ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಯಾರ ಪಾಲಾಗುತ್ತೆ ಕಪ್?

Published : Mar 07, 2025, 05:03 PM ISTUpdated : Mar 07, 2025, 05:07 PM IST
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಯಾರ ಪಾಲಾಗುತ್ತೆ ಕಪ್?

ಸಾರಾಂಶ

25 ವರ್ಷಗಳ ನಂತರ ಭಾರತ ಮತ್ತು ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಐಸಿಸಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು ಮತ್ತು ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ ತಲುಪಿವೆ. 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮಾರ್ಚ್ 9ರಂದು ದುಬೈನಲ್ಲಿ ನಡೆಯಲಿದೆ. ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳನ್ನು ಹೊಂದಿರುವ ಉಭಯ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯುವ ನಿರೀಕ್ಷೆಯಿದೆ.

ಇಡೀ ಕ್ರಿಕೆಟ್ ಜಗತ್ತು ಇದೀಗ ಬರೋಬ್ಬರಿ 25 ವರ್ಷಗಳ ಬಳಿಕ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಒಂದು ಕಡೆ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಅಧಿಕಾರಯುತ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟರೆ, ಮತ್ತೊಂದು ಕಡೆ ಟೀಂ ಇಂಡಿಯಾ ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 4 ವಿಕೆಟ್ ರೋಚಕ ಗೆಲುವು ಸಾಧಿಸಿದೆ.

ಉಭಯ ತಂಡಗಳು ಕೊನೆಯ ಬಾರಿಗೆ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದು 2000ದಲ್ಲಿ ನಡೆದ ಐಸಿಸ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ. ಆಗ ನ್ಯೂಜಿಲೆಂಡ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವುದರ ಜತೆಗೆ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು. ಭಾರತ ಈ ಬಾರಿ ಲೆಕ್ಕಾಚಾರ ತಲೆಕೆಳಗೆ ಮಾಡುತ್ತಾ ಅಥವಾ ಕಿವೀಸ್ ಮತ್ತೊಮ್ಮೆ ಇತಿಹಾಸ ಮರುಸೃಷ್ಟಿಸುತ್ತಾ? ನೀವು ಈ ಮ್ಯಾಚ್ ಉತ್ಸಾಹವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ದೊಡ್ಡ ಬಹುಮಾನ ಗೆಲ್ಲಲು ಈ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ register with zuplay.com

ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಡೀಟೈಲ್ಸ್:

ದಿನಾಂಕ: ಭಾನುವಾರ, ಮಾರ್ಚ್ 9, 2025
ಸಮಯ: 2:30 PM, ಭಾರತೀಯ ಕಾಲಮಾನ
ಸ್ಥಳ: ದುಬೈ ಅಂತಾರಾಷ್ಟ್ರೀಯ ಮೈದಾನ

ಬಲಾಢ್ಯ ತಂಡಗಳ ನಡುವಿನ ಹೋರಾಟ: ಫೈನಲ್‌ನಲ್ಲಿ  ಏನು ನಿರೀಕ್ಷಿಸಬಹುದು

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಪಂದ್ಯವು ಕ್ರಿಕೆಟ್ ಅಭಿಮಾನಿಗಳನ್ನು ರೋಚಕ ಕಾದಾಟದ ಮೂಲಕ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ನಿರೀಕ್ಷೆ ಮೂಡಿಸಿದೆ. ಯಾಕೆಂದರೆ ಎರಡೂ ತಂಡದ ಆಟಗಾರರು ಟೂರ್ನಿಯುದ್ದಕ್ಕೂ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಹಣೆಬರಹ ನಿರ್ಧರಿಸುವ ಅಂಶಗಳು ಯಾವುವು ಎನ್ನುವುದನ್ನು ನೋಡೋಣ.

