Virat Kohli, Suryakumar Yadav ಇಬ್ಬರಿಗೂ ಇಲ್ಲ ರಿಷಬ್‌ ಪಂತ್‌ ಡ್ರೀಮ್‌ ಟಿ20 ತಂಡದಲ್ಲಿ ಸ್ಥಾನ

By Sharath Sharma Kalagaru  |  First Published Nov 10, 2022, 12:47 PM IST

Rishab Pant T20 Dream Team: ಟಿ20 ವಿಶ್ವಕಪ್‌ನಲ್ಲಿ ಕೇವಲ ಒಂದು ಪಂದ್ಯ ಮಾತ್ರ ಆಡುವ ಅವಕಾಶ ಪಡೆದಿರುವ ವಿಕೆಟ್‌ ಕೀಪಿಂಗ್‌ ಬ್ಯಾಟ್ಸ್‌ಮನ್‌ ರಿಷಬ್‌ ಪಂತ್‌ ತಮ್ಮ ಕನಸಿನ ಟಿ20 ತಂಡ ಆಯ್ಕೆ ಮಾಡಿದ್ದಾರೆ. ಅದರಲ್ಲಿ ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ಗೆ ಸ್ಥಾನವನ್ನೇ ನೀಡಿಲ್ಲ. 


ನವದೆಹಲಿ: ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕೇವಲ ಒಂದು ಪಂದ್ಯದಲ್ಲೇ ಆಡುವ 11ರ ತಂಡದಲ್ಲಿ ರಿಷಬ್‌ ಪಂತ್‌ ಅವಕಾಶ ಪಡೆದಿದ್ದಾರೆ. ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ರಿಷಬ್‌ ಪಂತ್‌ಗೆ ಅವಕಾಶ ನೀಡಲಾಗಿತ್ತಾದರೂ 5 ಎಸೆತಗಳಲ್ಲಿ ಕೇವಲ 3 ರನ್‌ಗಳಿಸಿ ಪೆವಿಲಿಯನ್‌ ಸೇರಿದ್ದರು. ದಿನೇಶ್‌ ಕಾರ್ತಿಕ್‌ ಅವರ ಬದಲು ರಿಷಬ್‌ ಪಂತ್‌ ಆಡಿಸಿ ಎಂಬ ಕೂಗು ವಿಶ್ವಕಪ್‌ ಉದ್ದಕ್ಕೂ ಕೇಳಿ ಬರುತ್ತಿದೆ. ಆದರೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಪಂತ್‌ ಪದೇ ಪದೇ ವಿಫಲರಾಗುತ್ತಿದ್ದಾರೆ. ದಿನೇಶ್‌ ಕಾರ್ತಿಕ್‌ ಕೂಡ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೀಪಿಂಗ್‌ ಉತ್ತಮವಾಗಿ ಮಾಡುತ್ತಿದ್ದರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಇದೇ ಕಾರಣಕ್ಕೆ ಲೀಗ್‌ ಹಂತದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಪಂತ್‌ಗೆ ಅವಕಾಶ ನೀಡಲಾಗಿತ್ತು. ಅವರೂ ಕೂಡ ಅವಕಾಶ ಸದುಪಯೋಗ ಪಡಿಸಿಕೊಂಡಿಲ್ಲ.

ಈ ನಡುವೆ ತಮ್ಮ ಟಿ20 ಡ್ರೀಮ್‌ ತಂಡವನ್ನು ರಿಷಬ್‌ ಪಂತ್‌ ಆಯ್ಕೆ ಮಾಡಿದ್ದಾರೆ. ಅದರಲ್ಲಿ ವಿಶ್ವ ದಿಗ್ಗಜ ವಿರಾಟ್‌ ಕೊಹ್ಲಿ, ವಿಶ್ವದ ನಂಬರ್‌ 1 ಟಿ 20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹಾಗಾದರೆ ಯಾರಿದ್ದಾರೆ ರಿಷಬ್‌ ಪಂತ್‌ ಅವರ ಕನಸಿನ ತಂಡದಲ್ಲಿ? 

Tap to resize

Latest Videos

undefined

ಇದನ್ನೂ ಓದಿ: "ಫೈನಲ್‌ಗೆ ಬನ್ನಿ ನಾವು ಕಾಯ್ತಿದ್ದೇವೆ, ಇನ್ನೊಂದು ಮ್ಯಾಚ್‌ ಆಗಿಬಿಡಲಿ": ಶೋಯೆಬ್‌ ಅಖ್ತರ್‌

