ಬಲೂಚಿಸ್ತಾನದಲ್ಲಿ Virat Kohli ಮರಳು ಕಲಾಕೃತಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್‌

Published : Oct 29, 2022, 09:13 PM IST
ಬಲೂಚಿಸ್ತಾನದಲ್ಲಿ Virat Kohli ಮರಳು ಕಲಾಕೃತಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಸಾರಾಂಶ

ಭಾರತದ ವಿರುದ್ಧ ಪಾಕ್‌ ಸೋಲಿಗೆ ತಮ್ಮ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೂ, ವಿರಾಟ್‌ ಕೊಹ್ಲಿ ಬಗ್ಗೆ ವಿಶೇಷವಾದ ಒಲವು ಇದೆ. ಸದ್ಯ, ಪಾಕಿಸ್ತಾನದ್ದೇ ಪ್ರಾಂತ್ಯ ಎನಿಸಿಕೊಂಡಿರುವ ಬಲೂಚಿಸ್ತಾನದಲ್ಲೂ ಕೊಹ್ಲಿಯ ಅದ್ಬುತ ಬ್ಯಾಟಿಂಗ್‌ಗೆ ಗೌರವವಾಗಿ, ಅಲ್ಲಿನ ಅಭಿಮಾನಿಯೊಬ್ಬರು ಅವರ ಮರಳು ಕಲಾಕೃತಿಯನ್ನು ರಚಿಸಿದ್ದಾರೆ.

ಭಾರತದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿಗೆ (Virat Kohli) ಕೋಟ್ಯಂತರ ಕ್ರಿಕೆಟ್‌ (Cricket) ಅಭಿಮಾನಿಗಳಿದ್ದಾರೆ. ಬರೀ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವು ದೇಶಗಳ ಜನ ಕಿಂಗ್ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ಅಭಿಮಾನ ಮೆರೆಯುತ್ತಾರೆ. ವಿಶೇಷವಾಗಿ ಭಾರತ ಉಪಖಂಡದಲ್ಲಿ (Indian Sub Continent) ಕ್ರಿಕೆಟ್‌ನ ಗೀಳು ಹೆಚ್ಚಿರುವಂತೆ ಅಭಿಮಾನ ತೋರಿಸುವ ರೀತಿ ನಾನಾ ವಿಧವಾಗಿ ಇದೆ. ಭಾರತ (India) - ಪಾಕಿಸ್ತಾನ (Pakistan) ವಿರೋಧಿ ದೇಶಗಳಾದ್ರೂ ಅಲ್ಲೂ ಕೊಹ್ಲಿ ಪ್ರಿಯರು ಸಾಕಷ್ಟಿದ್ದಾರೆ. ಪ್ರಸ್ತುತ T20 ವಿಶ್ವಕಪ್‌ನಲ್ಲಿ ಬಲಗೈ ಬ್ಯಾಟರ್‌ನ ಪ್ರಭಾವಶಾಲಿ ಪ್ರದರ್ಶನದ ನಂತರ, ಈಗಾಗಲೇ ಪಾಕಿಸ್ತಾನದಲ್ಲಿ ಜನಪ್ರಿಯರಾಗಿದ್ದ ಕೊಹ್ಲಿ, ಗಡಿಯ ಇನ್ನೊಂದು ಬದಿಯಲ್ಲಿ ಬೆಂಬಲಿಗರಲ್ಲಿ ಅನನ್ಯ ಸ್ಥಾನವನ್ನು ಸ್ಥಾಪಿಸಿಕೊಂಡಿದ್ದಾರೆ. 

ಭಾರತದ ವಿರುದ್ಧ ಪಾಕ್‌ ಸೋಲಿಗೆ ತಮ್ಮ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೂ, ವಿರಾಟ್‌ ಕೊಹ್ಲಿ ಬಗ್ಗೆ ವಿಶೇಷವಾದ ಒಲವು ಇದೆ. ಸದ್ಯ, ಪಾಕಿಸ್ತಾನದ್ದೇ ಪ್ರಾಂತ್ಯ ಎನಿಸಿಕೊಂಡಿರುವ ಬಲೂಚಿಸ್ತಾನದಲ್ಲೂ (Balochistan) ಕೊಹ್ಲಿಯ ಅದ್ಬುತ ಬ್ಯಾಟಿಂಗ್‌ಗೆ ಗೌರವವಾಗಿ, ಅಲ್ಲಿನ ಅಭಿಮಾನಿಯೊಬ್ಬರು ಅವರ ಮರಳು ಕಲಾಕೃತಿಯನ್ನು (Sand Portrait) ರಚಿಸಿದ್ದಾರೆ.

ಇದನ್ನು ಓದಿ: T20 World Cup ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಇದೀಗ ವಿರಾಟ್ ಕೊಹ್ಲಿ ಪಾಲು..!

