ಅಬ್ಬಬ್ಬಾ... ಪ್ರೀತಿಯ ಬೆಕ್ಕಿಗೆ 1.5 ಲಕ್ಷ ರೂಪಾಯಿ ಕೊಟ್ಟು ಹೇರ್‌ಕಟ್‌ ಮಾಡಿಸಿದ ಮಾಜಿ ಕ್ರಿಕೆಟಿಗ!

Published : Nov 14, 2024, 06:03 PM ISTUpdated : Nov 14, 2024, 06:04 PM IST
ಅಬ್ಬಬ್ಬಾ... ಪ್ರೀತಿಯ ಬೆಕ್ಕಿಗೆ 1.5 ಲಕ್ಷ ರೂಪಾಯಿ ಕೊಟ್ಟು ಹೇರ್‌ಕಟ್‌ ಮಾಡಿಸಿದ ಮಾಜಿ ಕ್ರಿಕೆಟಿಗ!

ಸಾರಾಂಶ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ತಮ್ಮ ಬೆಕ್ಕಿನ ಹೇರ್‌ಕಟ್‌ಗಾಗಿ ₹45,000 ಖರ್ಚು ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ಹೇರ್‌ಕಟ್‌ ಮಾಡಿಸಿದ್ದು, ವೈದ್ಯಕೀಯ ತಪಾಸಣೆ, ಅರಿವಶ ಮಾಡಿಸುವಿಕೆ ಸೇರಿದಂತೆ ಹಲವು ಶುಲ್ಕಗಳು ಇದರಲ್ಲಿ ಸೇರಿವೆ.

ಹೇರ್‌ಕಟ್‌ಗೆ ಹೆಚ್ಚೆಂದರೆ ಎಷ್ಟು ಖರ್ಚು ಮಾಡಬಹುದು. 1 ಸಾವಿರ, 2 ಸಾವಿರ.. ಆದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್‌ ಹೇರ್‌ಕಟ್‌ಗಾಗಿ ಬರೋಬ್ಬರಿ 1.5 ಲಕ್ಷ ಪಾಕಿಸ್ತಾನಿ ರೂಪಾಯಿ ಖರ್ಚು ಮಾಡಿದ್ದಾರೆ. ಹಾಗಂತ ಇದು ಅವರು ಮಾಡಿಕೊಂಡಿರುವ ಹೇರ್‌ಕಟ್‌ ಅಲ್ಲ. ತಮ್ಮ ಪ್ರೀತಿಯ ಬೆಕ್ಕಿನ ಹೇರ್‌ಕಟ್‌ಗಾಗಿ ವಾಸಿಂ ಅಕ್ರಂ ಇಷ್ಟು ಹಣ ಖರ್ಚು ಮಾಡಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ವಿಶ್ಲೇಷಣೆಯಲ್ಲಿರುವ ವಾಸಿಂ ಅಕ್ರಂ 822 ಆಸ್ಟ್ರೇಲಿಯನ್‌ ಡಾಲರ್‌ (ಭಾರತೀಯ ರೂಪಾಯಿಯಲ್ಲಿ 45 ಸಾವಿರ ರೂಪಾಯಿ) ಖರ್ಚು ಮಾಡಿ ತಮ್ಮ ಪ್ರೀತಿಯ ಬೆಕ್ಕಿನ ಹೇರ್‌ ಕಟ್‌ ಮಾಡಿಸಿದ ಚಿತ್ರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದ ವೇಳೆ ಕ್ರಿಕೆಟ್‌ ವಿಶ್ಲೇಷಣೆ ಮಾಡುತ್ತಿದ್ದ ವೇಳೆ ಸ್ವತಃ ವಾಸಿಂ ಅಕ್ರಂ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಈ ವೇಳೆ ವಾಸಿಂ ಅಕ್ರಮ್‌ ಪಕ್ಕದಲ್ಲಿ ಕುಳಿತಿದ್ದ ಆಸೀಸ್‌ ಮೂಲದ ವಿಶ್ಲೇಷಕರು ಕೂಡ ಬೆಕ್ಕಿನ ಹೇರ್‌ಕಟ್‌ಗಾಗಿ ಇಷ್ಟು ಪ್ರಮಾಣದ ಹಣ ಖರ್ಚು ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೇರ್‌ಕಟ್‌ನ ಬಿಲ್‌ಅನ್ನು ಹಂಚಿಕೊಳ್ಳುವ ಮೊದಲ ಕಾಮೆಂಟರಿಯಲ್ಲಿ ಈ ವಿಚಾರವನ್ನು ಅವರು ತಿಳಿಸಿದ್ದರು.

