ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?

Published : Dec 17, 2025, 06:15 PM IST
RCB Player

ಸಾರಾಂಶ

ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಕ್ರೀಡಾ ನಿರೂಪಕಿ ಸಾಹಿಬಾ ಬಾಲಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಕಾಫಿ ಡೇಟ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಇಬ್ಬರೂ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.

ಬೆಂಗಳೂರು (ಡಿ.17): ಆರ್‌ಸಿಬಿಯ ಮಾಜಿ ಆಟಗಾರ ಸಣ್ಣ ಕಾಫಿ ಡೇಟ್‌ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಟೀಮ್‌ ಇಂಡಿಯಾ ಆಲ್ರೌಂಡರ್‌ ಹಾಗೂ ಆರ್‌ಸಿಬಿಯ ಮಾಜಿ ಆಟಗಾರ ವಾಷಿಂಗ್ಟನ್‌ ಸುಂದರ್ ಈಗ ತನ್ನ ವೈಯಕ್ತಿಕ ಜೀವನದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಮೂಲಗಳ ಪ್ರಕಾರ ಕ್ರೀಡಾ ನಿರೂಪಕಿ ಹಾಗೂ ಸಿನಿಮಾ ನಟಿ ಕಾಶ್ಮೀರ ಮೂಲದ ಸಾಹಿಬಾ ಬಾಲಿ ಅವರೊಂದಿಗೆ ವಾಷಿಂಗ್ಟನ್‌ ಸುಂದರ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ಕೂಡ ಸಣ್ಣ ಕಫೆಯೊಂದಿಗೆ ಕಾಫಿ ಎಂಜಾಯ್‌ ಮಾಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸುಂದರ್‌ ಬಾಳಿನಲ್ಲಿ ಕೊನೆಗೂ ಸುಂದರ ಯುವತಿ ಸಿಕ್ಕಿದ್ದಾಳೆ ಎನ್ನುವ ಅರ್ಥದ ಕಾಮೆಂಟ್‌ಗಳು ಬಂದಿವೆ.

ಸಾಹಿಬಾರನ್ನು ವಾಷಿಂಗ್ಟನ್‌ ಸುಂದರ್‌ ಅವರ ಗರ್ಲ್‌ಫ್ರೆಂಡ್‌ ಎಂದೇ ಕರೆಯಲು ಶುರು ಮಾಡಿದ್ದರೂ, ಇಬ್ಬರೂ ಸ್ಟಾರ್‌ಗಳು ಮಾತ್ರ ಈ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಇದು ಮತ್ತಷ್ಟು ಊಹಾಪೋಹಕ್ಕೆ ಕಾರಣವಾಗಿದೆ.

ಕ್ರಿಕೆಟ್‌ ಟೈಮ್ಸ್‌ ವರದಿಯ ಪ್ರಕಾರ, ವಾಷಿಂಗ್ಟನ್‌ ಸುಂದರ್‌ ಹಾಗೂ ಅವರ ಕುಟುಂಬ ವೈಯಕ್ತಿಕ ವಿಚಾರಗಳನ್ನು ಅತ್ಯಂತ ಖಾಸಗಿಯಾಗಿಡಲು ಬಯಸುತ್ತದೆ. ಇನ್ನೊಂದೆಡೆ ಸಾಹಿಬಾ ಕೂಡ ಇಬ್ಬರ ರೋಮ್ಯಾನ್ಸ್‌ ಬಗ್ಗೆ ಹಿಂಟ್‌ ಕೊಡುವಂಥ ಯಾವುದೇ ಪೋಸ್ಟ್‌ ಪ್ರಕಟ ಮಾಡಿಲ್ಲ. ಅದರ ಬದಲು ತಮ್ಮ ವೃತ್ತಿಜೀವನದ ಪ್ರಗತಿಯನ್ನು ಅವರು ನೋಡುತ್ತಿದ್ದಾರೆ.

ಇನ್ನೊಂದೆಡೆ ವಾಷಿಂಗ್ಟನ್‌ ಸುಂದರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಫೋಕಸ್‌ ಮಾಡಿದ್ದು, ಸಾಹಿಬಾ, ಸಿನಿಮಾ-ಡಿಜಿಟಲ್‌ ಎಂಟರ್‌ಟೇನ್‌ಮೆಂಟ್‌ ಜೊತೆಯಲ್ಲಿ ಕ್ರೀಡಾ ನಿರೂಪಕಿಯಾಗಿಯೂ ಗಮನಸೆಳೆದಿದ್ದಾರೆ.

ಕಾಶ್ಮೀರ ಮೂಲದ ಸಾಹಿಬಾ ಬಾಲಿ

1994 ಡಿಸೆಂಬರ್‌ 5 ರಂದು ಕಾಶ್ಮೀರಿ ಕುಟುಂಬದಲ್ಲಿ ಜನಿಸಿರುವ ಸಾಹಿಬಾ ಬಾಲಿ, ತನ್ನ ಜೀವನವನ್ನು ಸಿನಿಮಾ ರಂಗದಲ್ಲಿ ತಾವೇ ಕಟ್ಟಿಕೊಂಡಿದ್ದಾರೆ. ದೆಹಲಿ ವಿವಿಯಲ್ಲಿ ಅರ್ಥಶಾಸ್ತ್ರದ ಪದವೀಧರರಾಗಿರುವ ಸಾಹಿಬಾ ಬಾಲಿ, ರಂಗಭೂಮಿ ಕ್ಷೇತ್ರದಲ್ಲೂ ಗಮನಸೆಳೆದಿದ್ದಾರೆ. ಜಾಹೀರಾತುಗಳಲ್ಲಿ ನಟಿಸುವ ಮುನ್ನ ತೆರೆಯ ಹಿಂದೆ ವರ್ಷಗಳ ಕಾಲ ಕೆಲಸ ಮಾಡಿದ್ದ ಸಾಹಿಬಾ ಬಾಲಿ, ನಂತರ ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಮೂಲಕ ಜನರಿಗೆ ಪರಿಯವಾಗಿದ್ದಾರೆ.

2024ರಲ್ಲಿ ಐಪಿಎಲ್‌ ಬ್ರಾಡ್‌ಕಾಸ್ಟ್‌ ಟೀಮ್‌ ಸೇರಿಕೊಂಡಿದ್ದ ಸಾಹಿಬಾ ಬಾಲಿ, ಅಂದಿನಿಂದ ಮ್ಯಾಚ್‌ ಡೇಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಫೇಸ್‌ ಆಗಿದ್ದರು. ಆ ನಂತರ ಚಾಂಪಿಯನ್ಸ್‌ ಟ್ರೋಫಿ 2025ಯಲ್ಲೂ ಅವರು ನಿರೂಪಕಿ ಸ್ಥಾನವನ್ನು ನಿಭಾಯಿಸಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026 RCB Full Squad: ಸತತ ಎರಡನೇ ಬಾರಿಗೆ ಕಪ್ ಗೆಲ್ಲಲು ಆರ್‌ಸಿಬಿ ಸಜ್ಜು! ಹರಾಜಿನ ಬಳಿಕ ತಂಡ ಹೀಗಿದೆ
IPL 2026 Mini Auction: ಖರೀದಿಸಿದ ಎಂಟು ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