದ್ದ ದಿನೇಶ್‌ ಕಾರ್ತಿಕ್‌ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವುದೇ ಅವರ ಗುರಿ ಎಂದಿದ್ದರು. ಅದೇ ರೀತಿ ಅವರು ತಮ್ಮ ಗುರಿಯನ್ನು ಸಾಧಿಸಿ ಭಾರತ ತಂಡದಲ್ಲಿ ಸ್ಥಾನ ಪಡೆದರು. ವಿಶ್ವಕಪ್‌ಗೂ ಮುನ್ನ ನಡೆದ ಸರಣಿಗಳಲ್ಲೂ ಉತ್ತಮ ಪ್ರದರ್ಶನ ನೀಡಿದರು. 

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ಕೆಲ ಕಾಲ ಕ್ರೀಸ್‌ನಲ್ಲಿದ್ದರಾದರೂ ರನ್‌ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಕೀಪಿಂಗ್‌ ಮಾಡುತ್ತಿರುವಾಗ ಬಾಲನ್ನು ತಡೆಯಲು ಜಂಪ್‌ ಮಾಡಿ ಕೆಳಗೆ ಬಿದ್ದು ಅವರ ಬೆನ್ನಿಗೆ ಪೆಟ್ಟಾಗಿ ಮೈದಾನದಿಂದ ಆಚೆ ನಡೆದರು. ಅವರ ಬದಲು ರಿಷಬ್‌ ಪಂತ್‌ ಕೀಪರ್‌ ಆಗಿ ಒಳಗೆ ಬಂದರು. ವಿಶ್ವಕಪ್‌ನಲ್ಲಿ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ ಎರಡು ಬಾಲ್‌ ಆಡಿದ್ದರು. ನೆದರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್‌ ಸಿಕ್ಕಿರಲಿಲ್ಲ. ಮೂರನೇ ಪಂದ್ಯವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ಮ್ಯಾಚ್‌ನಲ್ಲಿ ಅವಕಾಶ ಸಿಕ್ಕರೂ ನಿರೀಕ್ಷೆಗೆ ತಕ್ಕಂತೆ ಬ್ಯಾಟ್‌ ಬೀಸಿರಲಿಲ್ಲ. ಇದರಿಂದ ಅಭಿಮಾನಿಗಳು ರಿಷಬ್‌ ಪಂತ್‌ರನ್ನು ಆಡಿಸಿ, ದಿನೇಶ್‌ ಕಾರ್ತಿಕ್‌ ಅವರನ್ನು ಕೂರಿಸಿ ಎಂದು ಟ್ರೋಲ್‌ ಮಾಡಿದ್ದರು. 

ಇದನ್ನೂ ಓದಿ: ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾ ಪ್ರಕಟ, ಹಾರ್ದಿಕ್‌ಗೆ ನಾಯಕತ್ವ!

ದಿನೇಶ್‌ ಕಾರ್ತಿಕ್‌ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಬಿಸಿಸಿಐನ ಮುಖ್ಯ ಸೆಲೆಕ್ಟರ್‌ ಚೇತನ್‌ ಶರ್ಮ, ದಿನೇಶ್‌ ಕಾರ್ತಿಕ್‌ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಆಯ್ಕೆ ಮಾಡಲಾಗುವುದು. ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ಸರಣಿಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಟಗಾರರಿಗೆ ವಿಶ್ರಾಂತಿ ನೀಡಿ ಉಳಿದ ಪ್ರತಿಭೆಗಳಿಗೆ ಅವಕಾಶ ನೀಡುವಸಲುವಾಗಿ ಬಿಸಿಸಿಐ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತರುತ್ತಿದೆ. ದಿನೇಶ್‌ ಕಾರ್ತಿಕ್‌ ಯಾವಾಗಲೂ ಆಯ್ಕೆಗೆ ಲಭ್ಯರಿದ್ದಾರೆ ಎಂದಿದ್ದಾರೆ. ಈ ಮೂಲಕ ವಿಶ್ವಕಪ್‌ ನಂತರವೂ ದಿನೇಶ್‌ ಕಾರ್ತಿಕ್‌ ಭಾರತ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯನ್ನು ಚೇತನ್‌ ಶರ್ಮ ತಿಳಿಸಿದ್ದಾರೆ. 

ಡಿಕೆ ವಿಶ್ವಕಪ್‌ ಉಳಿದ ಪಂದ್ಯಗಳಿಗೆ ಲಭ್ಯರಾ?:
ದಿನೇಶ್‌ ಕಾರ್ತಿಕ್‌ ಇನ್ನುಳಿದ ಪಂದ್ಯಗಳಿಗೆ ಲಭ್ಯರಾಗಿದ್ಧಾರ ಎಂಬ ಬಗ್ಗೆ ಮಾತನಾಡಿದ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌, "ದಿನೇಶ್‌ ಕಾರ್ತಿಕ್‌ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಬೆನ್ನು ನೋವು ಕಡಿಮೆಯಾಗಿದೆ. ಅವರು ಪ್ರಾಕ್ಟಿಸ್‌ಗೂ ಹಾಜರಾಗಿದ್ದರು. ಅವರು ಸಂಪೂರ್ಣ ಗುಣಮುಖರಾಗುತ್ತಾರ ಎಂಬುದನ್ನು ಕಾದು ನೋಡಬೇಕು," ಎಂದು ದ್ರಾವಿಡ್‌ ಹೇಳಿದ್ದಾರೆ. 

ಇದನ್ನೂ ಓದಿ: T20 World Cup ಟೀಂ ಇಂಡಿಯಾದಿಂದ ಹೊರಗಿಡಲು ಸರಿಯಾದ ಸಮಯ: ಮತ್ತೆ ಫೇಲಾದ ರಾಹುಲ್‌ ಮೇಲೆ ನೆಟ್ಟಿಗರು ಸಿಡಿಮಿಡಿ..!

Squad for NZ T20Is: Hardik Pandya (C), Rishabh Pant (vc & wk), Shubman Gill, Ishan Kishan, Deepak Hooda, Surya Kumar Yadav, Shreyas Iyer, Sanju Samson (wk), W Sundar, Yuzvendra Chahal, Kuldeep Yadav, Arshdeep Singh, Harshal Patel, Mohd. Siraj, Bhuvneshwar Kumar, Umran Malik.

click me!