1. ನ್ಯೂಜಿಲೆಂಡ್ ತಂಡದಲ್ಲಿದೆ ಬಲಿಷ್ಠ ಬ್ಯಾಟರ್‌ಗಳ ದಂಡು:

ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಇಬ್ಬರೂ ಅದ್ಭುತ ಬ್ಯಾಟಿಂಗ್ ಲಯದಲ್ಲಿದ್ದು, ಕಿವೀಸ್ ಪಡೆ ದೊಡ್ಡ ಇನ್ನಿಂಗ್ಸ್‌ ಕಟ್ಟಲು ನೆರವಾಗುತ್ತಿದ್ದಾರೆ. 
ಇನ್ನು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಫ್ಸ್ ಹಾಗೂ ಡೇರಲ್ ಮಿಚೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಕಲೆಹಾಕಲು ನೆರವಾಗುತ್ತಿದ್ದಾರೆ. 
ತಮ್ಮ ಆಕ್ರಮಣಕಾರಿ ರಣತಂತ್ರವನ್ನು ಬ್ಯಾಟಿಂಗ್‌ನಲ್ಲಿ ಅಳವಡಿಸಿಕೊಂಡಿರುವ ಕಿವೀಸ್‌ ಸತತವಾಗಿ 300+ ರನ್ ದಾಖಲಿಸುತ್ತಾ ಬಂದಿದೆ.

ತಂಡದ ಪ್ರಮುಖ ಬಲ: ನ್ಯೂಜಿಲೆಂಡ್ ತಂಡವು ಎಂತಹ ಒತ್ತಡದ ಸನ್ನಿವೇಷದಲ್ಲೂ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ಈ ತಂಡ ಎದುರಾಳಿಗಳ ಪಾಲಿಗೆ ಅಪಾಯಕಾರಿ ಎನಿಸಿಕೊಂಡಿದೆ.

2. ಭಾರತ ತಂಡದಲ್ಲಿದ್ದಾರೆ ವಿಸ್ಪೋಟಕ ಅಗ್ರಕ್ರಮಾಂಕ:

ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ವಿಸ್ಪೋಟಕ ಆರಂಭ ಒದಗಿಸಿಕೊಡುತ್ತಿದ್ದಾರೆ.
ಚೇಸ್‌ ಮಾಸ್ಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಎನಿಸಿಕೊಂಡಿದ್ದಾರೆ.
ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ದೃಢತೆ ತಂದುಕೊಡುವುದರ ಜತೆಗೆ ಮ್ಯಾಚ್ ಫಿನಿಶ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 

ಪ್ರಮುಖ ಬಲ: ಭಾರತದ ಅಗ್ರಕ್ರಮಾಂಕ ಟೂರ್ನಮೆಂಟ್‌ನ ಅತ್ಯಂತ ಬಲಾಢ್ಯ ವಿಭಾಗ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನಿಂಗ್ಸ್‌ನ ಆರಂಭದಲ್ಲೇ ಪಂದ್ಯದ ದಿಕ್ಕನ್ನು ನಿರ್ಧರಿಸಲಿದೆ.

3. ಬೌಲಿಂಗ್ ಅಟ್ಯಾಕ್: ಸ್ಪಿನ್ vs ಪೇಸ್ ಕದನ

ಭಾರತದ ಸ್ಪಿನ್ ಅಸ್ತ್ರ: ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ದುಬೈ ವಾತಾವರಣದಲ್ಲಿ ಅತ್ಯಂತ ಅಪಾಯಕಾರಿ ಬೌಲರ್‌ಗಳಾಗಿದ್ದಾರೆ.

ನ್ಯೂಜಿಲೆಂಡ್ ಸ್ಪಿನ್ ವಿಭಾಗ: ಮಿಚೆಲ್ ಸ್ಯಾಂಟ್ನರ್, ಮಿಚೆಲ್ ಬ್ರಾಸ್‌ವೆಲ್ ಹಾಗೂ ರಚಿನ್ ರವೀಂದ್ರ ಶಿಸ್ತುಬದ್ದ ದಾಳಿ ಮೂಲಕ ಎದುರಾಳಿ ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ವೇಗದ ಬೌಲಿಂಗ್ ವಿಭಾಗ: ಭಾರತ ತಂಡದಲ್ಲಿ ವಿಶ್ವದರ್ಜೆಯ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಬಲವಿದೆ. ಇನ್ನು ಕಿವೀಸ್ ತಂಡದಲ್ಲಿ ನೀಳಕಾಯದ ವೇಗಿಗಳಾದ ಕೈಲ್ ಜೇಮಿಸನ್ ಹಾಗೂ ಮ್ಯಾಟ್ ಹೆನ್ರಿ ಇದ್ದಾರೆ.

