ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಸದ್ಯ ಸ್ವಿಟ್ಜರ್‌ಲೆಂಡ್‌ನಿಂದ ಶುಭಾಶಯ ಹೇಳಿರುವ ವಿರುಷ್ಕಾ ಜೋಡಿ, ಹೊಸ ವರ್ಷ ಅತ್ಯಂತ ಸ್ಮರಣೀಯವಾಗಿರಲಿ ಎಂದು ಹಾರೈಸಿದ್ದಾರೆ.
ಸ್ವಿಟ್ಜರ್‌ಲೆಂಡ್(ಡಿ.31): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಸ್ವಿಟ್ಜರ್‌ಲೆಂಡ್ ಪ್ರವಾಸದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿದ್ದ ಕೊಹ್ಲಿ ದಂಪತಿ ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸುತ್ತಿದ್ದಾರೆ. ಇದೇ ವೇಳೆ ಹೊಸ ವರ್ಷಕ್ಕೆ ಮಂಚಿತವಾಗಿ ವಿರುಷ್ಕಾ ದಂಪತಿ ಶುಭಕೋರಿದ್ದಾರೆ.
ಇದನ್ನೂ ಓದಿ: ಗುಡ್ ಬೈ 2019: ಒನ್‌ಡೇ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು.
ಹಿಮಚ್ಚಾದಿತ ಪ್ರದೇಶದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಜೊತೆಯಾಗಿ ವಿಡಿಯೋ ಮೂಲಕ ಹೊಸ ವರ್ಷಕ್ಕೆ ಶುಭ ಹಾರೈಸಿದ್ದಾರೆ. ಸುಂದರವಾದ ಹಿಮಚ್ಚಾದಿತ ಪ್ರದೇಶದಲ್ಲಿ ನಾವಿದ್ದೇವೆ. ಹೀಗಾಗಿ ನಾವು ವಿಡಿಯೋ ರೆಕಾರ್ಡ್ ಮೂಲಕ ನಿಮಗೆ ಒಂದು ದಿನ ಮುಂಚಿತವಾಗಿ ಹೊಸ ವರ್ಷ ಶುಭಾಶಯ ತಿಳಿಸುತ್ತಿದ್ದೇವೆ. ನಿಮಗೆಲ್ಲರಿಗೂ 2019ರ ಸ್ಮರಣೀಯವಾಗಿತ್ತು ಅಂದುಕೊಂಡಿದ್ದೇನೆ. ಇದೀಗ 2020ರ ಮತ್ತಷ್ಟು ಸುಂದರವಾಗಿರಲಿ. ನಮ್ಮಿಬರಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ವಿಡಿಯೋ ಮೂಲಕ ಕೊಹ್ಲಿ ಅನುಷ್ಕಾ ಹೇಳಿದ್ದಾರೆ.
Happy new year from us to each and every one of you. God bless you all. 🙏❤️😇
A post shared by Virat Kohli (@virat.kohli) on Dec 31, 2019 at 6:00am PST
ಇದನ್ನೂ ಓದಿ: 2019ರಲ್ಲಿ ವಿರಾಟ್ ಪಡೆ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು? ಇಲ್ಲಿವೆ ಹೆಜ್ಜೆ ಗುರುತುಗಳು
ಸತತ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ಸಿಕ್ಕ ಅಲ್ವ ರಜಾದಿನವನ್ನು ಹಾಯಾಗಿ ಕಳೆಯುತ್ತಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾಗೆ 2 ವಾರಗಳ ವಿಶ್ರಾಂತಿ ಸಿಕ್ಕಿದೆ. ಜನವರಿ 5 ರಿಂದ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಆರಂಭವಾಗುತ್ತಿದೆ.