ಬಾಂಗ್ಲಾ ಮಣಿಸಿ ಧೋನಿ ದಾಖಲೆ ಮುರಿದ ಕೊಹ್ಲಿ!

By Web DeskFirst Published Nov 24, 2019, 5:28 PM IST
Highlights

ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭಾರತ 2-0 ಜಯಭೇರಿ ಬಾರಿಸಿದೆ. ಈ ಮೂಲಕ ನಾಯಕ ವಿರಾಟ್ ಕೊಹ್ಲಿ, ಧೋನಿ ದಾಖಲೆ ಮುರಿದಿದ್ದಾರೆ. ಕೊಹ್ಲಿ ಸೈನ್ಯದ ದಾಖಲೆ ವಿವರ ಇಲ್ಲಿದೆ.

ಕೋಲ್ಕತಾ(ನ.24): ಬಾಂಗ್ಲಾದೇಶ ವಿರುದ್ದದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ ಇನಿಂಗ್ಸ್ ಹಾಗೂ 46 ರನ್ ಗೆಲುವು ಸಾಧಿಸೋ ಮೂಲಕ ಸರಣಿಯನ್ನು 2-0 ಅಂತರದಲ್ಲಿ ವಶಪಡಸಿಕೊಂಡಿದೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ 7ನೇ ಗೆಲುವು ದಾಖಲಿಸಿತು. ಈ ಮೂಲಕ ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆ ಮುರಿಯಿತು.

ಇದನ್ನೂ ಓದಿ: ಇಶಾಂತ್-ಉಮೇಶ್ ಬಿರುಗಾಳಿ, ಪಿಂಕ್ ಬಾಲ್ ಟೆಸ್ಟ್ ಟೀಂ ಇಂಡಿಯಾ ಕೈವಶ.

ವೆಸ್ಟ್ ಇಂಡೀಸ್ ಪ್ರವಾಸದಿಂದ ಕೊಹ್ಲಿ ಸೈನ್ಯದ ಗೆಲುವಿನ ನಾಗಾಲೋಟ ಆರಂಭಗೊಂಡಿತ್ತು. ಇದೀಗ ಬಾಂಗ್ಲಾ ಸರಣಿ ಗೆಲ್ಲೋ ಮೂಲಕ ಸತತ 7 ಟೆಸ್ಟ್ ಪಂದ್ಯ ಗೆದ್ದುಕೊಂಡಿತು. ಈ ಹಿಂದೆ ಧೋನಿ ನಾಯಕತ್ವದ ಟೀಂ ಇಂಡಿಯಾ ಸತತ 6 ಪಂದ್ಯ ಗೆದ್ದು ದಾಖಲೆ ಬರೆದಿತ್ತು. 2013ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ 4 ಹಾಗೂ ವಿಂಡೀಸ್ ವಿರುದ್ದ 2 ಪಂದ್ಯ ಗೆಲ್ಲೋ ಮೂಲಕ ಒಟ್ಟು 6 ಪಂದ್ಯದಲ್ಲಿ ಸತತ ಗೆಲುವು ಸಾಧಿಸಿ ದಾಖಲೆ ಬರೆದಿತ್ತು.

ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಸಲ್ಯೂಟ್!

ಕೊಹ್ಲಿ ಸೈನ್ಯ 7ನೇ ಗೆಲುವು ಕಾಣೋ ಮೂಲಕ ಧೋನಿ ದಾಖಲೆ ಮುರಿಯಿತು. ಇದು ತವರಿನಲ್ಲಿ ಟೀಂ ಇಂಡಿಯಾದ 12ನೇ ಸರಣಿ ಗೆಲುವು. ತವರಿನಲ್ಲಿ ಗರಿಷ್ಠ ಗೆಲುವು ಸಾಧಿಸಿರುವ ತಂಡಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತವರಿನಲ್ಲಿ ಸತತ 10 ಸರಣಿ ಗೆದ್ದಕೊಂಡಿದೆ.

click me!