ಗಮನಿಸಬೇಕಾದ ಅಂಶ: ದುಬೈ ಸ್ಲೋ ಪಿಚ್ ಆಗಿರುವುದರಿಂದಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಬಹುದು. ಹೀಗಾಗಿ ಭಾರತಕ್ಕೆ ಕೊಂಚ ಅನುಕೂಲವಾಗುವ ಸಾಧ್ಯತೆ ಇದೆ.

4. ದುಬೈನ ಪಿಚ್ & ಕಂಡೀಷನ್

ದುಬೈ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಇಲ್ಲಿ ಸರಾಸರಿ 240-260 ರನ್ ದಾಖಲಾಗಬಹುದು. ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ತಂಡವು ಇದೇ ಪಿಚ್‌ನಲ್ಲಿ ನ್ಯೂಜಿಲೆಂಡ್ ಎದುರು 250 ರನ್‌ಗಳನ್ನು ರಕ್ಷಿಸಿಕೊಂಡಿತ್ತು. 

ಪ್ರಮುಖ ಅಂಶ: ಒಂದು ವೇಳೆ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ, ಸ್ಪರ್ಧಾತ್ಮಕ ಮೊತ್ತ ಕಲೆಹಾಕಬೇಕಿದೆ. ಇದಾದ ಬಳಿಕ ಸ್ಪಿನ್ನರ್‌ಗಳು ಕಿವೀಸ್ ಬ್ಯಾಟರ್‌ಗಳನ್ನು ಕಾಡಲು ಅನುಕೂಲವಾಗಲಿದೆ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲೋರು ಯಾರು?

ಭಾರತ: ಒಂದು ವೇಳೆ ಟೀಂ ಇಂಡಿಯಾ ನಾಕೌಟ್ ಒತ್ತಡವನ್ನು ಸರಿಯಾಗಿ ನಿಭಾಯಿಸಿದರೆ, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ, ಬೌಲಿಂಗ್‌ನಲ್ಲಿ ಮಿಂಚಿದರೆ ಗೆಲುವಿನ ನಗೆ ಬೀರಬಹುದು.

ನ್ಯೂಜಿಲೆಂಡ್: ನ್ಯೂಜಿಲೆಂಡ್ ತಂಡವ ಗೆಲುವಿನ ಹಳಿಗೆ ಮರಳಿದೆ. ಒತ್ತಡದಲ್ಲಿ ಅಮೋಘ ಪ್ರದರ್ಶನ ತೋರುವ ಕ್ಷಮತೆ ಹೊಂದಿರುವ ಕಿವೀಸ್‌ ತಂಡ ಮತ್ತೊಮ್ಮೆ ಭಾರತಕ್ಕೆ ಶಾಕ್ ಕೊಡುವ ವಿಶ್ವಾಸದಲ್ಲಿದೆ.

ಉಭಯ ತಂಡಗಳು ದೊಡ್ಡ ವೇದಿಕೆಯಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತುಪಡಿಸಿವೆ. ಆದರೆ ಕೇವಲ ಒಂದು ತಂಡ ಮಾತ್ರ ಚಾಂಪಿಯನ್ ಆಗಲು ಸಾಧ್ಯ. ಭಾರತ ತಂಡವು ಐಸಿಸಿ ಫೈನಲ್ ಕಂಠಕದಿಂದ ಪಾರಾಗುತ್ತಾ ಅಥವಾ ಕಿವೀಸ್ ಮತ್ತೊಮ್ಮೆ ಕಪ್ ಗೆಲ್ಲುತ್ತಾ? 

ಫೈನಲ್‌ಗೆ ವೇದಿಕೆ ಸಜ್ಜಾಗಿದೆ. ಇಡೀ ಜಗತ್ತೇ ಫೈನಲ್‌ ನೋಡಲು ತುದಿಗಾಲಿನಲ್ಲಿ ನಿಂತಿದೆ. ಚೆನ್ನಾಗಿ ಆಡುವ ತಂಡ ಗೆಲ್ಲಬಹುದು. ಫೈನಲ್‌ನ ಹೆಚ್ಚಿನ ಮಾಹಿತಿಗಾಗಿ Follow the finals at zuplay ಫಾಲೋಮಾಡಿ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!