ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕದ ಬರ ಎದುರಿಸುತ್ತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಎರಡು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಕರಿಯರ್‌ನ ಕೆಟ್ಟ ದಿನಗಳನ್ನ ಎದುರಿಸಿದ್ರು. ಅದರಲ್ಲು ಅದೊಂದು ಕಾರಣಕ್ಕೆ, ಕೊಹ್ಲಿ ವಿರುದ್ಧ ಟೀಕೆಗಳು ಕೇಳಿಬಂದಿದ್ವು. ಸಿಕ್ಕ ಸಿಕ್ಕವರೆಲ್ಲಾ ಕೊಹ್ಲಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ರು. ಎರಡು ವರ್ಷಗಳ ನಂತರ ರನ್ ಮಷಿನ್ ಮತ್ತೆ ಅಂತದ್ದೆ ಸ್ಥಿತಿಗೆ ತಲುಪಿದ್ದಾರೆ. ಅಷ್ಟಕ್ಕೂ ಇವರೇನು ಹೇಳ್ತಿದ್ದಾರೆ ಅನ್ಕೊಂಡ್ರಾ? ಇಲ್ಲಿದೆ ನೋಡಿ ಡಿಟೇಲ್ಸ್..!
81ನೇ ಶತಕಕ್ಕಾಗಿ ಮುಂದುವರಿದ ಕಾಯುವಿಕೆ!
undefined
ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್ ಸುಳಿಗೆ ಸಿಲುಕಿದ್ದಾರೆ. ಬಾಂಗ್ಲಾ ದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ ಮಷಿನ್ ಫ್ಲಾಫ್ ಶೋ ನೀಡ್ತಿದ್ದಾರೆ. ಈವರೆಗು ಆಡಿರೋ 2 ಇನ್ನಿಂಗ್ಸ್‌ಗಳಿಂದ ಜಸ್ಟ್ 23 ರನ್‌ಗಳಿಸಿದ್ದಾರೆ. ಇದರಿಂದ ಕೊಹ್ಲಿ ಆಟದ ವಿರುದ್ಧ ಟೀಕೆಗಳು ಕೇಳಿಬರ್ತಿವೆ. 81ನೇ ಶತಕಕ್ಕಾಗಿ ಅಭಿಮಾನಿಗಳ ಕಾಯುವಿಕೆ ಮುಂದುವರಿದಿದೆ.
ಐಪಿಎಲ್ ಬಳಿಕ ಧೋನಿ ಬಿಂದಾಸ್ ಲೈಫ್ ಎಂಜಾಯ್:ವಿಡಿಯೋ ವೈರಲ್
ಮತ್ತೊಂದೆಡೆ ಕೊಹ್ಲಿ ಮತ್ತೆ ಶತಕಗಳ ಬರದ ಸುಳಿಗೆ ಸಿಲುಕಿದ್ರಾ? ಅನ್ನೋ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ ಕೊಹ್ಲಿ ಟೀಂ ಇಂಡಿಯಾ ಪರ ಶತಕ ಸಿಡಿಸಿ 10 ತಿಂಗಳುಗಳೇ ಕಳೆದಿವೆ. 310 ದಿನಗಳಿಂದ ಒಂದೇ ಒಂದು ಶತಕ ಬಾರಿಸಿಲ್ಲ. ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ದಾಖಲಿಸಿದ್ರು. ಅಲ್ಲದೇ ಸಚಿನ್ ತೆಂಡುಲ್ಕರ್‌ನ 49 ಶತಕಗಳ ದಾಖಲೆಯನ್ನು ಬ್ರೇಕ್ ಮಾಡಿದ್ರು.
ಕಳೆದ 23 ಇನ್ನಿಂಗ್ಸ್‌ಗಳಲ್ಲಿ ಎರಡೇ ಎರಡು ಅರ್ಧಶತಕ!
ಯೆಸ್, ಏಕದಿನ ವಿಶ್ವಕಪ್ ಸೆಮಿಫೈನಲ್ ನಂತರ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 4 ಇನ್ನಿಂಗ್ಸ್, ಆಪ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 2 ಪಂದ್ಯ ಟಿ20 ವಿಶ್ವಕಪ್‌ನಲ್ಲಿ 8 ಪಂದ್ಯ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯ, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಸೇರಿ ಒಟ್ಟು 23 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದ್ರಲ್ಲಿ ಒಮ್ಮೆಯೂ ಕೊಹ್ಲಿ ಶತಕದ ಗಡಿ ದಾಟಿಲ್ಲ. ಕೇವಲ ಎರಡು ಬಾರಿ ಮಾತ್ರ ಅರ್ಧಶತಕ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸುವರ್ಣ ಯುಗ ಮುಗಿಯಿತಾ?
1019 ದಿನ ಶತಕದ ಬರ ಎದುರಿಸಿದ್ದ ರನ್ ಮಷಿನ್!
ನವೆಂಬರ್ 22, 2019. ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70ನೇ ಸೆಂಚುರಿ ಸಿಡಿಸಿದ್ರು. ಇದಾದ ನಂತರ 1000 ದಿನಗಳ ಕಾಲ ಕೊಹ್ಲಿ ಬ್ಯಾಟಿಂದ ಒಂದೇ ಒಂದು ಶತಕ ಬಂದಿರಲಿಲ್ಲ. ವಿರಾಟ್ ಸೆಂಚುರಿಲೆಸ್ ಆಟದಿಂದ ಕ್ರಿಕೆಟ್ ಜಗತ್ತಿಗೆ ಗ್ರಹಣ ಹಿಡಿದಿತ್ತು. ಆದ್ರೆ, 2022 ಸೆಪ್ಟೆಂಬರ್ 8 ರಂದು ಗ್ರಹಣ ಬಿಟ್ಟಿತ್ತು. ಅದಕ್ಕೆ, ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂ ಸಾಕ್ಷಿಯಾಯ್ತು.
ಏಷ್ಯಾಕಪ್ನಲ್ಲಿ ಆಪ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ರು. ಕೆ.ಎಲ್ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದು, ಕೇವಲ 53 ಎಸೆತಗಳಲ್ಲಿ ಶತಕ ಬಾರಿಸಿದ್ರು. ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ದಾಖಲಿಸಿದ್ರು. ಒಟ್ಟಾರೆ 61 ಎಸೆತಗಳಲ್ಲಿ 12 ಫೋರ್ ಮತ್ತು 6 ಭರ್ಜರಿ ಸಿಕ್ಸರ್ ಸಹಿತ 122 ರನ್ ಬಾರಿಸಿದ್ರು. ಶತಕಗಳ ಬರದ ಸುಳಿಯಿಂದ ಫೀನಿಕ್ಸ್‌ನಂತೆ ಎದ್ದು ಬಂದಿದ್ರು.
ಅದೇನೆ ಇರಲಿ, ಮುಂದಿನ ಪಂದ್ಯಗಳಲ್ಲಿ ಕೊಹ್ಲಿ ಜಬರ್ದಸ್ತ್ ಪ್ರದರ್ಶನ ನೀಡಲಿ. ಹಳೆಯ ಖದರ್‌ಗೆ ಮರಳಿ ಟೀಕಾಕಾರರ ಬಾಯಿ ಬಂದ್ ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್