ಏಕದಿನ ವಿಶ್ವಕಪ್ ಸಮರಕ್ಕೂ ಮೊದಲೇ ಸೋಲುಪ್ಪಿಕೊಂಡ್ರಾ ನಾಯಕ ರೋಹಿತ್ ಶರ್ಮಾ?

By Naveen Kodase  |  First Published Aug 12, 2023, 1:27 PM IST

2023ರ ಏಕದಿನ ವಿಶ್ವಕಪ್‌ಗೆ ಸಜ್ಜಾಗುತ್ತಿದೆ ಟೀಂ ಇಂಡಿಯಾ
2011ರ ಬಳಿಕ ವಿಶ್ವಕಪ್‌ ಜಯಿಸುವ ಕನಸು ಕಾಣುತ್ತಿದ ರೋಹಿತ್ ಶರ್ಮಾ ಪಡೆ
ವಿಶ್ವಕಪ್ ಆರಂಭಕ್ಕೂ ಮುನ್ನವೇ ತಂಡದ ಸಮಸ್ಯೆ ಬಾಯ್ಬಿಟ್ಟ ನಾಯಕ ರೋಹಿತ್ ಶರ್ಮಾ


ಬೆಂಗಳೂರು(ಆ.12): ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಈ ಬಾರಿ ಏಕದಿನ ವಿಶ್ವಕಪ್  ಗೆಲ್ಲಲೇಬೇಕು ಅಂತ ಪಣ ತೊಟ್ಟಿದೆ. ಆದ್ರೆ, ತಂಡದಲ್ಲಿನ ಹಲವು ಸಮಸ್ಯಗಳಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಈ  ಸಮಸ್ಯೆಗಳೇ, ವಿಶ್ವಕಪ್​ ಸಮರದಲ್ಲಿ ತಂಡಕ್ಕೆ ಮುಳುವಾಗುಲಿದ್ಯಾ ಅಂತ ಅನಿಸ್ತಿದೆ.  ಟೀಂ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟಿಂಗ್​ ತುಂಬಾನೇ ವೀಕ್ ಆಗಿದೆ. ಅದರಲ್ಲೂ 4ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದು ಸಮರ್ಥವಾಗಿ ಬ್ಯಾಟ್ ಬೀಸುವ  ಬ್ಯಾಟ್ಸ್​​ಮನ್ ಕೊರತೆ ತಂಡಕ್ಕೆ ಕಾಡ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ  ಇದು ಮತ್ತೊಮ್ಮೆ ಬಯಲಾಯ್ತು. ಹಾಗಂತ, ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಕಳೆದ ಆರೇಳು ವರ್ಷಗಳಿಂದ ತಂಡ ಈ ಸಮಸ್ಯೆ ಎದುರಿಸ್ತಿದೆ

ಯುವಿ ಸ್ಥಾನವನ್ನ ತುಂಬಲು ಯಾರಿಂದಲೂ ಸಾಧ್ಯವಾಗಿಲ್ಲ..!

Tap to resize

Latest Videos

ಯೆಸ್, ಈ ಹಿಂದೆ ಯುವರಾಜ್​ ಸಿಂಗ್ 4ನೇ ಕ್ರಮಾಂಕದಲ್ಲಿ ಆಡ್ತಿದ್ರು. ಅದ್ಭುತ ಬ್ಯಾಟಿಂಗ್​ನಿಂದ ತಂಡಕ್ಕೆ ಗೆಲುವು ತಂದುಕೊಡ್ತಿದ್ರು. 2011ರ ವಿಶ್ವಕಪ್  ಟೂರ್ನಿಯುದ್ಧಕ್ಕೂ ಯುವರಾಜ್ ಸಿಂಗ್ ಮಿಂಚಿದ್ರು. ಆದ್ರೆ, ಯುವರಾಜ್ ಸಿಂಗ್  ನಂತರ ಈ ಸ್ಲಾಟ್​ನಲ್ಲಿ ಮಿಂಚುವ ಬ್ಯಾಟ್ಸ್​​ಮನ್ ತಂಡಕ್ಕೆ ಸಿಕ್ಕಿಲ್ಲ. ಈವರೆಗೂ 10ಕ್ಕೂ ಹೆಚ್ಚು ಬ್ಯಾಟ್ಸ್​ಮನ್​ಗಳು 4ನೇ ಕ್ರಮಾಂಕದಲ್ಲಿ ಆಡಿಸಲಾಗಿದೆ. ಆದ್ರೆ, ಯಾರೂ ಯುವಿ ಸ್ಥಾನವನ್ನ ತುಂಬಲಿಲ್ಲ. ಇದನ್ನ  ಖುದ್ದು ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾನೆ ಒಪ್ಪಿಕೊಂಡಿದ್ದಾರೆ. ಆ ಮೂಲಕ ತಂಡದಲ್ಲಿನ ಸಮಸ್ಯೆಯನ್ನ ಹೊರಹಾಕಿದ್ದಾರೆ. ಅಲ್ಲದೇ, ಇನ್​ಡೈರೆಕ್ಟಾಗಿ ವಿಶ್ವಕಪ್​ನಲ್ಲಿ ಇದೇ ತಂಡಕ್ಕೆ ಕಂಟಕವಾಗಬಹುದೆಂಬ ಸೂಚನೆ ನೀಡಿದ್ದಾರೆ. 

