ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ವಿರಾಟ ರೂಪ..! ಏಷ್ಯಾಕಪ್‌ಗೂ ಮುನ್ನ ಎದುರಾಳಿ ಪಡೆಯಲ್ಲಿ ಢವ ಢವ

By Suvarna News  |  First Published Aug 29, 2023, 1:57 PM IST

2010ರಲ್ಲಿ ಶ್ರೀಲಂಕಾದಲ್ಲಿ ಮೊದಲ ಸಲ ಏಷ್ಯಾಕಪ್ ಆಡಿದ್ದ ವಿರಾಟ್ ಕೊಹ್ಲಿ ಆಡಿದ ನಾಲ್ಕು ಪಂದ್ಯದಲ್ಲೂ ವಿಫಲರಾಗಿ ನಿರಾಸೆ ಅನುಭವಿಸಿದ್ದರು. ಆದ್ರೆ 2012ರಲ್ಲಿ ಬಾಂಗ್ಲಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಮೂರು ಮ್ಯಾಚ್‌ನಲ್ಲೂ ಅಬ್ಬರಿಸಿ ಬೊಬ್ಬಿರಿದಿದ್ರು. ಎರಡು ಶತಕ, ಒಂದು ಅರ್ಧಶತಕ ಬಾರಿಸಿದ್ದರು.


ಬೆಂಗಳೂರು(ಆ.29): ಆಗಸ್ಟ್ 30ರಿಂದ ಏಷ್ಯಾಕಪ್ ಟೂರ್ನಿ ಆರಂಭವಾದ್ರೂ ಟೀಂ ಇಂಡಿಯಾ ತನ್ನ ಮೊದಲ ಪಂದ್ಯ ಆಡೋದು ಸೆಪ್ಟೆಂಬರ್ 2ರಂದು. ಅಂದ್ರೆ ಮುಂದಿನ ಶನಿವಾರ ಭಾರತ-ಪಾಕಿಸ್ತಾನ ಬಿಗ್ ಫೈಟ್ ನಡೆಯಲಿದೆ. ಭಾರತದಲ್ಲೇ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಗೆ ಇದು ಮಹತ್ವದ ಟೂರ್ನಿ. ಒನ್​ಡೇ ವರ್ಲ್ಡ್‌ಕಪ್  ಇರುವುದರಿಂದ ಏಷ್ಯಾಕಪ್ ಸಹ ಒನ್​ಡೇ ಫಾರ್ಮ್ಯಾಟ್‌​ನಲ್ಲಿ ನಡೆಸಲಾಗ್ತಿದೆ. ಏಷ್ಯಾಕಪ್‌ನಲ್ಲೂ ವಿರಾಟ್ ಕೊಹ್ಲಿಯೇ ರನ್ ಕಿಂಗ್.

ಒನ್​ಡೇ ಫಾರ್ಮ್ಯಾಟ್​ ಏಷ್ಯಾಕಪ್​ನಲ್ಲಿ ಕಿಂಗ್ ಕೊಹ್ಲಿ ಆರ್ಭಟ..!

Tap to resize

Latest Videos

2010ರಲ್ಲಿ ಶ್ರೀಲಂಕಾದಲ್ಲಿ ಮೊದಲ ಸಲ ಏಷ್ಯಾಕಪ್ ಆಡಿದ್ದ ವಿರಾಟ್ ಕೊಹ್ಲಿ ಆಡಿದ ನಾಲ್ಕು ಪಂದ್ಯದಲ್ಲೂ ವಿಫಲರಾಗಿ ನಿರಾಸೆ ಅನುಭವಿಸಿದ್ದರು. ಆದ್ರೆ 2012ರಲ್ಲಿ ಬಾಂಗ್ಲಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಮೂರು ಮ್ಯಾಚ್‌ನಲ್ಲೂ ಅಬ್ಬರಿಸಿ ಬೊಬ್ಬಿರಿದಿದ್ರು. ಎರಡು ಶತಕ, ಒಂದು ಅರ್ಧಶತಕ ಬಾರಿಸಿದ್ದರು. ಲಂಕಾ ವಿರುದ್ಧ ಶತಕ, ಬಾಂಗ್ಲಾ ವಿರುದ್ಧ ಅರ್ಧಶತಕ ಹೊಡೆದಿದ್ದ ಕೊಹ್ಲಿ, ಪಾಕಿಸ್ತಾನ ವಿರುದ್ಧ 183 ರನ್ ಬಾರಿಸಿದ್ದರು. ಈಗಲೂ ಈ 183 ರನ್‌ಗಳೇ ಅವರ ಒನ್​​ಡೇಯಲ್ಲಿ ಬೆಸ್ಟ್ ಸ್ಕೋರ್​. 

ಟೀಂ ಇಂಡಿಯಾದ ಎಲ್ಲಾ ಆಟಗಾರರು Yo Yo ಟೆಸ್ಟ್‌ ಪಾಸ್..! ಆದ್ರೆ ಒಬ್ಬ ಆಟಗಾರನ ಮಾಹಿತಿ ರಿವೀಲ್ ಆಗಿಲ್ಲ..!

