
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಧೋನಿ, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಕಳೆದ ಐಪಿಎಲ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಗೆ ಮಸ್ತ್ ಮಜರಂಜನೆ ನೀಡಿದ್ರು. ಆದ್ರೀಗ, ಮಹಿ ಧೋನಿ ಏನ್ ಮಾಡ್ತಿದ್ದಾರೆ ಗೊತ್ತಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ
ಐಪಿಎಲ್ ನಂತರ ಧೋನಿ ಏನ್ ಮಾಡ್ತಿದ್ದಾರೆ ಗೊತ್ತಾ..?
ಮಹೇಂದ್ರ ಸಿಂಗ್ ಧೋನಿ! ಕ್ರಿಕೆಟ್ ಜಗತ್ತಿನ ಮಾಸ್ಟರ್ ಮೈಂಡ್. ಗೇಮ್‌ಪ್ಲಾನ್ ರೂಪಿಸೋದ್ರಲ್ಲಿ ಧೋನಿ ಮುಂದೆ ಯಾರೂ ಇಲ್ಲ. ಮಹಿ ಯಾವಾಗ ಯಾವ ಅಸ್ತ್ರ ಉಪಯೋಗಿಸ್ತಾರೆ, ಯಾವ ದಾಳ ಉರುಳಿಸ್ತಾರೆ ಅಂತ ಊಹಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಬರೀ ಆನ್‌ಫೀಲ್ಡ್ ಅಷ್ಟೇ ಅಲ್ಲ, ಆಫ್ ಫೀಲ್ಡ್‌ನಲ್ಲೂ ಧೋನಿ ಸಖತ್ ಡಿಫ್ರೆಂಟ್.
ಕ್ರಿಕೆಟ್‌ನಿಂದ ದೂರ ಇದ್ದಾಗ ಧೋನಿ, ಯಾರ ಸಂರ್ಪಕಕ್ಕೂ ಸಿಗಲ್ಲ. ಅವರು ಎಲ್ಲಿ ಗೋಗ್ತಾರೆ. ಎಲ್ಲಿರ್ತಾರೆ ಅಂತ ಯಾರಿಗೂ ಗೊತ್ತಿರಲ್ಲ. ಬೇರೆ ಕ್ರಿಕೆಟರ್ಸ್ ರಜೆ ಸಿಕ್ರೆ ಸಾಕು, ಫಾರಿನ್ ಟ್ರಿಪ್ ಅಂತ ಹೋಗ್ತಾರೆ. ಆದ್ರೆ, ಧೋನಿ ಕೃಷಿ ಮಾಡೋದ್ರಲ್ಲಿ ಬ್ಯುಸಿಯಾಗಿರ್ತಾರೆ. ತಮ್ಮ ಹೊಲದಲ್ಲಿ ಸಾಮಾನ್ಯ ರೈತರಂತೆ ಟ್ರ್ಯಾಕ್ಟರ್ ಹತ್ತಿ ಉಳುಮೆ ಮಾಡ್ತಾರೆ. ಇಲ್ಲ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಅಬ್ಬರಿಸಿ ಬೊಬ್ಬರಿದ್ರು. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ, ಅಭಿಮಾನಿಗಳಿಗೆ ಹಳೆ ಧೋನಿಯ ದರ್ಶನ ಮಾಡಿಸಿದ್ರು. ಐಪಿಎಲ್ ಮುಗಿದ ನಂತರ ಧೋನಿ ಸೀದಾ ರಾಂಚಿ ದಾರಿ ಹಿಡಿದ್ರು. ತಮ್ಮ ಮನೆಯಲ್ಲಿ ಯಾವ ಜಂಜಾಟವೂ ಇಲ್ಲದೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.
ಸೋಲೋ ಬೈಕ್ ರೈಡಿಂಗ್, ಲಾಂಗ್ ಡ್ರೈವ್!
ಯೆಸ್, ಬೈಕ್ ರೈಡಿಂಗ್ ಮತ್ತು ಕಾರ್‌ನಲ್ಲಿ ಲಾಂಗ್ ಡ್ರೈವ್ ಹೋಗೋದು ಧೋನಿಯ ನೆಚ್ಚಿನ ಹವ್ಯಾಸ. ಸದ್ಯ ಧೋನಿ ತಮ್ಮ ತವರಿನಲ್ಲಿ ಬೈಕ್ ರೈಡ್ ಮತ್ತು ಲಾಂಗ್ ಡ್ರೈವ್ ಎಂಜಾಯ್ ಮಾಡ್ತಿದ್ದಾರೆ.
ಒಟ್ಟಿನಲ್ಲಿ ಧೋನಿ ಕ್ರಿಕೆಟ್‌ನಿಂದ ದೂರವಾದ್ರೂ, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಅಭಿಮಾನಿಗಳಿಗೆ ಆಗಾಗ್ಗೆ ದರ್ಶನ ನೀಡ್ತಾರೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.