
ಮೆಲ್ಬರ್ನ್[ಡಿ.31]: 2023ರಿಂದ ವಿಶ್ವ ಚಾಂಪಿಯನ್‌ಶಿಪ್ ವ್ಯಾಪ್ತಿಗೆ ಸೇರುವ ಟೆಸ್ಟ್ ಪಂದ್ಯಗಳನ್ನು 5 ದಿನಗಳ ಬದಲಾಗಿ ಕಡ್ಡಾಯವಾಗಿ 4 ದಿನಗಳ ಕಾಲ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಚಿಂತನೆ ನಡೆಸಿದೆ.
ಪ್ರಮುಖವಾಗಿ, ನಿರಂತರ ಕ್ರಿಕೆಟ್ ಟೂರ್ನಿಗಳನ್ನು ತಡೆಯಲು ಈ ಯೋಜನೆ ರೂಪಿಸಿರುವುದಾಗಿ ಐಸಿಸಿ ತಿಳಿಸಿದೆ. 2017ರ ಅಕ್ಟೋಬರ್‌ನಲ್ಲಿ ಐಸಿಸಿ 4 ದಿನಗಳ ಟೆಸ್ಟ್ ಆಯೋಜನೆಗೆ ಅನುಮತಿ ನೀಡಿತ್ತು. ಆದರೆ ಪಂದ್ಯಕ್ಕೆ ಆತಿಥ್ಯ ವಹಿಸುವ ಕ್ರಿಕೆಟ್ ಮಂಡಳಿಗೆ ನಿರ್ಧರಿಸುವ ಅವಕಾಶ ನೀಡಲಾಗಿತ್ತು.
ಐಸಿಸಿ ರ‍್ಯಾಂಕಿಂಗ್ ಪದ್ಧತಿ ಕಸದ ತೊಟ್ಟಿ: ವಾನ್
ಲಾಭವೇನು?: 2023ರಿಂದ 2031ರ ನಡುವಿನ ಕ್ರಿಕೆಟ್ ಋುತುಗಳಲ್ಲಿ ಟೆಸ್ಟ್ ಪಂದ್ಯಗಳನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವುದರಿಂದ ಹೆಚ್ಚು ಜಾಗತಿಕ ಮಟ್ಟದ ಟೂರ್ನಿಗಳು, ಬಿಸಿಸಿಐ ಬೇಡಿಕೆಯಂತೆ ಮತ್ತಷ್ಟು ದ್ವಿಪಕ್ಷೀಯ ಸರಣಿಗಳ ಆಯೋಜನೆ, ವಿಶ್ವದಾದ್ಯಂತ ನಡೆಯುವ ಟಿ20 ಲೀಗ್‌ಗಳ ಪ್ರಸರಣ ಹಾಗೂ 5 ದಿನಗಳ ಪಂದ್ಯಗಳ ಆಯೋಜನೆಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸದ್ಯ ಚಾಲ್ತಿಯಲ್ಲಿರುವ 2015-2023ರ ಅವಧಿಯಲ್ಲಿ 5 ದಿನಗಳ ಬದಲಿಗೆ 4 ದಿನಗಳ ಟೆಸ್ಟ್ ಪಂದ್ಯಗಳನ್ನು ನಡೆಸಿದ್ದು, 335 ದಿನಗಳು ಉಳಿಯುತ್ತಿದ್ದವು ಎಂದು ಐಸಿಸಿ ಅಂದಾಜಿಸಿದೆ.
ಭಾರತ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಹೊಸ ಯೋಜನೆಯಲ್ಲ: 4 ದಿನಗಳ ಟೆಸ್ಟ್ ಹೊಸ ಯೋಜನೆ ಏನಲ್ಲ. ಈ ವರ್ಷ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು 4 ದಿನಗಳ ಪಂದ್ಯವನ್ನು ಆಡಿದ್ದವು. 2017ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಸಹ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.
ಐಸಿಸಿಯ ಈ ಯೋಜನೆಗೆ ಕ್ರಿಕೆಟ್ ಮಂಡಳಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ. ಕ್ರಿಕೆಟ್ ಆಸ್ಪ್ರೇಲಿಯಾದ ಸಿಇಒ ಕೆವಿನ್ ರಾರ್ಬರ್ಟ್ಸ್, ‘ಖಂಡಿತವಾಗಿಯೂ 4 ದಿನಗಳ ಟೆಸ್ಟ್ ಆಯೋಜನೆಯನ್ನು ನಾವು ಪರಿಗಣಿಸುತ್ತೇವೆ. ಕಳೆದ 5ರಿಂದ 10 ವರ್ಷಗಳಲ್ಲಿ ಟೆಸ್ಟ್ ಪಂದ್ಯಗಳು ಸರಾಸರಿ ಎಷ್ಟು ದಿನಗಳ ನಡೆದಿದೆ ಎನ್ನುವುದನ್ನು ಗಮನಿಸಿದರೆ, 5 ದಿನಗಳನ್ನು 4 ದಿನಗಳಿಗೆ ಇಳಿಸುವುದು ಸೂಕ್ತ ಎನಿಸುತ್ತದೆ’ ಎಂದಿದ್ದಾರೆ.
ಈ ಯೋಜನೆ ಜಾರಿಗೆ ತರುವ ಮೊದಲು ಕೆಲ ಸರಣಿಗಳಲ್ಲಿ ಪ್ರಾಯೋಗಿಕವಾಗಿ 4 ದಿನಗಳ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳ ಬಳಿ ಸಲಹೆ ಕೋರಿದೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.