ODI World Cup 2023: ಧರ್ಮಶಾಲಾದಲ್ಲಿ ಭಾರತ-ಕಿವೀಸ್‌ ವಿಶ್ವಕಪ್‌ ಪಂದ್ಯಕ್ಕೆ ಆಕ್ಷೇಪ..!

ಹಲವು ವರ್ಷಗಳಿಂದ 4ನೇ ಕ್ರಮಾಂಕ ತಂಡಕ್ಕೆ ಸಮಸ್ಯೆಯಾಗಿದೆ. ಯುವರಾಜ್ ಸಿಂಗ್ ನಂತರ ಯಾರಿಂದಲೂ ತುಂಬಲು ಸಾಧ್ಯವಾಗಿಲ್ಲ. ಕೆಲ ವರ್ಷಗಳಿಂದ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಆದ್ರೆ, ದುರಾದೃಷ್ಟವಶಾತ್​ ಶ್ರೇಯಸ್ ಇಂಜುರಿಗೊಳಗಾಗಿ ತಂಡದಿಂದ ಹೊರಗುಳಿದಿದ್ದಾರೆ ಅಂತ ರೋಹಿತ್ ಶರ್ಮಾ ಹೇಳಿದ್ದಾರೆ. ಹೌದು, ರೋಹಿತ್ ಹೇಳಿದ್ದು ನಿಜ. ಶ್ರೇಯಸ್ ಅಯ್ಯರ್ ನಂಬರ್ ಫೋರ್​ ಸ್ಲಾಟ್​ನಲ್ಲಿ ಮಿಂಚಿದ್ದಾರೆ. ಈವರೆಗು ಆಡಿರೋ 20 ಏಕದಿನ ಪಂದ್ಯಗಳಲ್ಲಿ 47.35ರ ಸರಾಸರಿಯಲ್ಲಿ 805 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ ಎರಡು ಶತಕ ಮತ್ತು 5 ಅರ್ಧಶತಕ ಸೇರಿವೆ. ಆದ್ರೆ, ಫಿಟ್​ನೆಸ್ ಪ್ರಾಬ್ಲಮ್​ನಿಂದಾಗಿ ಶ್ರೇಯಸ್ ವಿಶ್ವಕಪ್ ಆಡೋದು ಅನುಮಾನವಾಗಿದೆ. 

ಮೆಗಾ ಟೂರ್ನಿಯಲ್ಲಿ ನಂಬರ್ ಫೋರ್​ನಲ್ಲಿ ಆಡೋದ್ಯಾರು..? 

ವಿಶ್ವಕಪ್ ವೇಳೆಗೆ ಶ್ರೇಯಸ್ ಅಯ್ಯರ್ ತಂಡಕ್ಕೆ ಕಮ್​ಬ್ಯಾಕ್ ಮಾಡದಿದ್ರೆ, 4ನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ. ಸೂರ್ಯ ಕುಮಾರ್ ಯಾದವ್​ ಈಗಾಗ್ಲೇ ಫ್ಲಾಪ್ ಶೋ ನೀಡಿದ್ದಾರೆ. ಸಂಜು ಸ್ಯಾಮ್ಸನ್​ ಹೆಸರು ಕೇಳಿ ಬರ್ತಿದೆ. ಮತ್ತೊಂದೆಡೆ ಯಂಗ್ ಬ್ಯಾಟರ್ ತಿಲಕ್ ವರ್ಮಾ ಕೂಡ ನಂಬರ್ ಫೋರ್ ರೇಸ್​ಗೆ ಎಂಟ್ರಿ ನೀಡಿದ್ದಾರೆ.  ವೆಸ್ಟ್​ ಇಂಡೀಸ್ ವಿರುದ್ಧದ T20 ಸರಣಿಯಲ್ಲಿ ತಿಲಕ್ ಅಬ್ಬರಿಸ್ತಿದ್ದಾರೆ. ಇದರಿಂದ ನಂಬರ್ ಫೋರ್​ಗೆ ತಿಲಕ್ ಪರ್​ಫೆಕ್ಟ್ ಎನ್ನಲಾಗ್ತಿದೆ. 

ಕೊಹ್ಲಿ ಇನ್‌ಸ್ಟಾಗ್ರಾಂ ಒಂದು ಪೋಸ್ಟ್‌ಗೆ ₹11.45 ಕೋಟಿ..! ಈ ಬಗ್ಗೆ ಸ್ವತಃ ವಿರಾಟ್ ಹೇಳಿದ್ದೇನು ಗೊತ್ತಾ?

ಒಟ್ಟಿನಲ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸಮಸ್ಯೆ ಇದೆ ಅಂತ ತಂಡದ ನಾಯಕನೇ ಒಪ್ಪಿಕೊಂಡಿದ್ದಾರೆ. ಇದೇ ಸಮಸ್ಯೆ ವಿಶ್ವಕಪ್​ನಲ್ಲಿ ತಂಡದ ಸೋಲಿಗೆ ಕಾರಣವಾದ್ರು ಅಚ್ಚರಿ ಇಲ್ಲ. ರೋಹಿತ್ ಶರ್ಮಾ ಮಾತು ಕೇಳಿದ್ರೆ, ವಿಶ್ವಕಪ್ ಆರಂಭಕ್ಕೂ ಮುನ್ನವೇ ಸೋಲೊಪ್ಪಿಕೊಂಡ್ರಾ ಎನ್ನುವ ಅನುಮಾನ ಕಾಡತೊಡಗಿದೆ.

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಫೈನಲ್‌ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

click me!