ದೆಹಲಿ ಕ್ರಿಕೆಟ್‌ ಚುನಾವಣೆ ಸ್ಪರ್ಧಿಸಲು ಗಂಭೀರ್ ಅನರ್ಹ..!

Suvarna News   | Asianet News
Published : Dec 31, 2019, 03:37 PM IST
ದೆಹಲಿ ಕ್ರಿಕೆಟ್‌ ಚುನಾವಣೆ ಸ್ಪರ್ಧಿಸಲು ಗಂಭೀರ್ ಅನರ್ಹ..!

ಸಾರಾಂಶ

ಕ್ರಿಕೆಟ್ ಬ್ಯಾಟ್ ಕೆಳಗಿಟ್ಟು ರಾಜಕೀಯದಾಟದಲ್ಲಿ ಈಜುತ್ತಿರುವ ಗೌತಮ್ ಗಂಭೀರ್ ಇದೀಗ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದರು. ಆದರೆ DDCA ಅಧ್ಯಕ್ಷರಾಗಲೂ ಗಂಭೀರ್ ’ಮಹಾತ್ಯಾಗ’ ಮಾಡಬೇಕಿದೆ. ಏನದು? ಈ ಸ್ಟೋರಿ ಓದಿ.. 

ನವದೆಹಲಿ[ಡಿ.31]: ದೆಹಲಿ ಕ್ರಿಕೆಟ್‌ ಸಂಸ್ಥೆ ಚುನಾವಣಾ ಅಖಾಡ ರಂಗೇರುತ್ತಿದ್ದು, ಸಂಸ್ಥೆ ಪದಾಧಿಕಾರಿಗಳು ಚುನಾವಣೆ ನಡೆಸಲು ಫೆಬ್ರವರಿವರೆಗೂ ಕಾಲಾವಕಾಶ ನೀಡಬೇಕೆಂದು ಸಾರ್ವಜನಿಕ ತನಿಖಾಧಿಕಾರಿ ದೀಪಕ್‌ ವರ್ಮಾ ಅವರನ್ನು ಕೋರಿದ್ದಾರೆ. 

ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ರಾಜಕೀಯ; ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮಾ ರಾಜೀನಾಮೆ!

ಇದೇ ವೇಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇಚ್ಛಿಸಿದ್ದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ಹಿನ್ನಡೆಯಾಗಿದೆ. ನ್ಯಾ. ಲೋಧಾ ಸಮಿತಿ ಶಿಫಾರಸ್ಸಿನ ಪ್ರಕಾರ,  ಗಂಭೀರ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಲ್ಲ ಎಂದು ದೀಪಕ್‌ ವರ್ಮಾ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಕ್ರಿಕೆಟ್‌ ಸಂಸ್ಥೆ ಪ್ರಧಾನ ಕಾರ್ಯದರ್ಶಿ ವಿನೋದ್‌ ತಿಹಾರ, ‘ದೆಹಲಿ ಕ್ರಿಕೆಟ್‌ಗಾಗಿ ಸೇವೆ ಸಲ್ಲಿಸಲು ಗಂಭೀರ್‌ಗೆ ಮುಕ್ತ ಅವಕಾಶವಿದೆ. ಆದರೆ ಅದಕ್ಕಾಗಿ ಅವರು ತಮ್ಮ ಸಂಸದ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ’ ಎಂದಿದ್ದಾರೆ.

ಡೆಲ್ಲಿ ಕ್ರಿಕೆಟ್ ವಾರ್ಷಿಕ ಸಭೆಯಲ್ಲಿ ಬಡಿದಾಟ; ಬ್ಯಾನ್‌ಗೆ ಆಗ್ರಹಿಸಿದ ಗಂಭೀರ್!

ಕಳೆದ ತಿಂಗಳಷ್ಟೇ ಡಿಡಿಸಿಎ ಅಧ್ಯಕ್ಷ ಸ್ಥಾನದಿಂದ ರಜತ್ ಶರ್ಮಾ ಕೆಳಗಿಳಿದಿದ್ದರು. 2018ರ ಜುಲೈನಲ್ಲಿ ನಡೆದ ಡಿಡಿಸಿಎ ಚುನಾವಣೆಯಲ್ಲಿ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ ಲಾಲ್ ಅವರನ್ನು ಮಣಿಸಿ ರಜತ್ ಶರ್ಮಾ ಅಧ್ಯಕ್ಷ ಸ್ಥಾನಕ್ಕೇರಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!