ಪತ್ನಿ ಮೇಲಿನ ಕಳಂಕ ತೊಡೆದು ಹಾಕಿದ ವಿರಾಟ್‌: ಟೀಂ ಇಂಡಿಯಾಗೆ ಅದೃಷ್ಟ ದೇವತೆಯಾದ ಅನುಷ್ಕಾ..!

By Suvarna News  |  First Published Nov 17, 2023, 4:08 PM IST

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅನುಷ್ಕಾ ಶರ್ಮಾ ಸಾಕ್ಷಿಯಾಗಿದ್ರು. ಗ್ಯಾಲರಿಯಲ್ಲಿ ಕೂತು ಟೀಮ್ ಇಂಡಿಯಾಗೆ ಸಪೋರ್ಟ್ ಮಾಡಿದ್ರು. ಅದರಲ್ಲೂ ವಿರಾಟ್ ಫೋರ್, ಸಿಕ್ಸ್ ಬಾರಿಸಿದಾಗ ಖುಷಿಯ ಅಲೆಯಲ್ಲಿ ತೇಲಾಡಿದ್ರು. ಕೊಹ್ಲಿ ಶತಕ ಬಾರಿಸಿ ವಿಶ್ವದಾಖಲೆ ಬಾರಿಸುತ್ತಿದ್ದಂತೆ, ಪತ್ನಿಗೆ ಫ್ಲೈಯಿಂಗ್ ಕಿಸ್ ನೀಡಿದ್ರು. ಅದಕ್ಕೆ ಪ್ರತಿಯಾಗಿ ಅನುಷ್ಕಾ ಮುತ್ತಿನ ಮಳೆಯನ್ನೇ ಸುರಿಸಿದ್ರು.


ಮುಂಬೈ(ನ.17) ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಫೈಟ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಸಚಿನ್‌ ಅವರ ದಾಖಲೆಯನ್ನ ಮಾತ್ರ ಬ್ರೇಕ್ ಮಾಡಲಿಲ್ಲ. ಅನುಷ್ಕಾ ಮೇಲಿನ ಕಳಂಕವನ್ನೂ ತೊಡೆದು ಹಾಕಿದ್ರು. ತನ್ನ ಹೆಂಡತಿಯನ್ನ ಅನ್‌ಲಕ್ಕಿ ಅಂದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.

ವಿರುಷ್ಕಾ...!! ಭಾರತದ ನಂ.1 ಸೆಲೆಬ್ರಿಟಿ ಜೋಡಿ. ಇವರನ್ನ ನೋಡಿದ್ರೆ ಗಂಡ- ಹೆಂಡತಿ ಅಂದ್ರೆ ಹಿಂಗ್ ಇರಬೇಕಪ್ಪಾ. ಮೇಡ್ ಫಾರ್ ಈಚ್ ಅದರ್ ಅಂತ ಅನ್ಸುತ್ತೆ. ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲ್ಲ. ಕೊಹ್ಲಿಯ ಸಕ್ಸಸ್‌ನ ಪ್ರತಿ ಹಂತದಲ್ಲೂ ಅನುಷ್ಕಾ ಪಾತ್ರವಿದೆ. ಇದೇ ಕಾರಣಕ್ಕೆ, ಕೊಹ್ಲಿಗೆ ಹೆಂಡ್ತಿ ಅಂದ್ರೆ ಪ್ರಾಣ. ಮ್ಯಾಚ್ ನಡೆಯುತ್ತಿದ್ರೂ, ವಿರಾಟ್ಗೆ ಪತ್ನಿಯದ್ದೇ ಧ್ಯಾನ.

Tap to resize

Latest Videos

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅನುಷ್ಕಾ ಶರ್ಮಾ ಸಾಕ್ಷಿಯಾಗಿದ್ರು. ಗ್ಯಾಲರಿಯಲ್ಲಿ ಕೂತು ಟೀಮ್ ಇಂಡಿಯಾಗೆ ಸಪೋರ್ಟ್ ಮಾಡಿದ್ರು. ಅದರಲ್ಲೂ ವಿರಾಟ್ ಫೋರ್, ಸಿಕ್ಸ್ ಬಾರಿಸಿದಾಗ ಖುಷಿಯ ಅಲೆಯಲ್ಲಿ ತೇಲಾಡಿದ್ರು. ಕೊಹ್ಲಿ ಶತಕ ಬಾರಿಸಿ ವಿಶ್ವದಾಖಲೆ ಬಾರಿಸುತ್ತಿದ್ದಂತೆ, ಪತ್ನಿಗೆ ಫ್ಲೈಯಿಂಗ್ ಕಿಸ್ ನೀಡಿದ್ರು. ಅದಕ್ಕೆ ಪ್ರತಿಯಾಗಿ ಅನುಷ್ಕಾ ಮುತ್ತಿನ ಮಳೆಯನ್ನೇ ಸುರಿಸಿದ್ರು.