ಆರಂಭಿಕರಾಗಿ ರಿಷಬ್‌ ಪಂತ್‌ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಮತ್ತು ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಜತೆಗೆ ತಮ್ಮನ್ನೂ ಡ್ರೀಂ ಟೀಮ್‌ನಲ್ಲಿ ಸೇರಿಸಿಕೊಂಡಿದ್ದಾರೆ. ಜಸ್ಪ್ರಿತ್‌ ಬುಮ್ರಾ, ಅಫ್ಘಾನಿಸ್ತಾನದ ರಶೀದ್‌ ಖಾನ್‌ ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ಧಾರೆ. "ನನ್ನ ಡ್ರೀಮ್‌ ಟಿ20 ತಂಡಕ್ಕೆ ಮೊದಲಿಗರಾಗಿ ನಾನು ಜೋಸ್‌ ಬಟ್ಲರ್‌ ಅವರನ್ನು ಆರಿಸುತ್ತೇನೆ," ಎಂದು ರಿಷಬ್‌ ಪಂತ್‌ ಹೇಳಿರುವುದಾಗಿ ಐಸಿಸಿ ಕೋಟ್‌ ಮಾಡಿದೆ. ಜತೆಗೆ ಲಿವಿಂಗ್‌ಸ್ಟೋನ್‌ ಆಡುವುದನ್ನು ನೋಡುವುದೇ ಖುಷಿ ಕೊಡುತ್ತದೆ ಎಂದೂ ಪಂತ್‌ ಹೇಳಿದ್ಧಾರೆ. 

ಇದನ್ನೂ ಓದಿ: T20 WORLD CUP: ಇಂಗ್ಲೆಂಡ್ ಎದುರಿನ ಸೆಮೀಸ್‌ಗೆ ಭಾರತ ಸಂಭಾವ್ಯ ತಂಡ..! ಡಿಕೆ/ಪಂತ್ ಯಾರಿಗೆ ಸಿಗುತ್ತೆ ಸ್ಥಾನ?

"ಜಸ್ಪ್ರಿತ್‌ ಬುಮ್ರಾ ತಂಡದಲ್ಲಿ ಇರಲೇಬೇಕು. ಮತ್ತು ರಶೀದ್‌ ಖಾನ್‌ ಕಳೆದ ಆರೇಳು ವರ್ಷಗಳಿಂದಲೂ ಮಿಸ್ಟರಿ ಸ್ಪಿನ್ನರ್‌ ಆಗಿ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಿದ್ದಾರೆ. ನಾನವರ ಅಭಿಮಾನಿ ಮತ್ತು ಅವರು ಅದ್ಭುತವಾಗಿ ಬ್ಯಾಟಿಂಗ್‌ ಕೂಡ ಮಾಡಬಲ್ಲರು. ಅವರೂ ನನ್ನ ತಂಡದಲ್ಲಿರಲಿದ್ದಾರೆ. ತಂಡ ನನ್ನ ಕನಸಾಗಿರುವ ಕಾರಣ ನಾನೂ ತಂಡದಲ್ಲಿರುತ್ತೇನೆ. ನನ್ನನ್ನು ನಾನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ," ಎಂದು ಹೇಳಿದ್ದಾರೆ. 

ರಶೀದ್‌ ಖಾನ್‌ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. 48 ರನ್‌ ಬಾರಿಸುವ ಮೂಲಕ ಇನ್ನೇನು ಪಂದ್ಯ ಗೆಲ್ಲಿಸಿಯೇ ಬಿಟ್ಟರು ಎಂಬಷ್ಟು ರೋಚಕವಾಗಿ ಆಡಿದ್ದರು. ಆದರೆ ಕೇವಲ 5 ರನ್‌ಗಳ ಅಂತರದಿಂದ ಸೋಲು ಕಂಡಿದ್ದರು. ಆದರೆ ಆಸ್ಟ್ರೇಲಿಯಾ ಪಾಳಯಕ್ಕೆ ಭಯ ಹುಟ್ಟಿಸಿದ್ದಂತೂ ಸುಳ್ಳಲ್ಲ. 

ಇದನ್ನೂ ಓದಿ: T20 World Cup ಇಂಡೋ-ಆಂಗ್ಲೋ ಸೆಮೀಸ್ ಕದನ: ಈ ನಾಲ್ವರ ಹೋರಾಟ ನೋಡಲು ಮಿಸ್ ಮಾಡ್ಕೊಬೇಡಿ..!

ಇಂದು ಅಡಿಲೇಡ್‌ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್‌ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ರಿಷಬ್‌ ಪಂತ್‌ ಇಬ್ಬರೂ ಆಡುವ ಸಾಧ್ಯತೆಯಿದೆ. ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಅರ್ಶದೀಪ್‌ ಸಿಂಗ್‌, ಹಾರ್ದಿಕ್‌ ಪಾಂಡ್ಯ ವೇಗಿಗಳಾದರೆ, ಅಶ್ವಿನ್‌ ಸ್ಪಿನ್ನರ್‌ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಜತೆಗೆ ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದಿನೇಶ್‌ ಕಾರ್ತಿಕ್‌ ಮತ್ತು ರಿಷಬ್‌ ಪಂತ್‌ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. 

click me!