"ದಾದಾ ವಾಷ್‌ ರೂಂಗೆ ಹೋದಾಗ..": ಪ್ರಾಂಕ್ ಮಾಡಿದ ಸಚಿನ್-ಸೆಹ್ವಾಗ್ ಕಿಲಾಡಿ ಜೋಡಿ..!

By Naveen Kodase  |  First Published Jun 5, 2023, 2:36 PM IST

ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ಭಾರತದ ಯಶಸ್ವಿ ಆರಂಭಿಕ ಜೋಡಿ
ನಾಯಕ ಸೌರವ್ ಗಂಗೂಲಿಯನ್ನು ಪ್ರಾಂಕ್ ಮಾಡಿದ್ದ ಕಿಲಾಡಿ ಜೋಡಿ
ಅಡಿಡಾಸ್ ಟಿ ಶರ್ಟ್‌ ಕುರಿತಾಗಿ ದಾದಾರನ್ನೇ ಪ್ರಾಂಕ್ ಮಾಡಿಡ್ದ ವೀರೂ-ಸಚಿನ್ ಜೋಡಿ


ನವದೆಹಲಿ(ಜೂ.05): ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡುಲ್ಕರ್‌, ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಆರಂಭಿಕ ಜೋಡಿಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾಗ ಟೀಂ ಇಂಡಿಯಾ ಉನ್ನತ ಹಂತ ತಲುಪಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 93 ಬಾರಿ ಭಾರತ ಪರ ಇನಿಂಗ್ಸ್‌ ಆರಂಭಿಸಿದ್ದ ಸೆಹ್ವಾಗ್-ಸಚಿನ್ ಜೋಡಿ 3,919 ರನ್ ಬಾರಿಸಿತ್ತು. ಈ ಜೋಡಿ ಮೈದಾನದಲ್ಲಿ ಮಾತ್ರವಲ್ಲದೇ ಮೈದಾನಾಚೆಗೂ ಕಿಲಾಡಿ ಜೋಡಿ ಎನಿಸಿಕೊಂಡಿತ್ತು. ಇನ್ನು ಇತ್ತೀಚೆಗಷ್ಟೇ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಜೋಡಿ ಅಡಿಡಾಸ್ ಟಿ ಶರ್ಟ್‌ ಕುರಿತಾಗಿ ನಾಯಕರಾಗಿದ್ದ ಸೌರವ್ ಗಂಗೂಲಿಯನ್ನು ಪ್ರಾಂಕ್‌ ಮಾಡಿದ ಇಂಟ್ರೆಸ್ಟಿಂಗ್ ಸಂಗತಿಯನ್ನು ವೀರೂ ಬಿಚ್ಚಿಟ್ಟಿದ್ದಾರೆ.

ವಿರೇಂದ್ರ ಸೆಹ್ವಾಗ್ ಹೇಳಿದಂತೆ ಇದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಮಾಡಿದ ಪ್ಲಾನ್ ಆಗಿತ್ತಂತೆ. ಸೌರವ್‌ ಗಂಗೂಲಿ ವಾಷ್‌ ರೂಂನಲ್ಲಿದ್ದಾಗ ಹೊರಗಡೆ ಸಚಿನ್ ಹಾಗೂ ಸೆಹ್ವಾಗ್ ಜರ್ಮನಿಯಿಂದ ತಾವು ಪಡೆದುಕೊಳ್ಳಲಿರುವ ಅಡಿಡಾಸ್ ಜೆರ್ಸಿ ಕುರಿತಾಗಿ ದಾದಾಗೆ ಕೇಳುವಂತೆ ಮಾತನಾಡಿ ದಾದಾ ಅವರನ್ನು ಪ್ರಾಂಕ್ ಮಾಡಿದ ವಿಚಾರವನ್ನು ಮುಲ್ತಾನಿನ ಸುಲ್ತಾನ ಖ್ಯಾತಿಯ ಸೆಹ್ವಾಗ್, ಬ್ರೇಕ್‌ಪಾಸ್ಟ್ ವಿತ್ ಚಾಂಪಿಯನ್ ಕಾರ್ಯಕ್ರಮದ ವೇಳೆ ಬಾಯ್ಬಿಟ್ಟಿದ್ದಾರೆ.