ಪಾಕಿಸ್ತಾನದ ಕ್ರೀಡಾ ಸುದ್ದಿ ವೆಬ್‌ಸೈಟ್, ಕ್ರಿಕೆಟ್ ಪಾಕಿಸ್ತಾನದ  ಪ್ರಕಾರ, ಬಲೂಚಿಸ್ತಾನದ ಗದ್ದಾನಿಯಲ್ಲಿ ಕಲಾವಿದರೊಬ್ಬರು ತಮ್ಮ ಅಭಿಮಾನ ವ್ಯಕ್ತಪಡಿಸಲು ವಿರಾಟ್ ಕೊಹ್ಲಿಯನ್ನು ಮರಳಿನ ಮೇಲೆ ಚಿತ್ರಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಟಿ 20 ವಿಶ್ವಕಪ್‌ ಮುಖಾಮುಖಿಯಲ್ಲಿ, ವಿರಾಟ್ ಕೊಹ್ಲಿ ಅಜೇಯ 82 ರನ್‌ಗಳ ಅದ್ಭುತ ಬ್ಯಾಟಿಂಗ್‌ನೊಂದಿಗೆ ಭಾರತದ ಚೇಸ್‌ ಅನ್ನು ಮುನ್ನಡೆಸಿದರು. ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡ ತಂಡವನ್ನು ಗೆಲ್ಲಲು ಅದ್ಭುತ ಆಟವಾಡಿ ಭಾಋತ 4 ವಿಕೆಟ್‌ಗಳ ಅಂತರದಿಂದ ಗೆಲ್ಲುವ ಹಾಗೆ ಮಾಡಿದರು. ವಿರಾಟ್‌ ಕೊಹ್ಲಿ ಅವರ ಈ ಆಟಕ್ಕೆ ಪ್ರಪಂಚದಾದ್ಯಂತದ ಜನರು ಪ್ರಶಂಸಿಸಿದ್ದಾರೆ.

ಹಾಗೆ, ಕೊಹ್ಲಿ ನೆದರ್ಲೆಂಡ್ಸ್ ವಿರುದ್ಧವೂ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದರು. ಹಾಗೂ, ಮತ್ತೊಂದು ಅರ್ಧಶತಕವನ್ನು ಬಾರಿಸಿ ಟೀಂ ಇಂಡಿಯಾದ ಅತ್ಯುತ್ತಮ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ: IND vs PAK ಕೊಹ್ಲಿ ಬ್ಯಾಟಿಂಗ್‌ನಿಂದ ಸ್ಥಗಿತಗೊಂಡಿತ್ತು UPI ಟ್ರಾನ್ಸಾಕ್ಷನ್, ಶಾಪಿಂಗ್, ಕುತೂಹಲ ಮಾಹಿತಿ ಬಹಿರಂಗ!

ಈ ಮಧ್ಯೆ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ T20 ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳನ್ನು ಗೆದ್ದ ನಂತರ, ಟೀಮ್ ಇಂಡಿಯಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಲು ಹಾಗೂ ವಿಶ್ವಕಪ್‌ನಲ್ಲಿ ಮುಂದಿನ ಹಂತಗಳಿಗೆ ಕಾಲಿಡಲು ನೋಡುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಭಾನುವಾರದಂದು ಸೂಪರ್ 12 ಗುಂಪಿನ ತನ್ನ 3 ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಆಡಲಿದೆ. ಈ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. 

ಇನ್ನು, ಟೀಂ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಏನಾದರೂ ಬದಲಾವಣೆಗಳನ್ನು ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲಕಾರಿಯಾಗಿದೆ. ಸದ್ಯ, ರನ್‌ ಗಳಿಸಲು ಪರದಾಡುತ್ತಿರುವ ಔಟ್‌ ಆಫ್‌ ಫಾರ್ಮ್‌ ಕೆ.ಎಲ್. ರಾಹುಲ್ ಬದಲಿಗೆ ರಿಷಬ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಮನವಿಗಳು ಬರುತ್ತಿವೆ. ಆದರೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮಾತ್ರ ರಾಹುಲ್‌ಗೆ ಪಟ್ಟುಹಿಡಿಯುವುದಾಗಿ ಪಂದ್ಯದ ಹಿಂದಿನ ದಿನ ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ: Ind vs Pak ಮತ್ತೆ ಮತ್ತೆ ನೋಡಬೇಕೆನಿಸುವ ಆ ಕೊನೆಯ 8 ಎಸೆತ..! ಕಿಂಗ್ ಕೊಹ್ಲಿಗೆ ಸೆಲ್ಯೂಟ್, ವಿಡಿಯೋ ವೈರಲ್ ..!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!