330 ರನ್ ಟಾರ್ಗೆಟ್ ಬೆನ್ನಟ್ಟಿದ್ದ ಟೀಂ ಇಂಡಿಯಾ ಖಾತೆ ತೆರೆಯುವ ಮುನ್ನವೇ ಗಂಭೀರ್ ವಿಕೆಟ್ ಕಳೆದುಕೊಳ್ತು. ಆ ಬಳಿಕ ಸಚಿನ್ ಜೊತೆಯಾದ ವಿರಾಟ್, ವಿರಾಟ್‌ ರೂಪ ತೋರಿಸಿದ್ರು. ಸಿಕ್ಕ ಸಿಕ್ಕ ಬೌಲರ್‌​ಗಳನ್ನ ಚೆಂಡಾಡಿ, 148 ಬಾಲ್​ನಲ್ಲಿ 22 ಬೌಂಡ್ರಿ, ಒಂದು ಸಿಕ್ಸರ್ ಸಹಿತ 183 ರನ್​​ ಹೊಡೆದಿದ್ದರು. ಭಾರತ ಇನ್ನೂ 7 ಬಾಲ್ ಇರುವಾಗ್ಲೇ ಪಂದ್ಯ ಗೆದ್ದಿತ್ತು. 2014ರ ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದರು.

ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ 10 ಒನ್​​ಡೇ ಇನ್ನಿಂಗ್ಸ್​ನಿಂದ 61.30ರ ಸರಾಸರಿಯಲ್ಲಿ 613 ರನ್ ಹೊಡೆದಿದ್ದಾರೆ. 3 ಶತಕ, ಒಂದು ಅರ್ಧಶತಕ ದಾಖಲಿಸಿದ್ದಾರೆ.

ಟಿ20 ಫಾರ್ಮ್ಯಾಟ್​ ಏಷ್ಯಾಕಪ್‌ನಲ್ಲೂ ಕೊಹ್ಲಿಯೇ ಕಿಂಗ್

2016 ಮತ್ತು 2022ರ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಎರಡು ವರ್ಷ ಏಷ್ಯಾಕಪ್ ಅನ್ನ ಟಿ20 ಫಾರ್ಮ್ಯಾಟ್‌​ನಲ್ಲಿ ಆಡಿಸಲಾಯ್ತು. ಟಿ20 ಮಾದರಿ ಏಷ್ಯಾಕಪ್‌ನಲ್ಲೂ ಕೊಹ್ಲಿ, ಕಿಂಗ್ ಆಗಿ ಮೆರೆದಾಡಿದ್ದಾರೆ. 2016ರಲ್ಲಿ ಕೊಹ್ಲಿ ಬ್ಯಾಟ್ ಸೈಲೆಂಟಾಗಿತ್ತು. ಆದ್ರೆ 2022ರಲ್ಲಿ ಐದು ಪಂದ್ಯದಲ್ಲಿ ಎರಡು ಅರ್ಧಶತಕ ಮತ್ತು ಒಂದು ಶತಕ ಸಿಡಿಸಿದ್ರು. ಅಫ್ಘಾನಿಸ್ತಾನ ವಿರುದ್ಧ ಸೆಂಚುರಿ ಸಿಡಿಸೋ ಮೂಲಕ ಟಿ20ಯಲ್ಲಿ ಚೊಚ್ಚಲ ಶತಕ ಸಿಡಿಸಿದ ಸಾಧನೆಯನ್ನೂ ಮಾಡಿದ್ರು.

Asia Cup 2023: ಏಷ್ಯಾಕಪ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಆಫ್ಘಾನಿಸ್ತಾನ ತಂಡ ಪ್ರಕಟ

ವಿರಾಟ್ ಕೊಹ್ಲಿ ಏಷ್ಯಾಕಪ್​ನಲ್ಲಿ 9 ಟಿ20 ಇನ್ನಿಂಗ್ಸ್​ನಿಂದ 429 ರನ್ ಹೊಡೆದಿದ್ದಾರೆ. 132ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ, ಒಂದು ಶತಕ, 3 ಅರ್ಧಶತಕ ಬಾರಿಸಿದ್ದಾರೆ. ಎರಡು ಮಾದರಿ ಏಷ್ಯಾಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಇನ್ನು ಶ್ರೀಲಂಕಾದಲ್ಲೂ ಕೊಹ್ಲಿ ಟ್ರ್ಯಾಕ್ ರೆಕಾರ್ಡ್​ ಅದ್ಭುತವಾಗಿದೆ. ಹೀಗಾಗಿ ಈ ಸಲದ ಏಕದಿನ ಮಾದರಿಯ ಏಷ್ಯಾಕಪ್​ನಲ್ಲಿ ವಿರಾಟ್, ಟ್ರಂಪ್ ಕಾರ್ಡ್​ ಬ್ಯಾಟರ್​​.

click me!