ರಟ್ಟಾಯ್ತು ಭಾರತೀಯರ ಬ್ಯಾಟಿಂಗ್ ಗುಟ್ಟು..! ರೋಹಿತ್-ಗಿಲ್-ಶ್ರೇಯಸ್‌ಗೆ ದ್ರಾವಿಡ್ ಕೊಟ್ಟ ಟಾಸ್ಕ್ ಏನು ಗೊತ್ತಾ?  

ಇನ್ನು  ಔಟಾಗಿ ಪೆವಿಲಿಯನ್ ಸೇರಿದ ನಂತರವೂ ಕೊಹ್ಲಿಗೆ ಹೆಂಡತಿಯದ್ದೇ ಚಿಂತೆ. ಡ್ರೆಸ್ಸಿಂಗ್ ರೂಮ್ ಬಾಲ್ಕನಿಯಿಂದ ಇಣುಕಿ, ನನ್ ಹೆಂಡ್ತಿ ಏನ್ ಮಾಡ್ತಿದ್ದಾಳೆ ಅಂತ ನೋಡಿದ್ರು. ಆದ್ರೆ.. ಪಾಪ ಅನುಷ್ಕಾ ಕಾಣಲೇ ಇಲ್ಲ....! ಇನ್ನು ಪಂದ್ಯ ಮುಗಿದ ಬಳಿಕವೂ ಫೋನ್ನಲ್ಲಿ ಮಾತನಾಡಿತ್ತಾ ತಲೆ ಎತ್ತಿ ಅನುಷ್ಕಾಳನ್ನ ನೋಡುತ್ತಿದ್ದರು ಕೊಹ್ಲಿ. 

ಸೆಮಿಫೈನಲ್ ಫೈಟ್ನಲ್ಲಿ ಕೊಹ್ಲಿ ಶತಕ ಬಾರಿಸಿ ಸಚಿನ್ರ ದಾಖಲೆಯನ್ನ ಮಾತ್ರ ಬ್ರೇಕ್ ಮಾಡಲಿಲ್ಲ. ಅನುಷ್ಕಾ ಮೇಲಿನ ಕಳಂಕವನ್ನೂ ತೊಡೆದು ಹಾಕಿದ್ರು. ತನ್ನ ಹೆಂಡತಿಯನ್ನ ಅನ್ಲಕ್ಕಿ ಅಂದವರ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. 

ಯೆಸ್, ಕೊಹ್ಲಿ ಪಾಲಿಗೆ ಅನುಷ್ಕಾ ಅನ್ಲಕ್ಕಿ ಅಂತ ಹಲವು ಬಾರಿ ಟ್ರೋಲ್ ಮಾಡಲಾಗಿದೆ. 2015ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಕೇವಲ 4 ರನ್ಗಳಿಸಿ ಔಟಾಗಿದ್ರು.  ಆಗ ಅನುಷ್ಕಾ ಸ್ಟೇಡಿಯಂಗೆ ಬಂದಿದ್ದರಿಂದಲೇ ಕೊಹ್ಲಿ ಆಡಲಿಲ್ಲ ಅಂತ ಟೀಕೆ ಮಾಡಲಾಯ್ತು. ಅಲ್ಲದೇ, ಟೀಮ್ ಇಂಡಿಯಾ ಪಾಲಿಗೂ ಅನುಷ್ಕಾ ಅನ್ಲಕ್ಕಿ ಅಂತ ಬಿಂಬಿಸಲಾಯ್ತು. 

World Cup 2023 Final: ವಿಶ್ವಕಪ್‌ ಸಮಾರೋಪ ಕಾರ್ಯಕ್ರಮದಲ್ಲಿ ಐಎಎಫ್‌ನಿಂದ ಏರ್‌ಶೋ!

2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ವೀಕ್ಷಿಸಲು ಅನುಷ್ಕಾ ಸ್ಟೇಡಿಯಂಗೆ ಹಾಜರಾಗಿದ್ರು. ಆದ್ರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ, ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತಿತ್ತು. 

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯಕ್ಕೂ ಅನುಷ್ಕಾ ಅಟೆಂಡ್ ಆಗಿದ್ರು. ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಮುಗ್ಗರಿಸಿತ್ತು. 2021ರ WTC ಫೈನಲ್ನಲ್ಲು ಸೇಮ್ ಕಥೆ. ಆದ್ರೆ, ಈ ಬಾರಿ ಅನುಷ್ಕಾ, ಟೀಂ ಇಂಡಿಯಾಗೂ ಮತ್ತು ಕೊಹ್ಲಿ ಇಬ್ಬರಿಗೂ ಅದೃಷ್ಟ ದೇವತೆಯಾಗಿದ್ದಾರೆ. 
 
ಮಹೇಶ್ ಗುರಣ್ಣನವರ್, ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!