ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸದಿರಲು ಬಿಸಿಸಿಐ ನಿರ್ಧರಿಸಿದ್ದು, ಟೂರ್ನಿಯನ್ನು ಸ್ಥಳಾಂತರಗೊಳಿಸುವ ಬಗ್ಗೆ ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ಮುಖ್ಯಸ್ಥರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಭೆಯಲ್ಲಿ ಪ್ರಸ್ಥಾಪಿಸಲಿದ್ದಾರೆ ಎನ್ನಲಾಗಿದೆ.
ಅಹಮದಾಬಾದ್(ನ.17): ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಜಾಕಾ ಅಶ್ರಫ್ ಭಾರತಕ್ಕೆ ಆಗಮಿಸಿದ್ದು, ಶನಿವಾರ ಇಲ್ಲಿ ನಡೆಯಲಿರುವ ಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ವಿಶ್ವಕಪ್ ಆಯೋಜನೆಯ ವಿಮರ್ಶೆ, ಟೂರ್ನಿಯಿಂದ ಐಸಿಸಿಗೆ ಸಿಕ್ಕ ಆದಾಯದ ಬಗ್ಗೆ ಪ್ರಸ್ತಾಪವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವ ಬಗ್ಗೆಯೂ ಚರ್ಚೆ ನಡೆಯಬಹುದು ಎನ್ನಲಾಗಿದೆ.
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸದಿರಲು ಬಿಸಿಸಿಐ ನಿರ್ಧರಿಸಿದ್ದು, ಟೂರ್ನಿಯನ್ನು ಸ್ಥಳಾಂತರಗೊಳಿಸುವ ಬಗ್ಗೆ ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ಮುಖ್ಯಸ್ಥರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಭೆಯಲ್ಲಿ ಪ್ರಸ್ಥಾಪಿಸಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರಗೊಂಡರೂ, ಆತಿಥ್ಯ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳಲು ಪಿಸಿಬಿ ಇಚ್ಛಿಸಿದ್ದು, ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಲಿದೆ ಎಂದು ತಿಳಿದುಬಂದಿದೆ.
ವಿರಾಟ್ ಕೊಹ್ಲಿಯನ್ನು ದೇವರ ಮಗ ಎಂದು ಕರೆದ ಪತ್ನಿ ಅನುಷ್ಕಾ ಶರ್ಮಾ!
ಫೈನಲ್: ಅಹ್ಮದಾಬಾದ್ ತಲುಪಿದ ಭಾರತ ತಂಡ
ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯವಾಡಲು ಭಾರತ ತಂಡದ ಆಟಗಾರರು ಗುರುವಾರ ಅಹಮದಾಬಾದ್‌ಗೆ ಆಗಮಿಸಿದರು. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಜಯಗಳಿಸಿದ ಬಳಿಕ ಗುರುವಾರ ಸಂಜೆ ಆಟಗಾರರು ಅಹಮದಾಬಾದ್‌ಗೆ ಬಂದಿಳಿದರು. ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಭಾರತೀಯ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಲಿದ್ದಾರೆ.
ವಿಶ್ವಕಪ್ ಗೆಲ್ಲಲು ಭಾರತ ಅರ್ಹ: ವಿಲಿಯಮ್ಸನ್
ಮುಂಬೈ: ವಿಶ್ವಕಪ್ ಫೈನಲ್‌ಗೇರಿರುವ ಭಾರತ ತಂಡವನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಭಿನಂದಿಸಿದ್ದು, ಭಾರತೀಯರು ವಿಶ್ವಕಪ್ ಗೆಲ್ಲಲು ಅರ್ಹರಿದ್ದಾರೆ ಎಂದಿದ್ದಾರೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ವಿಶ್ವದಲ್ಲೇ ಶ್ರೇಷ್ಠ ತಂಡ. ಟೂರ್ನಿಯಲ್ಲಿ ಭಾರತದ ಆಟ ಅದ್ಭುತವಾಗಿದೆ. ಎಲ್ಲಾ ವಿಭಾಗದಲ್ಲೂ ತಂಡ ಮಿಂಚುತ್ತಿದೆ. ಭಾರತೀಯರು ಕೆಲ ದಿನಗಳಲ್ಲೇ ವಿಶ್ವಕಪ್ ಗೆಲ್ಲಲು ಸಜ್ಜಾಗಿದ್ದಾರೆ’ ಎಂದಿದ್ದಾರೆ. ಇದೇ ವೇಳೆ ವಿರಾಟ್, ಶಮಿ ಬಗ್ಗೆಯೂ ಕೇನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊಹ್ಲಿ ಸಾಧನೆಯನ್ನು ವರ್ಣಿಸಲು ಪದಗಳಿಲ್ಲ ಎಂದಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯಕ್ಕೆ ಪ್ರಧಾನಿ ಮೋದಿ-ಧೋನಿಗೆ ಆಹ್ವಾನ, ಫ್ಯಾನ್ಸ್‌ಗೆ ವರ್ಣರಂಜಿತ ಕಾರ್ಯಕ್ರಮ!
ತಿಂಗಳ ಹಿಂದೆ 10ನೇ ಸ್ಥಾನ ಈಗ ವಿಶ್ವಕಪ್ ಫೈನಲ್‌ಗೆ!
ವಿಶ್ವಕಪ್‌ನ ಮೊದಲೆರಡು ಪಂದ್ಯಗಳಲ್ಲಿ ಸೋತ ಆಸ್ಟ್ರೇಲಿಯಾ ಅ.15ರಂದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆ ಬಳಿಕ ಸತತ 7 ಪಂದ್ಯ ಗೆದ್ದು ಲೀಗ್ ಹಂತವನ್ನು 3ನೇ ಸ್ಥಾನದಲ್ಲಿ ಮುಗಿಸಿದ ಆಸೀಸ್, ಸೆಮಿಫೈನಲ್‌ಗೇರಿತು. ಸೆಮೀಸ್‌ನಲ್ಲಿ ದ.ಆಫ್ರಿಕಾವನ್ನು ಬಗ್ಗುಬಡಿದು ಸತತ 8ನೇ ಜಯದೊಂದಿಗೆ ಫೈನಲ್‌ಗೇರಿದೆ.