Latest Videos

undefined

"ಸಚಿನ್ ತೆಂಡುಲ್ಕರ್ ಮತ್ತು ನಾನು ಅಡಿಡಾಸ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೆವು. ನಾವು ವಾಷ್‌ ರೂಂ ಬಳಿ ಹೋದಾಗ ಸಚಿನ್‌ ನನ್ನ ಬಳಿ ಸೌರವ್ ಗಂಗೂಲಿಯನ್ನು ಪ್ರಾಂಕ್ ಮಾಡೋಣವೆಂದು ಹೇಳಿದರು. ಸಚಿನ್ ಅವರು ನನ್ನ ಜತೆ ಸುಮ್ಮನೆ ಮಾತನಾಡುವಂತೆ ಹೇಳಿದರು. ಸೌರವ್ ಗಂಗೂಲಿ ಟಾಯ್ಲೆಟ್‌ಗೆ ಹೋದಾಗ ನಾವಿಬ್ಬರು ಹೊರಗಡೆಯೇ ನಿಂತುಕೊಂಡು ಮಾತನಾಡಲಾರಂಭಿಸಿದೆವು ಎಂದು ಸೆಹ್ವಾಗ್ ಹೇಳಿದ್ದಾರೆ.

ರೈಲು ದುರಂತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್ ನೆರವು, ಉಚಿತ ಶಿಕ್ಷಣ-ವಸತಿ!

ಸಚಿನ್ ನನಗೆ "ಜರ್ಮನಿಯಿಂದ ನಾವು ಪಡೆದ ಈ ಅಡಿಡಾಸ್ ಟಿ ಶರ್ಟ್‌ಗಳು ಎಷ್ಟೊಂದು ಚೆನ್ನಾಗಿ ಇವೆಯಲ್ಲ ಎಂದು ಹೇಳಿದರು. ಅದಕ್ಕೆ ನಾನು ಸಮ್ಮತಿಸಿ, ನಿಜಕ್ಕೂ ಈ ಜೆರ್ಸಿಗಳು ತುಂಬಾ ಚೆನ್ನಾಗಿವೆ ಎಂದೆ. ಇದಷ್ಟನ್ನೇ ಹೇಳಿ ನಾವು ಹೊರಗೆ ಬಂದೆವು. ಇದಾಗುತ್ತಿದ್ದಂತೆಯೇ ಸೌರವ್ ಗಂಗೂಲಿ ಅಡಿಡಾಸ್ ಕಂಪನಿಗೆ ಕಾಲ್ ಮಾಡಿ, ಸಚಿನ್ ತೆಂಡುಲ್ಕರ್ ಹಾಗೂ ಸೆಹ್ವಾಗ್ ಅವರಿಗೆ ಕೊಟ್ಟಿರುವ ಟಿ ಶರ್ಟ್‌ಗಳನ್ನು ಜರ್ಮನಿಯಿಂದ ನಮಗೂ ಕಳಿಸಿಕೊಡಿ ಎಂದು ಕೇಳಿಕೊಂಡಿದ್ದರು. 

ಇನ್ನು ಇದೇ ವೇಳೆ ವಿರೇಂದ್ರ ಸೆಹ್ವಾಗ್‌, ತಾವು ಸಚಿನ್ ತೆಂಡುಲ್ಕರ್ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾಗಿ ಒಪ್ಪಿಕೊಂಡಿದ್ದಾರೆ. ನಾನು ಸಚಿನ್ ಅವರಿಗೆ ಜಿಮ್ ಪಾರ್ಟ್ನರ್ ಆಗಿದ್ದೆ. ಅವರು ನನಗೆ ಸಾಕಷ್ಟು ಜೀವನ ಪಾಠಗಳನ್ನು ಕಲಿಸಿದ್ದಾರೆ. ಅವರು ಸಾಕಷ್ಟು ವರ್ಷಗಳಿಂದ ಕ್ರಿಕೆಟ್ ಆಡಿದ್ದರಿಂದಾಗಿ ನಾನು ಸ್ಟ್ರೈಕ್‌ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ನಾನ್‌ ಸ್ಟ್ರೈಕ್‌ನಲ್ಲಿ ಇರುತ್ತಿದ್ದ ಸಚಿನ್, ಬೌಲರ್ ಯಾವ ಚೆಂಡನ್ನು ಹಾಕುತ್ತಾನೆ ಎನ್ನುವುದನ್ನು ಮೊದಲೇ ಸುಳಿವು ಕೊಡುತ್ತಿದ್ದರು ಎಂದು ವೀರೂ ಹೇಳಿದ್ದಾರೆ.

click me!