
ದುಬೈ(ಮಾ.08) ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ತಯಾರಿಗಳು ನಡೆಯುತ್ತಿದೆ. ಭಾರತ ಹಾಗೂ ನ್ಯೂಜಿಲೆಂಡ್ ದುಬೈನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಎರಡೂ ತಂಡಗಳು ಬಲಿಷ್ಠವಾಗಿದೆ. ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಫಾರ್ಮ್ ವರದಾನವಾಗಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನವೇ ಕೊಹ್ಲಿ ಗಾಯಗೊಂಡಿರುವುದು ತಂಡದ ಆತಂಕ ಮಾತ್ರವಲ್ಲ, ಅಭಿಮಾನಿಗಳ ಆತಂಕ ಹೆಚ್ಚಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ನೆಟ್ ಪ್ರಾಕ್ಟೀಸ್ ಮಾಡಿದ್ದಾರೆ. ಆರಂಭದಲ್ಲಿ ಸ್ಪಿನ್ನರ್ಸ್ ವಿರುದ್ದ ಬ್ಯಾಟಿಂಗ್ ಅಭ್ಯಾಸ ಮಾಡಿದ ವಿರಾಟ್ ಕೊಹ್ಲಿ ಬಳಿಕ ವೇಗಿಗಳ ದಾಳಿ ಎದುರಿಸಿದ್ದಾರೆ. ಆದರೆ ವೇಗಿಗಳ ವಿರುದ್ದ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರವ ವೇಳೆ ವಿರಾಟ್ ಕೊಹ್ಲಿ ಮೊಣಕಾಲಿಗೆ ಗಾಯವಾಗಿದೆ. ವೇಗವಾಗಿ ಬಂದ ಬಾಲ್ ಕೊಹ್ಲಿ ಮೊಣಕಾಲಿಗೆ ಬಡಿದಿದೆ. ಇದರಿಂದ ಕೊಹ್ಲಿ ಗಾಯಗೊಂಡಿದ್ದಾರೆ.
ಚಾಂಪಿಯನ್ಸ್ ಫೈನಲ್: 0 ಕಿ.ಮೀ. vs 7048 ಕಿ.ಮೀ.! ಏನಿದು ಲೆಕ್ಕಾಚಾರ? ಭಾರತಕ್ಕೆ ಹೇಗೆ ವರದಾನ?
ವಿರಾಟ್ ಕೊಹ್ಲಿ ಗಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಫಿಸಿಯೋ ಸೇರಿದಂತೆ ವೈದ್ಯರ ತಂಡ ಹಾಜರಾಗಿದೆ. ಸ್ಪ್ರೇ ಸಿಂಪಡಿಸಿದ್ದಾರೆ. ಬಳಿಕ ಕೊಹ್ಲಿ ಗಾಯವನ್ನು ವೈದ್ಯರ ತಪಾಸಣೆ ಮಾಡಿದ್ದಾರೆ. ಗಾಯದ ಬಳಿಕ ಕೊಹ್ಲಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಕೊಹ್ಲಿ ಅಭ್ಯಾಸ ಮೊಟಕುಗೊಳಿಸಿದ್ದಾರೆ. ಆದರೆ ಮೈದಾನದಲ್ಲೇ ಉಳಿದುಕೊಂಡು ಇತರರ ಅಭ್ಯಾಸ ವೀಕ್ಷಿಸಿದ್ದಾರೆ.
ಅಭ್ಯಾಸ ಸೆಶನ್ ಬಳಿಕ ಕೊಹ್ಲಿ ಗಾಯವನ್ನು ಫಿಸಿಯೋ ಪರಿಶೀಲಿಸಿದ್ದಾರೆ. ಬಳಿಕ ಗುಡ್ ನ್ಯೂಸ್ ನೀಡಿದ್ದಾರೆ. ನೆಟ್ ಪ್ರಾಕ್ಟೀಸ್ ವೇಳೆ ವಿರಾಟ್ ಕೊಹ್ಲಿ ಸಣ್ಣಮಟ್ಟದಲ್ಲಿ ಗಾಯಗೊಂಡಿದ್ದಾರೆ. ಇದು ಗಂಭೀರ ಗಾಯವಲ್ಲ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಕೊಹ್ಲಿ ನ್ಯೂಜಿಲೆಂಡ್ ವಿರುದ್ದಧ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ ಎಂದಿದ್ದಾರೆ. ಈ ಮಾತುಗಳು ಅಭಿಮಾನಿಗಳನ್ನು ನಿಟ್ಟಿಸಿರು ಬಿಡುವಂತೆ ಮಾಡಿದೆ. ವಿರಾಟ್ ಕೊಹ್ಲಿ ಫೈನಲ್ ಪಂದ್ಯ ಆಡಲಿದ್ದಾರೆ ಎಂದು ಫಿಸಿಯೋ ಖಚಿತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ದದ ಚಾಂಪಿಯನ್ಸ್ ಟ್ರೋಫಿ ಫೈನಲ್ ಅತ್ಯಂತ ಸವಾಲಿನ ಪಂದ್ಯವಾಗಿದೆ. ಕಾರಣ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿದೆ. ಪ್ರಮುಖವಾಗಿ ಭಾರತದ ವಿರುದ್ದ ಗೆಲುವಿನ ಸಿಹಿ ಹೆಚ್ಚಿದೆ. ಆದರೆ ಈ ಬಾರಿಯ ಟೀಂ ಇಂಡಿಯಾ ಪ್ರದರ್ಶನ ಉತ್ತಮವಾಗಿದೆ. ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ ಮಣಿಸಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಲೀಗ್ ಹಂತದಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಬಾಂಗ್ಲಾದೇಶ ವಿರುದ್ದ ಮೊದಲ ಪಂದ್ಯ ಆಡಿದ್ದ ಭಾರತ, ಎರಡನೇ ಪಂದ್ಯ ಪಾಕಿಸ್ತಾನ ಹಾಗೂ ಮೂರನೇ ಪಂದ್ಯ ನ್ಯೂಜಿಲೆಂಡ್ ವಿರುದ್ಧ ಆಡಿತ್ತು. ಮೂರು ಪಂದ್ಯ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಹೋರಾಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಯಾರ ಪಾಲಾಗುತ್ತೆ ಕಪ್?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.