₹67,538 ಕೋಟಿ ಮೌಲ್ಯದ ಅಮೆಜಾನ್‌ ಷೇರು ಮಾರಾಟ ಮಾಡಿದ ಜೆಫ್‌ ಬೆಜೋಸ್‌ ಮಾಜಿ ಪತ್ನಿ!

'ನಾನು ನಿನ್ನೆಯಷ್ಟೇ ನನ್ನ ಬೆಕ್ಕಿನ ಹೇರ್‌ಕಟ್‌ ಮಾಡಿಸಿದೆ. ಅದಕ್ಕಾಗಿ ನಾನು ಸರಿಸುಮಾರು 1 ಸಾವಿರ ಡಾಲರ್‌ ಖರ್ಚು ಮಾಡಿದೆ.ಅವರು ಬೆಕ್ಕಿಗೆ ಬೇಕಾದೆಲ್ಲವನ್ನೂ ಮಾಡಿದರು. ಬೆಕ್ಕಿಗೆ ಊಟ ಹಾಕಿಸಿದರು, ಚೆನ್ನಾಗಿ ನೋಡಿಕೊಂಡರು. ಕೊನೆಗೆ ಬಿಲ್‌ ಕೊಟ್ಟರು. ಈ ವೇಳೆ ನಾನು ಈ ಹಣದಲ್ಲಿ ನಾನು ಪಾಕಿಸ್ತಾನದಲ್ಲಿ 200 ಬೆಕ್ಕುಗಳನ್ನು ಖರೀದಿ ಮಾಡುತ್ತಿದ್ದೆ' ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಮಾರುತಿ ಸುಜುಕಿ XL7: 35 ಕಿಮೀ ಮೈಲೇಜ್ ಕೊಡೋ 7 ಸೀಟರ್ ಫ್ಯಾಮಿಲಿ ಕಾರ್

ಹಾಗಂತ ಬೆಕ್ಕಿನ ಹೇರ್‌ಕಟ್‌ಗೆ ಮಾತ್ರವೇ ಈ ಬೆಲೆಯಲ್ಲ. ಇದರಲ್ಲಿ 40 ಆಸ್ಟ್ರೇಲಿಯನ್‌ ಡಾಲರ್‌ ಮಾತ್ರವೇ ಬೆಕ್ಕಿನ ಹೇರ್‌ಕಟ್‌ ಬೆಲೆ. 100 ಆಸ್ಟ್ರೇಲಿಯನ್‌ ಡಾಲರ್‌ಅನ್ನು ಮೆಡಿಕಲ್‌ ಚೆಕಪ್‌, 305 ಆಸ್ಟ್ರೇಲಿಯನ್‌ ಡಾಲರ್‌ನ ಅನಸ್ತೇಷಿಯಾ, 120 ಡಾಲರ್‌ನ ಪೂರ್ವ ಪ್ರಕ್ರಿಯೆಗಳು ಹಾಗೂ 251 ಡಾಲರ್‌ನ ಕಾರ್ಡಿಯೋ ಟೆಸ್ಟ್‌ ಎಂದು ಚಾರ್ಜ್‌ ಮಾಡಲಾಗಿದೆ. 822 ಆಸ್ಟ್ರೇಲಿಯನ್‌ ಡಾಲರ್‌ ಎಂದರೆ, ಭಾರತತೀಯ ರೂಪಾಯಿಯಲ್ಲಿ 45 ಸಾವಿರವಾಗಿದ್ದರೆ, ಪಾಕಿಸ್ತಾನಿ ರೂಪಾಯಿಯಲ್ಲಿ 1.5 ಲಕ್ಷ ರೂಪಾಯಿ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!